ಜೂನ್ ಅಂತ್ಯದ ವೇಳೆಗೆ ಇನ್ನೂ 5 ಹೊಸ ವಂದೇ ಭಾರತ್ ರೈಲುಗಳು ಸಂಚಾರ ಆರಂಭಿಸಲಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಮೇ ತಿಂಗಳೇ ಎರಡು ರೈಲುಗಳು ಉದ್ಘಾಟನೆಯಾಗಲಿದೆ. ಮೇ 18ರಂದು ದೇಶದ 16ನೇ ವಂದೇ ಭಾರತ್ ರೈಲಿಗೆ ಪಿಎಂ ಮೋದಿ ಚಾಲನೆ ನೀಡಲಿದ್ದಾರೆ. ಒಡಿಶಾದ ಭಗವಾನ್ ಜಗನ್ನಾಥ ಪುರಿಯ ದೇವಸ್ಥಾನ ಮತ್ತು ಪಶ್ಚಿಮ ಬಂಗಾಳದ ಕೋಲ್ಕತ್ತಾದ ಕಾಳಿಜಿ ದೇವಸ್ಥಾನಕ್ಕೆ ಭಕ್ತರಿಗೆ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ನೆರವಾಗಲಿದೆ.
ಬಹುಶಃ ಮೇ 18 ರಂದು ಪುರಿ-ಹೌರಾ ನಡುವಿನ ವಂದೇ ಭಾರತ್ ರೈಲಿನ ಪಿಎಂ ಮೋದಿ ಚಾಲನೆ ನೀಡಲಿದ್ದಾರೆ. ಇದರ ನಂತರ ಇದೇ ತಿಂಗಳು ಕೊನೆಯ ವಾರದಲ್ಲಿ ನ್ಯೂ ಜಲ್ಪೈಗುರಿ-ಗುವಾಹಟಿ ರೈಲಿಗೆ ಚಾಲನೆ ಸಿಗಲಿದೆ. ಇದು ಈಶಾನ್ಯ ಭಾರತದ ಮೊದಲ ವಂದೇ ಭಾರತ್ ರೈಲು ಆಗಿರುತ್ತದೆ. ಜೂನ್ನಲ್ಲಿ ನಂತರ ಪಾಟ್ನಾ-ರಾಂಚಿ ಮಾರ್ಗದಲ್ಲಿ ಮತ್ತೊಂದು ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ನಿರೀಕ್ಷೆಯಿದೆ.