ವಿಶೇಷವೆಂದರೆ ಅಯಾನ್ 8ನೇ ತರಗತಿವರೆಗೆ ಮನೆಯಲ್ಲಿಯೇ ಓದಿದ್ದಾನೆ. ಆತನ ತಂದೆ ಮನೋಜ್ ಗುಪ್ತಾ ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಅಗಿದ್ದಾರೆ. ಅವರು ತಮ್ಮ ಮಗನನ್ನು ಒಂದನೇ ತರಗತಿಗೆ ಮಾತ್ರ ಶಾಲೆಗೆ ಕಳುಹಿಸಿದ್ದರು. ಶಾಲೆಯ ಪರಿಸರದ ಬಗ್ಗೆ ಇಷ್ಟವಾಗದ ಕಾರಣ ಮನೆಯಲ್ಲಿಯೇ ಮಗನನ್ನು ಓದಿಸಲು ನಿರ್ಧರಿಸಿದ್ದಾರೆ. ಅವರು ಶಿಕ್ಷಕರು, ಯೂಟ್ಯೂಬ್ ಹಾಗೂ ವಿವಿಧ ಅಪ್ಲಿಕೇಶನ್ ಮೂಲಕ ಮನೆಯಲ್ಲಿಯೇ ಮಗನಿಗೆ 8ನೇ ತರಗತಿವರೆಗೆ ಪಾಠ ಹೇಳಿಕೊಟ್ಟಿದ್ದಾರೆ.