Narendra Modi: ಮತ್ತೆ ನಂಬರ್ 1 ಆದ ನರೇಂದ್ರ ಮೋದಿ, ಜಾಗತಿಕ ನಾಯಕರ ಪಟ್ಟಿಯಲ್ಲಿ 'ನಮೋ'ಗೆ ಅಗ್ರಸ್ಥಾನ!

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾಗತಿಕ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಮತ್ತೊಮ್ಮೆಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಅವರು ಶೇಕಡಾ 76 ರೇಟಿಂಗ್ ಅಂಕ ಪಡೆದು ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

First published:

 • 17

  MORE
  GALLERIES

 • 27

  Narendra Modi: ಮತ್ತೆ ನಂಬರ್ 1 ಆದ ನರೇಂದ್ರ ಮೋದಿ, ಜಾಗತಿಕ ನಾಯಕರ ಪಟ್ಟಿಯಲ್ಲಿ 'ನಮೋ'ಗೆ ಅಗ್ರಸ್ಥಾನ!

  ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ಬಿಡುಗಡೆ ಮಾಡಿರುವ ಜಾಗತಿಕ ನಾಯಕರ ಅನುಮೋದನೆ ರೇಟಿಂಗ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಗ್ರಸ್ಥಾನ ಪಡೆದಿದ್ದಾರೆ. ಅವರು ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಸೇರಿದಂತೆ ಇತರ ನಾಯಕರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ.

  MORE
  GALLERIES

 • 37

  Narendra Modi: ಮತ್ತೆ ನಂಬರ್ 1 ಆದ ನರೇಂದ್ರ ಮೋದಿ, ಜಾಗತಿಕ ನಾಯಕರ ಪಟ್ಟಿಯಲ್ಲಿ 'ನಮೋ'ಗೆ ಅಗ್ರಸ್ಥಾನ!

  ಈ ಬಾರಿ ಪ್ರಧಾನಿ ಮೋದಿ ಅವರು ಶೇಕಡಾ 76ರಷ್ಟು ಅನುಮೋದನೆ ರೇಟಿಂಗ್​ ಪಡೆದಿದ್ದಾರೆ. ಆದರೆ, ಫೆಬ್ರವರಿಯಲ್ಲಿ ಈ ಅಂಕ ಶೇ.78 ರಷ್ಟಿತ್ತು, ಇದೀಗ ಪಿಎಂ ಮೋದಿ ರೇಟಿಂಗ್‌ನಲ್ಲಿ ಸ್ವಲ್ಪ ಇಳಿಕೆಯಾಗಿದೆ. ಆದರೂ ಸತತ 2ನೇ ಬಾರಿಗೆ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

  MORE
  GALLERIES

 • 47

  Narendra Modi: ಮತ್ತೆ ನಂಬರ್ 1 ಆದ ನರೇಂದ್ರ ಮೋದಿ, ಜಾಗತಿಕ ನಾಯಕರ ಪಟ್ಟಿಯಲ್ಲಿ 'ನಮೋ'ಗೆ ಅಗ್ರಸ್ಥಾನ!

  ಮಾರ್ನಿಂಗ್ ಕನ್ಸಲ್ಟ್​ ಜನಪ್ರಿಯ ವಿಶ್ವನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಂತರದ ಸ್ಥಾನದಲ್ಲಿ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಶೇಕಡಾ 61 ರೇಟಿಂಗ್ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ.

  MORE
  GALLERIES

 • 57

  Narendra Modi: ಮತ್ತೆ ನಂಬರ್ 1 ಆದ ನರೇಂದ್ರ ಮೋದಿ, ಜಾಗತಿಕ ನಾಯಕರ ಪಟ್ಟಿಯಲ್ಲಿ 'ನಮೋ'ಗೆ ಅಗ್ರಸ್ಥಾನ!

  ಆಸ್ಟ್ರೇಲಿಯಾದ ಪ್ರಧಾನಿ ಆಂಟೋನಿ ಅಲ್ಬನೀಸ್​ ಮೂರನೇ ಸ್ಥಾನದಲ್ಲಿದ್ದು, ಶೇ.55ರಷ್ಟು ಅನುಮೋದನೆ ರೇಟಿಂಗ್ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಇದ್ದು, ಅವರು ಶೇ. 49ರಷ್ಟು ಅಂಕ ಪಡೆದಿದ್ದಾರೆ.

  MORE
  GALLERIES

 • 67

  Narendra Modi: ಮತ್ತೆ ನಂಬರ್ 1 ಆದ ನರೇಂದ್ರ ಮೋದಿ, ಜಾಗತಿಕ ನಾಯಕರ ಪಟ್ಟಿಯಲ್ಲಿ 'ನಮೋ'ಗೆ ಅಗ್ರಸ್ಥಾನ!

  ಬ್ರೆಜಿಲ್ ಅಧ್ಯಕ್ಷ ಲುಲಾ ಡಿ ಸಿಲ್ವಾ ಅವರು ಜಾರ್ಜಿಯಾ ಮೆಲೋನಿಯಂತೆ ಶೇ.49 ಶೇಕಡಾ ರೇಟಿಂಗ್ ಪಡೆದಿದ್ದಾರೆ. ಆದರೆ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ವಿಶ್ವದ ಸೂಪರ್ ಪವರ್ ರಾಷ್ಟ್ರಗಳಲ್ಲಿ ಒಂದಾದ ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಅವರು ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಬೈಡೆನ್ ಕೇವಲ ಶೇ. 41ರಷ್ಟು ರೇಟಿಂಗ್ ಪಡೆದಿದ್ದಾರೆ.

  MORE
  GALLERIES

 • 77

  Narendra Modi: ಮತ್ತೆ ನಂಬರ್ 1 ಆದ ನರೇಂದ್ರ ಮೋದಿ, ಜಾಗತಿಕ ನಾಯಕರ ಪಟ್ಟಿಯಲ್ಲಿ 'ನಮೋ'ಗೆ ಅಗ್ರಸ್ಥಾನ!

  ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಶೇ.39 ಅನುಮೋದನೆ ರೇಟಿಂಗ್‌ನೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ. ಸ್ಪೇನ್‌ನ ಪ್ರಧಾನ ಮಂತ್ರಿ ಪೆಡ್ರೊ ಸ್ಯಾಂಚೆಜ್ ಶೇ.38 ಅನುಮೋದನೆಯೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ. 9ನೇ ಸ್ಥಾನದಲ್ಲಿರುವ ಜರ್ಮನಿಯ ಚಾನ್ಲರ್ ಓಲಾಫ್ ಸ್ಕೂಲ್ಜ್ (ಶೇ.35) ಹಾಗೂ 10ನೇ ಸ್ಥಾನದಲ್ಲಿ ಬ್ರಿಟನ್ ಪಿಎಂ ರಿಷಿ ಸುನಕ್ (ಶೇ.34) ಇದ್ದಾರೆ.

  MORE
  GALLERIES