ವಂದೇ ಭಾರತ್ ಭಾರತದ ರೈಲು ಪ್ರಯಾಣಿಕರಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ ರೈಲು. ದೇಶದ ವಿವಿಧ ಭಾಗಗಳಲ್ಲಿ ವಂದೇ ಭಾರತ್ ರೈಲನ್ನು ಆರಂಭಿಸಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ. (ಸಾಂದರ್ಭಿಕ ಚಿತ್ರ)
2/ 8
ಇದೀಗ ಹೊಸ ವಂದೇ ಭಾರತ್ ರೈಲಿನ ಬಗ್ಗೆ ಸುದ್ದಿ ಹೊರಬಿದ್ದಿದೆ. ದೇಶದ ಎರಡು ಪ್ರಮುಖ ನಗರಗಳ ನಡುವೆ ಈ ವಂದೇ ಭಾರತ್ ರೈಲು ಸಂಚರಿಸಲಿದೆ. (ಸಾಂದರ್ಭಿಕ ಚಿತ್ರ)
3/ 8
ಮಹಾರಾಷ್ಟ್ರದ ನಾಗ್ಪುರದಿಂದ ಬಿಲಾಸ್ಪುರಕ್ಕೆ ದೇಶದ 6ನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಒದಗಿಸಲಿದೆ ಎಂಬ ವರದಿಗಳು ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)
4/ 8
ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ (SECR) ನಾಗ್ಪುರದಿಂದ ನಗರದಿಂದ ಬಿಲಾಸ್ಪುರಕ್ಕೆ ವಂದೇ ಭಾರತ್ ಹೈಟೆಕ್ ರೈಲನ್ನು ಆರಂಭಿಸಿದೆ (ಸಾಂದರ್ಭಿಕ ಚಿತ್ರ)
5/ 8
ನಾಗ್ಪುರ-ಬಿಲಾಸ್ಪುರ ವಂದೇ ಭಾರತ್ ಎಕ್ಸ್ಪ್ರೆಸ್ ಶನಿವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲೂ ಸಂಚರಿಸಲಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)
6/ 8
ಈ ಮಾರ್ಗದ ವಂದೇ ಭಾರತ್ ರೈಲಿಗೆ ರಾಯ್ಪುರ, ದುರ್ಗ್ ಮತ್ತು ಗೊಂಡಿಯಾದಲ್ಲಿ ಮಾತ್ರ ನಿಲುಗಡೆ ಇರಲಿದೆ. (ಸಾಂದರ್ಭಿಕ ಚಿತ್ರ)
7/ 8
ಈ ಹೊಸ ವಂದೇ ಭಾರತ್ ರೈಲು ಬಿಲಾಸ್ಪುರದಿಂದ ಬೆಳಗ್ಗೆ 6:45ಕ್ಕೆ ಹೊರಟು ಮಧ್ಯಾಹ್ನ 12:15ಕ್ಕೆ ನಾಗ್ಪುರವನ್ನು ತಲುಪಲಿದೆ. ನಾಗ್ಪುರದಿಂದ ಮಧ್ಯಾಹ್ನ 2:05ಕ್ಕೆ ಹೊರಟು ಬಿಲಾಸ್ಪುರಕ್ಕೆ ರಾತ್ರಿ 7:35ಕ್ಕೆ ತಲುಪಲಿದೆ. (ಸಾಂದರ್ಭಿಕ ಚಿತ್ರ)
8/ 8
ಈ ಹೊಸ ವಂದೇ ಭಾರತ್ ರೈಲು ಬಿಲಾಸ್ಪುರದಿಂದ ಬೆಳಗ್ಗೆ 6:45ಕ್ಕೆ ಹೊರಟು ಮಧ್ಯಾಹ್ನ 12:15ಕ್ಕೆ ನಾಗ್ಪುರವನ್ನು ತಲುಪಲಿದೆ. ನಾಗ್ಪುರದಿಂದ ಮಧ್ಯಾಹ್ನ 2:05ಕ್ಕೆ ಹೊರಟು ಬಿಲಾಸ್ಪುರಕ್ಕೆ ರಾತ್ರಿ 7:35ಕ್ಕೆ ತಲುಪಲಿದೆ. (ಸಾಂದರ್ಭಿಕ ಚಿತ್ರ)