Nusrat Jahan: ದುರ್ಗಾ ಅವತಾರದಲ್ಲಿ ಕಾಣಿಸಿಕೊಂಡ ಸಂಸದೆ ನುಸ್ರತ್ ಜಹಾನ್ಗೆ ಜೀವ ಬೆದರಿಕೆ
ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಸದಾ ಸುದ್ದಿಯಲ್ಲಿರುವ ವ್ಯಕ್ತಿ. ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿಕೊಳ್ಳುವ ನಟಿಗೆ ಈಗ ಜೀವಬೆದರಿಕೆ ಬಂದೋದಗಿದೆ. ಇದಕ್ಕೆ ಕಾರಣ ಅವರು ದುರ್ಗಾ ಅವತಾರದಲ್ಲಿ ನವರಾತ್ರಿ ಶುಭಾಶಯ ತಿಳಿಸಿರುವುದು.
ನವರಾತ್ರಿ ಅಂಗವಾಗಿ ವಿಶೇಷವಾಗಿ ದುರ್ಗಾ ಅವತಾರದಲ್ಲಿ ಶುಭ ಮಹಾಲಯ ತಿಳಿಸಿದ್ದಾರೆ. ಆದರೆ, ಈಗ ಅವರ ಈ ಅವತಾರ ಕೆಂಗಣ್ಣಿಗೆ ಗುರಿಯಾಗಿದ್ದು, ಜೀವ ಬೆದರಿಕೆ ಬರಲಾರಂಭಿಸಿದೆ.
2/ 7
ಈ ಕುರಿತು ಈಗಾಗಲೇ ಅವರು ಪಶ್ಚಿಮ ಬಂಗಾಳ ಸರ್ಕಾರಕ್ಕೆ ದೂರು ನೀಡಿದ್ದಾರೆ
3/ 7
ಈ ಹಿನ್ನಲೆ ಸದ್ಯ ಲಂಡನ್ನಲ್ಲಿ ಶೂಟಿಂಗ್ನಲ್ಲಿರುವ ನಟಿಗೆ ಬಂಗಾಳದ ಗೃಹ ಇಲಾಖೆ ರಕ್ಷಣೆ ನೀಡಿದೆ.
4/ 7
ಇತ್ತೀಚೆಗೆ ದುರ್ಗಾ ಅವತಾರದಲ್ಲಿ ಕಾಣಿಸಿಕೊಂಡ ಅವರು ಕೈಯಲ್ಲಿ ತ್ರಿಶೂಲ ಹಿಡಿದು ಕ್ಯಾಮೆರಾಗೆ ಫೋಸ್ ನೀಡಿದ್ದರು.
5/ 7
ಮುಸ್ಲಿಂ ಧರ್ಮದವರಾಗಿರುವ ನುಸ್ರುತ್ ದುರ್ಗಾ ಅವತಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ
6/ 7
ಕಳೆದ ವರ್ಷ ಕೂಡ ನವರಾತ್ರಿಯ ದುರ್ಗಾಪೂಜೆಯಲ್ಲಿ ಭಾಗಿಯಾಗಿದ್ದ ಅವರು ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ ಎಂದಿದ್ದರು.
7/ 7
ಮುಸ್ಲಿಂ ಧರ್ಮದವರಾಗಿದ್ದರೂ ಸಂಸತ್ನಲ್ಲಿ ಮಂಗಳಸೂತ್ರ, ಸಿಂಧೂರ ತೊಟ್ಟು ಭಾಗಿಯಾಗಿದ್ದ ಅವರು ಮುಸ್ಲಿಂ ಧರ್ಮಗುರುಗಳ ಕೆಂಗಣ್ಣಿಗೂ ಗುರಿಯಾಗಿದ್ದರು.