Mumbai: ಹಸುವಿನಿಂದ ಬದಲಾಯ್ತು ಅದೃಷ್ಟ, ಒಂದು ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ರೆಡಿ!

ಇದು ಉದ್ಯಮಿ ನರೇಂದ್ರ ಪುರೋಹಿತ್ ಅವರ ಮನೆಯಲ್ಲಿ ವಾಸಿಸುವ ರಾಧಾ ಎಂಬ ಹಸುವಿನ ಕಥೆ. ಪುರೋಹಿತ್ ಮುಂಬೈನ BMC ಯಲ್ಲಿ ಎರಡು ಎಲೆಕ್ಟ್ರಿಕ್ ವಾಹನಗಳ ಗುತ್ತಿಗೆ ಮತ್ತು ತಯಾರಿಕೆಯ ವ್ಯವಹಾರವನ್ನು ಹೊಂದಿದ್ದಾರೆ. ರಾಜಸ್ಥಾನದ ಜಲೋರ್ ಜಿಲ್ಲೆಯ ರಾಣಿವಾಡ ಪ್ರದೇಶದ ಧನೋಲ್ ಗ್ರಾಮದ ನಿವಾಸಿ ಪುರೋಹಿತ್ ಅವರ ಮನೆಗೆ ಪ್ರೀತಿಯ ಹಸು ರಾಧಾ ಆಗಮಿಸಿದಾಗ ಅವರ ಅದೃಷ್ಟವೇ ಬದಲಾಯಿತು. ರಾಧಾ ಬಂದ ಬೆನ್ನಲ್ಲೇ ಒಂದು ಕೋಟಿ ಮೌಲ್ಯದ ಬಂಗಲೆ ನಿರ್ಮಿಸಿದ್ದಾರೆ. ರಾಧಾ ದೇಸಿ ತುಪ್ಪದಿಂದ ಮಾಡಿದ ಲಡ್ಡುಗಳನ್ನು ತಿನ್ನುತ್ತಾಳೆ. ನಾಲ್ಕು ಮಂದಿ 24 ಗಂಟೆಗಳ ಕಾಲ ಇದರ ಸೇವೆಯಲ್ಲಿ ತೊಡಗಿದ್ದಾರೆ. ಏನಾದರೂ ತೊಂದರೆಯಾದರೆ ವೈದ್ಯರ ತಂಡವನ್ನು ಕರೆಯುತ್ತಾರೆ.

First published: