Bomb Threat: ನಟ ಅಮಿತಾಬ್ ಬಚ್ಚನ್, ಧರ್ಮೇಂದ್ರ ಮನೆಯಲ್ಲಿ ಬಾಂಬ್‌ ಇರೋದಾಗಿ ಬೆದರಿಕೆ ಕರೆ! ಆಮೇಲೆ ಆಗಿದ್ದೇನು?

ನವದೆಹಲಿ: ಹಿರಿಯ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹಾಗೂ ಧರ್ಮೇಂದ್ರ ಅವರ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಹುಸಿ ಕರೆ ಮಾಡಿ ಬೆದರಿಸಿದ ಘಟನೆ ಬುಧವಾರ ನಡೆದಿದೆ. ಈ ಇಬ್ಬರು ಖ್ಯಾತ ನಟರ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಗಳು ನಾಗ್ಪುರ ಪೊಲೀಸರಿಗೆ ಕರೆ ಮಾಡಿದ್ದ ಹಿನ್ನೆಲೆ ಒಂದು ಕ್ಷಣ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.

First published:

  • 17

    Bomb Threat: ನಟ ಅಮಿತಾಬ್ ಬಚ್ಚನ್, ಧರ್ಮೇಂದ್ರ ಮನೆಯಲ್ಲಿ ಬಾಂಬ್‌ ಇರೋದಾಗಿ ಬೆದರಿಕೆ ಕರೆ! ಆಮೇಲೆ ಆಗಿದ್ದೇನು?

    ಅಪರಿಚಿತ ವ್ಯಕ್ತಿಗಳಿಂದ ಕರೆ ಬಂದ ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಕರೆಯ ಮಾಹಿತಿ ಆಧರಿಸಿ ತನಿಖೆ ಆರಂಭಿಸಿದ್ರು. ಈ ಸಂಬಂಧ ಕೂಡಲೇ ನಾಗ್ಪುರ ಪೊಲೀಸರು ಮುಂಬೈ ಪೊಲೀಸರಿಗೆ ಬಾಂಬ್ ಕರೆ ಬಂದಿರುವ ಬಗ್ಗೆ ಮಾಹಿತಿ ರವಾನಿಸಿದ್ರು.

    MORE
    GALLERIES

  • 27

    Bomb Threat: ನಟ ಅಮಿತಾಬ್ ಬಚ್ಚನ್, ಧರ್ಮೇಂದ್ರ ಮನೆಯಲ್ಲಿ ಬಾಂಬ್‌ ಇರೋದಾಗಿ ಬೆದರಿಕೆ ಕರೆ! ಆಮೇಲೆ ಆಗಿದ್ದೇನು?

    ಆಗ ತಕ್ಷಣ ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರು ಅಮಿತಾಭ್​ ಬಚ್ಚನ್ ಹಾಗೂ ಧರ್ಮೇಂದ್ರ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

    MORE
    GALLERIES

  • 37

    Bomb Threat: ನಟ ಅಮಿತಾಬ್ ಬಚ್ಚನ್, ಧರ್ಮೇಂದ್ರ ಮನೆಯಲ್ಲಿ ಬಾಂಬ್‌ ಇರೋದಾಗಿ ಬೆದರಿಕೆ ಕರೆ! ಆಮೇಲೆ ಆಗಿದ್ದೇನು?

    ಇಬ್ಬರ ಮನೆಯಲ್ಲೂ ಬಾಂಬ್ ನಿಗ್ರಹ ದಳದ ಜೊತೆ ತೆರಳಿ ಕಾರ್ಯಾಚರಣೆ ನಡೆಸಿದಾಗ ಎಲ್ಲೂ ಬಾಂಬ್ ಇರುವುದು ಪತ್ತೆಯಾಗಿಲ್ಲ. ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂದು ಪೊಲೀಸರಿಗೆ ಮನವರಿಕೆ ಆಗಿದೆ.

    MORE
    GALLERIES

  • 47

    Bomb Threat: ನಟ ಅಮಿತಾಬ್ ಬಚ್ಚನ್, ಧರ್ಮೇಂದ್ರ ಮನೆಯಲ್ಲಿ ಬಾಂಬ್‌ ಇರೋದಾಗಿ ಬೆದರಿಕೆ ಕರೆ! ಆಮೇಲೆ ಆಗಿದ್ದೇನು?

    ಸದ್ಯ ಹುಸಿ ಬಾಂಬ್ ಕರೆ ಮಾಡಿದ ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕಿಡಿಗೇಡಿಗಳು ಕರೆ ಮಾಡಿದ ನಂಬರ್ ಅನ್ನು ಸೈಬರ್ ಕ್ರೈಂ ಪೊಲೀಸರಿಗೆ ವರ್ಗಾಯಿಸಲಾಗಿದ್ದು, ಅದರ ಆಧಾರದ ಮೇಲೆ ಯಾರು, ಎಲ್ಲಿಂದ ಕರೆ ಮಾಡಲಿದ್ದಾರೆ ಅನ್ನೋದು ತಿಳಿದು ಬರಲಿದೆ.

    MORE
    GALLERIES

  • 57

    Bomb Threat: ನಟ ಅಮಿತಾಬ್ ಬಚ್ಚನ್, ಧರ್ಮೇಂದ್ರ ಮನೆಯಲ್ಲಿ ಬಾಂಬ್‌ ಇರೋದಾಗಿ ಬೆದರಿಕೆ ಕರೆ! ಆಮೇಲೆ ಆಗಿದ್ದೇನು?

    ನಾಗ್ಪುರ ಪೊಲೀಸರಿಗೆ ಕರೆ ಮಾಡಿದ್ದ ಕಿಡಿಗೇಡಿಗಳು, ‘ಅಮಿತಾಭ್ ಬಚ್ಚನ್​ ಹಾಗೂ ಧರ್ಮೇಂದ್ರ ಅವರ ಮನೆಯಲ್ಲಿ ಬಾಂಬ್​ ಇಡಲಾಗಿದೆ. 10 ನಿಮಿಷದಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ. ದಾದರ್​ನಲ್ಲಿ ಶಸ್ತ್ರ ಸಜ್ಜಿತವಾದ 25 ಜನರು ಭಯೋತ್ಪಾದಕ ದಾಳಿ ಮಾಡಲು ಸಿದ್ಧವಾಗಿದ್ದಾರೆ’ ಎಂದು ಬೆದರಿಸಿದ್ದರು.

    MORE
    GALLERIES

  • 67

    Bomb Threat: ನಟ ಅಮಿತಾಬ್ ಬಚ್ಚನ್, ಧರ್ಮೇಂದ್ರ ಮನೆಯಲ್ಲಿ ಬಾಂಬ್‌ ಇರೋದಾಗಿ ಬೆದರಿಕೆ ಕರೆ! ಆಮೇಲೆ ಆಗಿದ್ದೇನು?

    ಸದ್ಯ ಹುಸಿ ಬಾಂಬ್ ಕರೆ ಮಾಡಿದ ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಈ ಸಂಬಂಧ ನಾಗ್ಪುರ ಹಾಗೂ ಮುಂಬೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    MORE
    GALLERIES

  • 77

    Bomb Threat: ನಟ ಅಮಿತಾಬ್ ಬಚ್ಚನ್, ಧರ್ಮೇಂದ್ರ ಮನೆಯಲ್ಲಿ ಬಾಂಬ್‌ ಇರೋದಾಗಿ ಬೆದರಿಕೆ ಕರೆ! ಆಮೇಲೆ ಆಗಿದ್ದೇನು?

    ಒಂದು ಕ್ಷಣ ಎಲ್ಲರನ್ನೂ ಈ ಬಾಂಬ್ ಬೆದರಿಕೆ ಕರೆ ಭೀತಿಗೊಳಪಡಿಸಿದ್ದಂತು ಸತ್ಯ, ಆದರೆ ಅದೊಂದು ಹುಸಿ ಕರೆ ಎಂದು ತಿಳಿದಾಗ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

    MORE
    GALLERIES