Nirav Modi: ಬ್ರಿಟನ್‌ ಕೋರ್ಟ್‌ಗೆ ಪಾವತಿಸಲು ಹಣವಿಲ್ಲ, ಅದಕ್ಕಾಗಿ ಸಾಲ ಮಾಡಿದ್ದೇನೆ ಎಂದ ನೀರವ್ ಮೋದಿ

ಲಂಡನ್: ಭಾರತದ ಬ್ಯಾಂಕ್‌ಗಳಿಂದ ಕೋಟ್ಯಂತರ ರೂಪಾಯಿ ಸಾಲ ಮಾಡಿ ಮರುಪಾವತಿಸಲಾಗದೆ ವಿದೇಶಕ್ಕೆ ಪರಾರಿಯಾಗಿದ್ದ ಗುಜರಾತ್ ಮೂಲದ ವಜ್ರದ ವ್ಯಾಪಾರಿ ನೀರವ್ ಮೋದಿ, ಈಗ ತನ್ನ ಬಳಿ ಕಾನೂನು ವೆಚ್ಚಗಳನ್ನು ನಿರ್ವಹಿಸಲು ಹಣವಿಲ್ಲ ಎಂದು ಹೇಳಿಕೊಂಡಿದ್ದಾರೆ.

First published:

 • 17

  Nirav Modi: ಬ್ರಿಟನ್‌ ಕೋರ್ಟ್‌ಗೆ ಪಾವತಿಸಲು ಹಣವಿಲ್ಲ, ಅದಕ್ಕಾಗಿ ಸಾಲ ಮಾಡಿದ್ದೇನೆ ಎಂದ ನೀರವ್ ಮೋದಿ

  ಹೌದು.. ಬ್ಯಾಂಕ್‌ ಸಾಲ ಮರು ಪಾವತಿ ಮಾಡಲಾಗದೆ ಪಲಾಯನಗೈದಿರುವ ವಜ್ರದ ಉದ್ಯಮಿ ನೀರವ್ ಮೋದಿ, ಬ್ರಿಟನ್‌ ನ್ಯಾಯಾಲಯದ ಕಾನೂನು ವೆಚ್ಚಗಳನ್ನು ಭರಿಸಲು ನನ್ನ ಬಳಿ ಹಣವಿಲ್ಲ, ಅದಕ್ಕಾಗಿ ಸಾಲ ಮಾಡಿದ್ದೇನೆ ಎಂದು ಹೇಳಿದ್ದಾರೆ.

  MORE
  GALLERIES

 • 27

  Nirav Modi: ಬ್ರಿಟನ್‌ ಕೋರ್ಟ್‌ಗೆ ಪಾವತಿಸಲು ಹಣವಿಲ್ಲ, ಅದಕ್ಕಾಗಿ ಸಾಲ ಮಾಡಿದ್ದೇನೆ ಎಂದ ನೀರವ್ ಮೋದಿ

  ಉದ್ಯಮಿ ನೀರವ್ ಮೋದಿ ಅವರ ಹಸ್ತಾಂತರದ ಕುರಿತ ಮೇಲ್ಮನವಿ ಪ್ರಕ್ರಿಯೆಗಳ ಕಾನೂನು ವೆಚ್ಚಗಳು ಹಾಗೂ ದಂಡದ ಮೊತ್ತವಾಗಿ 150,247 ಪೌಂಡ್‌ಗಳನ್ನು ಬ್ರಿಟನ್‌ನಲ್ಲಿ ಪಾವತಿಸಬೇಕಾಗಿದೆ.

  MORE
  GALLERIES

 • 37

  Nirav Modi: ಬ್ರಿಟನ್‌ ಕೋರ್ಟ್‌ಗೆ ಪಾವತಿಸಲು ಹಣವಿಲ್ಲ, ಅದಕ್ಕಾಗಿ ಸಾಲ ಮಾಡಿದ್ದೇನೆ ಎಂದ ನೀರವ್ ಮೋದಿ

  ನ್ಯಾಯಾಲಯದ ದಂಡದ ಕಾರ್ಯವಿಧಾನದ ವಿಚಾರಣೆಯಲ್ಲಿ, ಆರು ತಿಂಗಳ ಅವಧಿಯಲ್ಲಿ ನಡೆಯುವ ಮರುಪರಿಶೀಲನಾ ವಿಚಾರಣೆಯ ಮೊದಲು ತಿಂಗಳಿಗೆ 10,000 ಪೌಂಡ್‌ಗಳನ್ನು ಪಾವತಿಸಲು ನೀರವ್ ಮೋದಿ ಅನುಮತಿ ಕೇಳಿದ್ದರು.

  MORE
  GALLERIES

 • 47

  Nirav Modi: ಬ್ರಿಟನ್‌ ಕೋರ್ಟ್‌ಗೆ ಪಾವತಿಸಲು ಹಣವಿಲ್ಲ, ಅದಕ್ಕಾಗಿ ಸಾಲ ಮಾಡಿದ್ದೇನೆ ಎಂದ ನೀರವ್ ಮೋದಿ

  2 ಬಿಲಿಯನ್ ಡಾಲರ್ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ಹಗರಣದ ಪ್ರಕರಣದಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗುವುದರ ವಿರುದ್ಧದ ಕಾನೂನು ಹೋರಾಟದಲ್ಲಿ ನೀರವ್ ಮೋದಿ ಪರಾಭವಗೊಂಡಿದ್ದರು.

  MORE
  GALLERIES

 • 57

  Nirav Modi: ಬ್ರಿಟನ್‌ ಕೋರ್ಟ್‌ಗೆ ಪಾವತಿಸಲು ಹಣವಿಲ್ಲ, ಅದಕ್ಕಾಗಿ ಸಾಲ ಮಾಡಿದ್ದೇನೆ ಎಂದ ನೀರವ್ ಮೋದಿ

  ಸದ್ಯ ನೀರವ್ ಮೋದಿ ನೈಋತ್ಯ ಲಂಡನ್‌ನಲ್ಲಿ ಇರುವ ವಾಂಡ್ಸ್‌ವರ್ತ್ ಜೈಲಿನಲ್ಲಿದ್ದಾರೆ. ಹೀಗಾಗಿ ಬ್ರಿಟನ್‌ ನ್ಯಾಯಾಲಯದ ಕಾನೂನು ವೆಚ್ಚಗಳನ್ನು ಭರಿಸಲು ನನ್ನ ಬಳಿ ಹಣವಿಲ್ಲ ಎಂದು ಮೋದಿ ಹೇಳಿದ್ದಾರೆ.

  MORE
  GALLERIES

 • 67

  Nirav Modi: ಬ್ರಿಟನ್‌ ಕೋರ್ಟ್‌ಗೆ ಪಾವತಿಸಲು ಹಣವಿಲ್ಲ, ಅದಕ್ಕಾಗಿ ಸಾಲ ಮಾಡಿದ್ದೇನೆ ಎಂದ ನೀರವ್ ಮೋದಿ

  ಕಾನೂನು ವೆಚ್ಚ, ದಂಡಗಳನ್ನು ಪಾವತಿಸದೇ ಇದ್ದ ಪ್ರಕರಣದಲ್ಲಿ ಪ್ರಕರಣದ ವಿಚಾರಣೆಗಾಗಿ ಬಾರ್ಕಿಂಗ್‌ಸೈಡ್ ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ವೀಡಿಯೋ ಲಿಂಕ್ ಮೂಲಕ ಹಾಜರಾಗಿದ್ದರು

  MORE
  GALLERIES

 • 77

  Nirav Modi: ಬ್ರಿಟನ್‌ ಕೋರ್ಟ್‌ಗೆ ಪಾವತಿಸಲು ಹಣವಿಲ್ಲ, ಅದಕ್ಕಾಗಿ ಸಾಲ ಮಾಡಿದ್ದೇನೆ ಎಂದ ನೀರವ್ ಮೋದಿ

  ಈ ವೇಳೆ ಕಾನೂನು ವೆಚ್ಚ ಭರಿಸಲು ಹಣವನ್ನು ಹೇಗೆ ಹೊಂದಿಸುತ್ತೀರಿ ಎಂದು ನ್ಯಾಯಾಲಯ ಪ್ರಶ್ನಿಸಿದ್ದು, ಅದಕ್ಕುತ್ತರಿಸಿದ ಮೋದಿ, ಭಾರತದಲ್ಲಿ ತನ್ನ ಆಸ್ತಿಯನ್ನು ಜಪ್ತಿ ಮಾಡಿರುವುದರಿಂದ ಸಾಕಷ್ಟು ಹಣ ನನ್ನ ಬಳಿ ಇಲ್ಲ, ಹೀಗಾಗಿ ಸಾಲ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

  MORE
  GALLERIES