ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಮತ್ತೊಂದು ವಿಚಿತ್ರ ತೀರ್ಪು ಮುನ್ನೆಲೆಗೆ ಬಂದಿದೆ. ದೇಶದ ಮಾಜಿ ನಾಯಕ ಕಿಮ್ ಜಾಂಗ್-ಇಲ್ ಅವರ 10 ನೇ ಪುಣ್ಯತಿಥಿಯ ಸಂದರ್ಭದಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸುಗ್ರೀವಾಜ್ಞೆ ಹೊರಡಿಸಿದ್ದು, 11 ದಿನಗಳ ಕಾಲ ದೇಶದಲ್ಲಿ ಯಾರೂ ಸಂತೋಷವನ್ನು ಆಚರಿಸುವಂತಿಲ್ಲ ಎಂದು ಹೇಳಿದ್ದಾರೆ. ಹಾಗಾ ಗಿ ರಾಷ್ಟ್ರೀಯ ಶೋಕಾಚರಣೆಯ ಸಮಯದಲ್ಲಿ ಜನರು ನಗುವುದು ಮತ್ತು ಕುಡಿಯುವುದನ್ನು ನಿಷೇಧಿಸಲಾಗಿದೆ.
ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆದೇಶದ ಅಡಿಯಲ್ಲಿ, ಉತ್ತರ ಕೊರಿಯಾದ ಜನರು ಡಿಸೆಂಬರ್ 17 ರಂದು ದಿನಸಿ ವಸ್ತುಗಳನ್ನು ಖರೀದಿಸಲು ಸಹ ಅನುಮತಿಯಿಲ್ಲ. ಪಾಲಿಸದವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. ಕಳೆದ ವರ್ಷವೂ ರಾಷ್ಟ್ರೀಯ ಶೋಕಾಚರಣೆಯ ಸಂದರ್ಭದಲ್ಲಿ, ಮದ್ಯಪಾನ ಅಥವಾ ಅಮಲು ಪದಾರ್ಥ ಸೇವಿಸಿದ ಜನರನ್ನು ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿವೆ.