Bihar Floods: ಬಿಹಾರದಲ್ಲಿ ಪ್ರವಾಹ ಹೆಚ್ಚಳ; 14 ಜಿಲ್ಲೆಗಳ 50 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಕಷ್ಟ

Bihar Floods: ಬಿಹಾರದಲ್ಲಿ ಉಂಟಾಗಿರುವ ಪ್ರವಾಹದಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ. ಭಾನುವಾರ ಬಿಹಾರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಭಾಗಮತಿ ನದಿ ತುಂಬಿ ದರ್ಬಾಂಗ ನಗರದೊಳಗೆ ನುಗ್ಗಿದೆ. ಇದರಿಂದ ಮತ್ತಷ್ಟು ಗ್ರಾಮಗಳಿಗೆ ನೀರು ನುಗ್ಗಿದೆ. ಬಿಹಾರದಲ್ಲಿ 13 ಜನರು ಪ್ರವಾಹದಿಂದಾಗಿ ಸಾವನ್ನಪ್ಪಿದ್ದಾರೆ. ಬಿಹಾರದ 14 ಜಿಲ್ಲೆಗಳಲ್ಲಿ ಪ್ರವಾಹದ ಪ್ರಮಾಣ ಹೆಚ್ಚಾಗಿದೆ. ಇದುವರೆಗೂ 4 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್​ ಮಾಡಲಾಗಿದೆ.

First published: