ವಿಜ್ಞಾನ ಸಾಕಷ್ಟು ಮುಂದುವರಿದಿದೆ, ಒಂದು ಕೂದಲು ಸಿಕ್ಕರೆ, ಅದು ಯಾರದ್ದು, ಆತನ ಚಹರೆ, ವಯಸ್ಸು ಎಲ್ಲವನ್ನೂ ಪತ್ತೆ ಹಚ್ಚಬಹುದು. ಇನ್ನು ಡಿಎನ್ಎ ಟೆಸ್ಟ್ ಮೂಲಕ ಮಗುವಿನ ತಂದೆ, ವಂಶಸ್ಥರ ಬಗ್ಗೆಯೂ ತಿಳಿದುಕೊಳ್ಳಬಹುದು. ಇಲ್ಲೊಂದು ಪ್ರಕರಣದಲ್ಲಿ ಮೊಮ್ಮಗಳು ತನ್ನ ಮಗನಿಗೆ ಹುಟ್ಟಿಲ್ಲ ಎಂದು ಸೊಸೆ ಮೇಲೆ ಅನುಮಾನ ಪಟ್ಟು ಡಿಎನ್ಎ ಟೆಸ್ಟ್ ಮಾಡಿಸಿದ ಅತ್ತೆಯೇ ಸಿಕ್ಕಿಬಿದ್ದ ಘಟನೆ ನಡೆದಿದೆ.
ಅತ್ತೆಯೊಬ್ಬಳು ತನ್ನ ಮೊಮ್ಮಗಳ ಬಣ್ಣವನ್ನು ಗಮನಿಸಿ ಯಾವಾಗಲೂ ತನ್ನ ಸೊಸೆಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಳು. ಇತ್ತೀಚೆಗೆ ಜನಿಸಿದ್ದ ಆ ಮಗುವಿನ ಕಣ್ಣಿನ ಬಣ್ಣ ಹಸಿರಾಗಿತ್ತು. ಆದರೆ ಮಗುವಿನ ತಾಯಿ, ತಂದೆ ಅಥವಾ ಅಜ್ಜಿ-ತಾತ ಯಾರಿಗೂ ಹಸಿರು ಕಣ್ಣುಗಳಿರಲಿಲ್ಲ. ಆದ್ದರಿಂದ, ಅತ್ತೆಗೆ ಮಗು ತನ್ನ ಮಗನಿಗೆ ಹುಟ್ಟಿಲ್ಲ, ಸೊಸೆಯ ಅಕ್ರಮ ಸಂಬಂಧದಿಂದ ಮಗು ಜನಿಸಿದೆ ಎಂದು ಆರೋಪಿಸುತ್ತಿದ್ದಳು.
ಕೊನೆಗೆ ಡಿಎನ್ಎ ಟೆಸ್ಟ್ ಮಾಡಿಸಲಾಗಿದ್ದು, ವರದಿಯಲ್ಲಿ ಮಗು ಆಕೆಯ ಗಂಡನಿಗೆ ಹುಟ್ಟಿದ್ದು ಎಂದು ಸಾಬೀತಾಗಿದೆ. ಆದರೆ ಈ ಡಿಎನ್ಎ ಟೆಸ್ಟ್ನಲ್ಲಿ ತನ್ನ ಪತಿ ಆತನ ತಂದೆಗೆ ಹುಟ್ಟಿಲ್ಲ, ತನ್ನ ಅತ್ತೆಯ ಅಕ್ರಮ ಸಂಬಂಧದಿಂದ ಹುಟ್ಟಿದ್ದು ಎನ್ನುವುದು ಬಯಲಾಗಿದೆ. ಈ ವರದಿಯಿಂದ ಕೋಪಗೊಂಡ ಮಹಿಳೆಯ ಪತಿ ಆತನ ತಾಯಿಯೊಂದಿಗೆ ಜಗಳ ಆಡಿದ್ದಾನೆ. ಈ ವಿಷಯವನ್ನು ಕೂಡಲೇ ತನ್ನ ತಂದೆಗೆ ತಿಳಿಸಬೇಕು ಎಂದು ಮಹಿಳೆಯ ಪತಿ ನಿರ್ಧರಿಸಿದ್ದಾನೆ. ಆದರೆ ಇಂತಹ ವಿಚಾರವನ್ನು ಕೈಗೆತ್ತಿಕೊಂಡು ವೃದ್ಧಾಪ್ಯದಲ್ಲಿ ದಾಂಪತ್ಯ ಜೀವನಕ್ಕೆ ಹೊಡೆಯುವ ಅಗತ್ಯವಿಲ್ಲ ಆತನ ಪತ್ನಿ ಸಮಾಧಾನ ಪಡಿಸಿದ್ದಾಳೆ.