PHOTOS: ರಿಲಯನ್ಸ್ ಸಂಸ್ಥೆಯಿಂದ ದೇಶದ ಸಶಸ್ತ್ರ ಪಡೆಗೆ ವಿಶೇಷ ಗೌರವ
ಮಂಗಳವಾರ ರಿಲಯನ್ಸ್ ಇಂಡಸ್ಟ್ರೀಸ್ ವತಿಯಿಂದ ಮುಂಬೈ ನಗರದ ಧೀರೂಭಾಯಿ ಅಂಬಾನಿ ಚೌಕದಲ್ಲಿ ದೇಶ ಸೈನಿಕರಿಗೆ ಹಾಗೂ ಪೊಲೀಸರ ಕುಟುಂಬಗಳಿಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಇದರಲ್ಲಿ 7 ಸಾವಿರಕ್ಕೂ ಹೆಚ್ಚಿನ ಮಂದಿ ಪಾಲ್ಗೊಂಡಿದ್ದು, ಈ ಮೂಲಕ ರಿಲಯನ್ಸ್ ಪರಿವಾರ ದೇಶದ ಸೈನಿಕರಿಗೆ ಹಾಗೂ ಪೊಲೀಸರಿಗೆ ಗೌರವ ಸಲ್ಲಿಸಿದೆ. ಈ ಕಾರ್ಯಕ್ರಮದಲ್ಲಿ ಅದ್ಭುತವಾದ ಕಾರಂಜಿ ನೃತ್ಯ , ಏರಿಯಲ್ ಡ್ಯಾನ್ಸ್ ಆ್ಯಕ್ಟ್ ಮತ್ತು ಜಲ ಕಾರಂಜಿಗಳೊಂದಿಗೆ ನೀರಿನ ಸಮ್ಮೋಹನಗೊಳಿಸುವ ವರ್ಣರಂಜಿತ ಚಲನೆಗಳನ್ನು ಸಂಯೋಜಿಸಲಾಗಿತ್ತು. ಆಕಾಶ್ ಅಂಬಾನಿ-ಶ್ಲೋಕಾ ವಿವಾಹ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದ ರಾಸ್ಲೀಲಾ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು. ಇದರಲ್ಲಿ ದೇಶ ವಿದೇಶದ 150ಕ್ಕಿಂತ ಕಲಾವಿದರು ಭಾಗವಹಿಸಿದ್ದು, ಭಗವಾನ್ ಕೃಷ್ಣ, ರಾಧೆ ಮತ್ತು ವೃಂದಾವನ ಗೋಪಿಕಾರ ರಾಸ್ಲೀಲಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. 'ದೇಶ ಭದ್ರತೆಗಾಗಿ ಹಗಲಿರುಳು ದುಡಿಯುತ್ತಿರುವ ಹೆಮ್ಮೆಯ ಸಶಸ್ತ್ರ ಪಡೆಯೊಂದಿಗೆ ನಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಿದ್ದೇವೆ. ಧೀರೂಭಾಯಿ ಅಂಬಾನಿ ಸ್ಕ್ವೇರ್ನಲ್ಲಿರುವ ವಿಶೇಷ ಸಂಗೀತ ಕಾರಂಜಿ ಪ್ರದರ್ಶನ ಕಾರ್ಯಕ್ರಮದ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದೇವೆ' ಎಂದು ನೀತಾ ಅಂಬಾನಿ ತಿಳಿಸಿದ್ದಾರೆ.