ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಇಂದು ವಿಶೇಷ ವಿಮಾನದಲ್ಲಿ ಅಹಮದಾಬಾದ್ಗೆ ಆಗಮಿಸಿದ್ದರು. ಮೊಟೆರಾ ಸ್ಟೇಡಿಯಂನಲ್ಲಿ ಹಮ್ಮಿಕೊಳ್ಳಲಾಗಿದ್ದ 'ನಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಮೆಲಾನಿಯಾ ಟ್ರಂಪ್ ಭಾಗವಹಿಸಿದ್ದರು.
2/ 16
ಸುಮಾರು 1 ಲಕ್ಷಕ್ಕೂ ಅಧಿಕ ಜನರು ನೆರೆದಿದ್ದ ಕ್ರೀಡಾಂಗಣದಲ್ಲಿ ಪ್ರಧಾನಿ ಮೋದಿ ಮೊದಲು ಭಾಷಣ ಮಾಡಿದರು.
3/ 16
ಟ್ರಂಪ್ ಹೌಡಿ-ಮೋಡಿ ಕಾರ್ಯಕ್ರಮದ ಮೂಲಕ ನನಗೆ ಸ್ವಾಗತ ಕೋರಿದ್ದರು. ಈಗ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಭಾಗಿಯಾಗಿದ್ದಾರೆ ಎಂದು ಮೋದಿ ಹೇಳಿದರು.
4/ 16
ಭಾರತ-ಅಮೆರಿಕ ಬಾಂಧವ್ಯ ಸುದೀರ್ಘ ಹಾಗೂ ಅಜರಾಮರ. ಟ್ರಂಪ್ ಭೇಟಿಯಿಂದ ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ವದ್ಧಿಯಾಗಲಿದೆ ಎಂದರು.
5/ 16
ಸಮಸ್ತ ಭಾರತೀಯರ ಪರವಾಗಿ ಮೋದಿ ಟ್ರಂಪ್ಗೆ ಸ್ವಾಗತ ಕೋರಿದರು. ಜನರು ಎದ್ದು ನಿಂತು ನಮಸ್ತೆ ಟ್ರಂಪ್ ಎಂದರು.
6/ 16
ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಮಸ್ತೆ ಎಂದು ಭಾಷಣ ಆರಂಭಿಸಿ, ಮೋದಿಯನ್ನು ಹಾಡಿ ಹೊಗಳಿದರು.
7/ 16
ಗ್ರೇಟ್ ಚಾಂಪಿಯನ್ ಆಫ್ ಇಂಡಿಯಾ ಮೋದಿ, ಪ್ರಧಾನಿ ಮೋದಿ ನಮಗೆ ನಿಜವಾದ ಗೆಳೆಯ. ನಮಗೆ ಭಾರತೀಯರ ಮೇಲೆ ವಿಶೇಷವಾದ ಪ್ರೀತಿ ಇದೆ. ಇಡೀ ದೇಶದ ಜನರಿಗೆ ನನ್ನ ಅಭಿನಂದನೆಗಳು ಎಂದರು ಟ್ರಂಪ್.
8/ 16
ನಿಮ್ಮ ಅಭೂತಪೂರ್ವ, ಆತ್ಮೀಯ ಸ್ವಾಗತವನ್ನು ನಾನು ಎಂದೂ ಕೂಡ ಮರೆಯಲಾರೆ. ನಾನು ಭಾರತದ ಸಂಸ್ಕೃತಿಯನ್ನು ಗೌರವಿಸುತ್ತೇನೆ. ಎಂಟು ಸಾವಿರ ಮೈಲಿ ಪ್ರಯಾಣಿಸಿ ಭಾರತಕ್ಕೆ ಬಂದಿದ್ದೇವೆ ಎಂದರು.
9/ 16
ಚಾಯ್ವಾಲಾ ಪ್ರಧಾನಿಯಾಗಿದ್ದು ಅದ್ಭುತ. ಅಮೆರಿಕ ಎಂದೆಂದೂ ಭಾರತವನ್ನು ಗೌರವಿಸುತ್ತದೆ. ಮಾನವೀಯತೆಯ ಸಂದೇಶ ನೀಡುವ ದೇಶ ಭಾರತ ಎಂದು ಹೇಳಿದರು.
10/ 16
ಇಲ್ಲಿ 1.25 ಲಕ್ಷ ಜನ ಸೇರಿರುವುದು ಸಂತಸ. ಭಾರತೀಯರಿಗೆ ನನ್ನ ಹೃದಯದಲ್ಲಿ ಸ್ಥಾನ ನೀಡಿದ್ದೇನೆ. ಮೋದಿ ಒಬ್ಬ ಯಶಸ್ವಿ ನಾಯಕ. ನಡೆದಾಡುವ ಕಥೆ ಎಂದು ಟ್ರಂಪ್ ಹೇಳಿದರು.
11/ 16
ಗಾಡ್ ಬ್ಲೆಸ್ ಇಂಡಿಯಾ, ವಿ ಲವ್ ಇಂಡಿಯಾ ವೆರಿ ಮಚ್ ಎಂದು ಟ್ರಂಪ್ ಹೇಳಿದರು.
12/ 16
ಮೊಟೆರಾ ಸ್ಟೇಡಿಯಂನಲ್ಲಿ ಟ್ರಂಪ್ ದಂಪತಿ-ಪ್ರಧಾನಿ ಮೋದಿ
13/ 16
ಮೊಟೆರಾ ಸ್ಟೇಡಿಯಂನಲ್ಲಿ ಟ್ರಂಪ್ ದಂಪತಿ-ಪ್ರಧಾನಿ ಮೋದಿ
14/ 16
ಮೊಟೆರಾ ಸ್ಟೇಡಿಯಂನಲ್ಲಿ ಟ್ರಂಪ್ ದಂಪತಿ-ಪ್ರಧಾನಿ ಮೋದಿ
15/ 16
ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೂ ಮುನ್ನ ಸಬರಮತಿ ಆಶ್ರಮಕ್ಕೆ ಟ್ರಂಪ್ ದಂಪತಿ ಭೇಟಿ ನೀಡಿದ್ದರು.
16/ 16
ಅಲ್ಲಿ ಮಹಾತ್ಮ ಗಾಂಧಿಯ ತತ್ವಗಳು, ಚರಕವನ್ನು ಟ್ರಂಪ್ಗೆ ಮೋದಿ ಪರಿಚಯಿಸಿಕೊಟ್ಟರು.