No Lockdown: ಭಾರತದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ, ಯಾಕೆಂದ್ರೆ ಭಾರತೀಯರು ಸ್ಟ್ರಾಂಗ್!
2022 ರಲ್ಲಿ, ಭಾರತವು ಎರಡು ಬಿಲಿಯನ್ ವ್ಯಾಕ್ಸಿನೇಷನ್ ಡೋಸ್ಗಳನ್ನು ಖಾಲಿ ಮಾಡಿದೆ. ಗುರುವಾರ ಭಾರತದಲ್ಲಿ 185 ಹೊಸ ಕರೋನವೈರಸ್ ಪ್ರಕರಣಗಳನ್ನು ದೃಢಪಟ್ಟಿದೆ. ಸರ್ಕಾರವು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಸಾಧ್ಯತೆಯಿದೆ.
ಎಲ್ಲೆಡೆ ಕೊರೊನಾ ಸಾಂಕ್ರಾಮಿಕ ಮತ್ತೆ ಕಾಣಿಸಿಕೊಳ್ಳುತ್ತಿದ್ದು ಜನರು ಮತ್ತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ ಭಾರತದಲ್ಲಿ ಇದರ ತೀವೃತೆ ಹೇಗಿದೆ ಎಂಬುದರ ಕುರಿತು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರು ಏನು ಹೇಳಿದ್ದಾರೆ ನೋಡಿ.
2/ 8
COVID-19 ಮತ್ತೊಮ್ಮೆ ಚೀನಾದಲ್ಲಿ ತನ್ನ ಫ್ರಭಾವವನ್ನು ಪ್ರಾರಂಭಿಸಿದೆ. ಭಾರತದಲ್ಲಿ ಲಾಕ್ಡೌನ್ನ ಊಹಾಪೋಹಗಳು ಕೇಳಿಬರುತ್ತಿದೆ. ಮತ್ತೆ ವೈರಸ್ ಹೊರಹೊಮ್ಮಲು ಪ್ರಾರಂಭಿಸಿವೆ. "BF.7" ಎಂಬ ಹೊಸ ಕೋವಿಡ್ ಸಬ್ವೇರಿಯಂಟ್ನ ಕೆಲವು ಪ್ರಕರಣಗಳು ದೇಶದ ವಿವಿಧ ಭಾಗಗಳಲ್ಲಿ ದಾಖಲಾಗಿವೆ.
3/ 8
ಈ ಎಲ್ಲದರ ನಡುವೆ ಭಾರತೀಯ ವೈದ್ಯಕೀಯ ಸಂಘದ ಡಾ.ಅನಿಲ್ ಗೋಯಲ್ ಅವರು ಲಾಕ್ಡೌನ್ ಹೇರಿಕೆಯ ಊಹಾಪೋಹಗಳನ್ನು ತಳ್ಳಿಹಾಕುವ ಪ್ರಮುಖ ಹೇಳಿಕೆಯನ್ನು ನೀಡಿದ್ದಾರೆ.
4/ 8
ಸಂದರ್ಶನವೊಂದರಲ್ಲಿ ಭಾರತೀಯ ಜನಸಂಖ್ಯೆಯ 95% ರಷ್ಟು ಜನರು ಲಸಿಕೆ ಹಾಕಿಸಿಕೊಂಡಿರುವುದರಿಂದ, ದೇಶವು ಯಾವುದೇ ಲಾಕ್ಡೌನ್ ಅನ್ನು ಎದುರಿಸುವುದಿಲ್ಲ ಎಂದು ಅನಿಲ್ ಹೇಳಿದ್ದಾರೆ. ನಮ್ಮ ದೇಶದವರ ರೋಗನಿರೋಧಕ ಶಕ್ತಿ ಚೀನಿಯರಿಗಿಂತ ಪ್ರಬಲವಾಗಿದೆ ಎಂದು ಡಾ ಗೋಯಲ್ ಹೇಳಿದರು.
5/ 8
ವರದಿಗಳ ಪ್ರಕಾರ, BF.7 ರೂಪಾಂತರವು ಚೀನಾ, ಜಪಾನ್, US ಮತ್ತು ಬ್ರೆಜಿಲ್ನಲ್ಲಿ ತುಂಬಾ ಪ್ರಭಾವ ಬೀರುತ್ತಿದೆ. ಭಾರತದಲ್ಲಿ, ಗುಜರಾತ್ನಲ್ಲಿ 1 ಮತ್ತು ಒಡಿಶಾದಲ್ಲಿ 2 ಒಟ್ಟು ಸಬ್ವೇರಿಯಂಟ್ನ ಮೂರು ಪ್ರಕರಣಗಳು ಕಂಡುಬಂದಿವೆ.
6/ 8
ಗುಜರಾತ್ನಲ್ಲಿ ಸಾವು ಸಂಭವಿಸಿದ್ದು ಇದರೊಂದಿಗೆ, ಮತ್ತೊಂದು ಕೋವಿಡ್ ಅಲೆ ಮತ್ತು ಲಾಕ್ಡೌನ್ನ ಊಹಾಪೋಹಗಳು ಭಾರತ ಮತ್ತು ಪ್ರಪಂಚದಾದ್ಯಂತ ಕಾಳ್ಗಿಚ್ಚಿನಂತೆ ಹರಡಿವೆ.
7/ 8
ಪ್ರಪಂಚದಾದ್ಯಂತ ಮತ್ತೊಮ್ಮೆ ಎದುರಾಗುವ ಬೆದರಿಕೆಯ ವಿರುದ್ಧ ವೈದ್ಯಕೀಯ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿವೆ. ಲಾಕ್ಡೌನ್ ಕುರಿತು ಮಾತನಾಡಿದ ಡಾ ಗೋಯಲ್ , ಭಾರತವು ಕೋವಿಡ್ ಬೇಸಿಕ್ಸ್-ಪರೀಕ್ಷೆ, ಚಿಕಿತ್ಸೆ ಮತ್ತು ಪತ್ತೆಹಚ್ಚುವಿಕೆ ಕ್ರಮದಲ್ಲಿ ಬದಲಾವಣೆ ಹೊಂದಬೇಕು ಎಂದು ಹೇಳಿದ್ದಾರೆ.
8/ 8
2022 ರಲ್ಲಿ, ಭಾರತವು ಎರಡು ಬಿಲಿಯನ್ ವ್ಯಾಕ್ಸಿನೇಷನ್ ಡೋಸ್ಗಳನ್ನು ಖಾಲಿ ಮಾಡಿದೆ. ಗುರುವಾರ ಭಾರತದಲ್ಲಿ 185 ಹೊಸ ಕರೋನವೈರಸ್ ಪ್ರಕರಣಗಳನ್ನು ದೃಢಪಟ್ಟಿದೆ. ಸರ್ಕಾರವು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಸಾಧ್ಯತೆಯಿದೆ.