Crime Report: 2022ರಲ್ಲಿ ಮಹಿಳೆಯರ ವಿರುದ್ದ 31,000 ಅಪರಾಧ ಪ್ರಕರಣಗಳು ದಾಖಲು; ರಾಷ್ಟ್ರೀಯ ಮಹಿಳಾ ಆಯೋಗ
2022 ರಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದಂತೆ ಸುಮಾರು 31,000 ದೂರುಗಳನ್ನು ಸ್ವೀಕರಿಸಲಾಗಿದ್ದು, 2014ರಲ್ಲಿ ಇದಕ್ಕಿಂತಲೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿತ್ತು ಎಂದು ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ.
2022 ರಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದಂತೆ ಸುಮಾರು 31,000 ದೂರುಗಳನ್ನು ಸ್ವೀಕರಿಸಲಾಗಿದ್ದು, 2014ರಲ್ಲಿ ಇದಕ್ಕಿಂತಲೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿತ್ತು ಎಂದು ರಾಷ್ಟ್ರೀಯ ಮಹಿಳಾ ಆಯೋಗ (NCW) ತಿಳಿಸಿದೆ.
2/ 7
2021 ರಲ್ಲಿ 30,864 ದೂರುಗಳನ್ನು ಸ್ವೀಕರಿಸಿದ್ದರೆ, 2022 ರಲ್ಲಿ ಇದಕ್ಕಿಂತ ಸ್ವಲ್ಪ ಹೆಚ್ಚು ಅಂದರೆ 30,957 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.
3/ 7
ಕಳೆದ ವರ್ಷ ದಾಖಲಾಗಿರುವ 30,957 ದೂರುಗಳಲ್ಲಿ, ಗರಿಷ್ಠ 9,710 ಪ್ರಕರಣಗಳು ಮಹಿಳೆಯ ಘನತೆಯಿಂದ ಬದುಕುವ ಹಕ್ಕಿಗೆ ಭಾವನಾತ್ಮಕವಾಗಿ ಧಕ್ಕೆಗೆ ಸಂಬಂಧಿಸಿದೆ.
4/ 7
ನಂತರ ಗೃಹ ಹಿಂಸೆಗೆ ಸಂಬಂಧಿಸಿದ 6,970 ಮತ್ತು ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದವು 4,600 ಪ್ರಕರಣಗಳು ದಾಖಲಾಗಿವೆ ಎಂದು ಸುದ್ದಿಸಂಸ್ಥೆ ಪಿಟಿಐ ಮೂಲಕ ಮಾಹಿತಿ ದೊರೆತಿದೆ.
5/ 7
ಶೇ.54.5ರಷ್ಟು (16,872) ದೂರುಗಳು ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಿಂದ ಬಂದಿವೆ. ದೆಹಲಿಯಲ್ಲಿ 3,004 ದೂರುಗಳು ದಾಖಲಾಗಿದೆ. ಮಹಾರಾಷ್ಟ್ರದಲ್ಲಿ (1,381), ಬಿಹಾರದಲ್ಲಿ (1,368) ಮತ್ತು ನಂತರದಲ್ಲಿ ಸ್ಥಾನದಲ್ಲಿ ಹರಿಯಾಣ (1,362) ಇದೆ.
6/ 7
ಅಂಕಿಅಂಶಗಳ ಪ್ರಕಾರ, ಘನತೆಯಿಂದ ಬದುಕುವ ಹಕ್ಕು ಮತ್ತು ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ ಹೆಚ್ಚಿನ ಸಂಖ್ಯೆಯ ದೂರುಗಳು ಉತ್ತರ ಪ್ರದೇಶದಿಂದ ಬಂದಿವೆ. 2022 ರಲ್ಲಿ ಎನ್ಸಿಡಬ್ಲ್ಯು ಸ್ವೀಕರಿಸಿದ ದೂರುಗಳ ಸಂಖ್ಯೆಯು 2014 ಕ್ಕಿಂತ ಅತಿ ಹೆಚ್ಚಾಗಿದ್ದು, ಸಮಿತಿಯು 33,906 ದೂರುಗಳನ್ನು ಸ್ವೀಕರಿಸಿದೆ.
7/ 7
ಮಹಿಳೆಯರ ಮೇಲಿನ ದೌರ್ಜನ್ಯ ಅಥವಾ ಕಿರುಕುಳದ ಅಪರಾಧಕ್ಕೆ ಸಂಬಂಧಿಸಿದಂತೆ 2,523 ದೂರುಗಳು, ಅತ್ಯಾಚಾರ ಮತ್ತು ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದಂತೆ 1,701 ದೂರುಗಳು, 1,623 ದೂರುಗಳು ಮಹಿಳೆಯರ ವಿರುದ್ಧ ಪೊಲೀಸ್ ನಿರಾಸಕ್ತಿ ಮತ್ತು 924 ದೂರುಗಳು ಸೈಬರ್ ಅಪರಾಧಗಳಿಗೆ ಸಂಬಂಧಿಸಿವೆ.