Rajasthan: ಭಾರತ- ಪಾಕ್​ ಗಡಿ ಭಾಗದ ಪೊದೆಯಲ್ಲಿ 4 ದಿನದ ನವಜಾತ ಶಿಶು ಪತ್ತೆ, ಇರುವೆಗಳ ದಾಳಿಗೆ ಮಗು ತತ್ತರ!

ಅಮ್ಮನ ಮಡಿಲಲ್ಲಿ, ಅಪ್ಪನ ನೆರಳಲ್ಲಿ ನರಮ್ಮದಿಯಿಂದ ನಿದ್ರಿಸಬೇಕಿದ್ದ ನಾಲ್ಕು ದಿನದ ಮುಗ್ಧ ಕಂದ ಭಾರತ ಹಾಗೂ ಪಾಕಿಸ್ತಾನದ ಗಡಿ ಭಾಗದಲ್ಲಿ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪುಟ್ಟ ಮಗುವಿನ ದೇಹ ಅಸಂಖ್ಯಾತ ಇರುವೆಗಳು ಮತ್ತು ಕೀಟಗಳಿಂದ ಆವರಿಸಿಕೊಂಡಿದೆ. ಸದ್ಯ ಪೊದೆಗಳಲ್ಲಿ ಪತ್ತೆಯಾದ ಈ ಅಮಾಯಕ ಕಂದನನ್ನು ರಕ್ಷಿಸಲು ವೈದ್ಯರ ತಂಡ ಹರಸಾಹಸ ಪಡುತ್ತಿದೆ. ಈ ಪ್ರಕರಣವು ಇಂಡೋ-ಪಾಕ್ ಗಡಿಯ ಪಕ್ಕದಲ್ಲಿರುವ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಸೆಡ್ವಾ ಉಪವಿಭಾಗದ ಪ್ರದೇಶದ್ದಾಗಿದೆ.

First published: