Navjot Singh Sidhu: ಮಾಜಿ ಸ್ಟಾರ್ ಕ್ರಿಕೆಟಿಗನ ಪತ್ನಿಗೆ ಕ್ಯಾನ್ಸರ್​, ಜೈಲಿನಲ್ಲಿರುವ ಪತಿಗೆ ಹೆಂಡತಿಯಿಂದ ಭಾವುಕ ಪತ್ರ

ಮಾಜಿ ಕ್ರಿಕೆಟಿಗ ಸಿಧು 1988 ರ ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಜೈಲಿನಲ್ಲಿದ್ದಾರೆ. ಸಿಧು ಪತ್ನಿ ಕೌರ್​ ತಮ್ಮ ಪ್ರಸ್ತುತ ಆರೋಗ್ಯ ಸ್ಥಿತಿಯ ಬಗ್ಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ, ಪತ್ರದಲ್ಲಿ ನವಜೋತ್‌ ಸಿಂಗ್‌ ಸಿಧುಗಾಗಿ ಕಾಯುತ್ತಿರುವುದಾಗಿಯೂ ಪ್ರಸ್ತಾಪಿಸಿದ್ದಾರೆ.

First published:

  • 17

    Navjot Singh Sidhu: ಮಾಜಿ ಸ್ಟಾರ್ ಕ್ರಿಕೆಟಿಗನ ಪತ್ನಿಗೆ ಕ್ಯಾನ್ಸರ್​, ಜೈಲಿನಲ್ಲಿರುವ ಪತಿಗೆ ಹೆಂಡತಿಯಿಂದ ಭಾವುಕ ಪತ್ರ

    ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಪತ್ನಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಈ ಕುರಿತು ಸ್ವತಃ ನವಜೋತ್‌ ಕೌರ್‌ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಗುರುವಾರ ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ಬಹಿರಂಗಪಡಿಸಿದ್ದಾರೆ.

    MORE
    GALLERIES

  • 27

    Navjot Singh Sidhu: ಮಾಜಿ ಸ್ಟಾರ್ ಕ್ರಿಕೆಟಿಗನ ಪತ್ನಿಗೆ ಕ್ಯಾನ್ಸರ್​, ಜೈಲಿನಲ್ಲಿರುವ ಪತಿಗೆ ಹೆಂಡತಿಯಿಂದ ಭಾವುಕ ಪತ್ರ

    ಮಾಜಿ ಕ್ರಿಕೆಟಿಗ ಸಿಧು 1988 ರ ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಜೈಲಿನಲ್ಲಿದ್ದು, ಕೌರ್​ ತನ್ನ ಪತಿಗೆ ತಮ್ಮ ಪ್ರಸ್ತುತ ಆರೋಗ್ಯ ಸ್ಥಿತಿಯ ಬಗ್ಗೆ ಭಾವನಾತ್ಮಕ ಸಂದೇಶ ಬರೆದಿದ್ದಾರೆ, ಪತ್ರದಲ್ಲಿ ನವಜೋತ್‌ ಸಿಂಗ್‌ ಸಿಧುಗಾಗಿ ಕಾಯುತ್ತಿರುವುದಾಗಿಯೂ  ಹೇಳಿಕೊಂಡಿದ್ದಾರೆ.

    MORE
    GALLERIES

  • 37

    Navjot Singh Sidhu: ಮಾಜಿ ಸ್ಟಾರ್ ಕ್ರಿಕೆಟಿಗನ ಪತ್ನಿಗೆ ಕ್ಯಾನ್ಸರ್​, ಜೈಲಿನಲ್ಲಿರುವ ಪತಿಗೆ ಹೆಂಡತಿಯಿಂದ ಭಾವುಕ ಪತ್ರ

    ಕೌರ್​ ತಮ್ಮ ಟ್ವೀಟ್​ನಲ್ಲಿ ಅವರು (ನವಜೋತ್‌ ಸಿಂಗ್‌ ಸಿಧು) ತಮ್ಮದಲ್ಲದ ತಪ್ಪಿಗೆ ಜೈಲು ಸೇರಿದ್ದಾರೆ. ಇದರ ಹಿಂದೆ ಇರುವವರಿಗೆಲ್ಲಾ ಕ್ಷಮೆ ಇರಲಿ ಎಂದಿರುವ ನವಜೋತ್‌ ಕೌರ್‌, ಪ್ರತಿದಿನವೂ ಪತಿಗಾಗಿ ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

    MORE
    GALLERIES

  • 47

    Navjot Singh Sidhu: ಮಾಜಿ ಸ್ಟಾರ್ ಕ್ರಿಕೆಟಿಗನ ಪತ್ನಿಗೆ ಕ್ಯಾನ್ಸರ್​, ಜೈಲಿನಲ್ಲಿರುವ ಪತಿಗೆ ಹೆಂಡತಿಯಿಂದ ಭಾವುಕ ಪತ್ರ

    ನೀವು ಸೆರೆವಾಸದಲ್ಲಿದ್ದರೆ, ನಾನು ಹೊರಗೆ ಪ್ರತಿದಿನವೂ ನಿಮಗಾಗಿ ಎದುರು ನೋಡುತ್ತಾ ಹೆಚ್ಚಿನ ನೋವು ಅನುಭವಿಸುತ್ತಿದ್ದೇನೆ ಎಂದು ಮಾಜಿ ಶಾಸಕಿಯೂ ಆಗಿರುವ ಕೌರ್ ಬರೆದುಕೊಂಡಿದ್ದಾರೆ.

    MORE
    GALLERIES

  • 57

    Navjot Singh Sidhu: ಮಾಜಿ ಸ್ಟಾರ್ ಕ್ರಿಕೆಟಿಗನ ಪತ್ನಿಗೆ ಕ್ಯಾನ್ಸರ್​, ಜೈಲಿನಲ್ಲಿರುವ ಪತಿಗೆ ಹೆಂಡತಿಯಿಂದ ಭಾವುಕ ಪತ್ರ

    " ಪದೇ ಪದೇ ನಿಮಗೆ ನ್ಯಾಯ ಸಿಗದಿರುವುದನ್ನು ಕಾಣುತ್ತಲೇ ನಿಮಗಾಗಿ ಕಾಯುತ್ತಿರುವೆ. ಸತ್ಯ ಅತ್ಯಂತ ಶಕ್ತಿಯುತವಾದದ್ದು, ಅದು ನಿಮ್ಮನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ಸಮಯ ತೆಗೆದುಕೊಳ್ಳುತ್ತದೆ. ಏಕೆಂದರೆ ಇದು ಕಲಿಯುಗ. ಕ್ಷಮಿಸಿ ನಿಮಗಾಗಿ ಕಾಯಲು ಸಾಧ್ಯವಿಲ್ಲ, ಏಕೆಂದರೆ, ಇದು ಎರಡನೇ ಹಂತದ ಕ್ಯಾನ್ಸರ್‌, ನಾನು ಇಂದು ಸರ್ಜರಿಗೆ ಒಳಗಾಗುತ್ತಿದ್ದೇನೆ. ಇದಕ್ಕೆ ಯಾರನ್ನೂ ದೂಷಿಸಲು ಸಾಧ್ಯವಿಲ್ಲ, ಇದೆಲ್ಲ ದೇವರ ಆಟ " ಎಂದು ತಮ್ಮ ನೋವನ್ನು ಟ್ವೀಟ್​ ಮೂಲಕ ಹೊರ ಹಾಕಿದ್ದಾರೆ.

    MORE
    GALLERIES

  • 67

    Navjot Singh Sidhu: ಮಾಜಿ ಸ್ಟಾರ್ ಕ್ರಿಕೆಟಿಗನ ಪತ್ನಿಗೆ ಕ್ಯಾನ್ಸರ್​, ಜೈಲಿನಲ್ಲಿರುವ ಪತಿಗೆ ಹೆಂಡತಿಯಿಂದ ಭಾವುಕ ಪತ್ರ

    1988ರ ರಸ್ತೆ ಗಲಾಟೆ ಪ್ರಕರಣದಲ್ಲಿ ನವಜೋತ್‌ ಸಿಂಗ್‌ ಸಿಧು ಅವರಿಗೆ ಮೇ  20, 2022 ರಂದು ಕೋರ್ಟ್​ ಒಂದು ವರ್ಷದ ಶಿಕ್ಷೆ ವಿಧಿಸಿದೆ. ಅವರನ್ನು ಪಟಿಯಾಲಾದ ಸೆಂಟ್ರಲ್‌ ಜೈಲಿನಲ್ಲಿ ಇರಿಸಲಾಗಿದೆ.

    MORE
    GALLERIES

  • 77

    Navjot Singh Sidhu: ಮಾಜಿ ಸ್ಟಾರ್ ಕ್ರಿಕೆಟಿಗನ ಪತ್ನಿಗೆ ಕ್ಯಾನ್ಸರ್​, ಜೈಲಿನಲ್ಲಿರುವ ಪತಿಗೆ ಹೆಂಡತಿಯಿಂದ ಭಾವುಕ ಪತ್ರ

    ಕಳೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ, ಸಿಧು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಅವರು ಅಶಿಸ್ತು ಮತ್ತು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕಾರಣ ಪಕ್ಷದಿಂದ ಶಿಸ್ತುಕ್ರಮ ಎದುರಿಸಿದ್ದರು.

    MORE
    GALLERIES