Monkeys: 2 ತಿಂಗಳ ಮಗುವನ್ನು ಹೊತ್ತೊಯ್ದು ನೀರಿನ ತೊಟ್ಟಿಗೆ ಬಿಸಾಕಿದ ಕೋತಿಗಳು
ವರದಿಗಳ ಪ್ರಕಾರ, ಮಗು ಕೇಶವ್ ಕುಮಾರ್ ತನ್ನ ಅಜ್ಜಿಯೊಂದಿಗೆ ಟೆರೇಸ್ನ ರೂಂನಲ್ಲಿ ಮಲಗಿತ್ತು. ರೂಂನ ಬಾಗಿಲು ತೆರೆದೇ ಇತ್ತು. ಆಗ ಅಲ್ಲಿಗೆ ಬಂದ ಕೋತಿಗಳ ಹಿಂಡು ಮಗುವನ್ನು ಎಳೆದುಕೊಂಡು ಹೋಗಿವೆ.
ಕೋತಿಗಳು(Monkeys) ಮಾಡುವ ಅವಾಂತರಗಳು ಸಾಮಾನ್ಯವಾದವಲ್ಲ. ಮನೆಗಳಿಗೆ(House) ನುಗ್ಗಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡುತ್ತವೆ. ಮನೆಯಲ್ಲಿ ಮಲಗಿಸಿರುವ ಹಸುಗೂಸನ್ನು(Child) ಎತ್ತೊಯ್ದ ಎಷ್ಟೋ ಘಟನೆಗಳನ್ನು ನೋಡಿದ್ದೇವೆ, ಕೇಳಿದ್ದೇವೆ.
2/ 7
ಅದೇ ರೀತಿ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ಕೋತಿಗಳು ಮನೆಯಲ್ಲಿ ಮಲಗಿದ್ದ 2 ತಿಂಗಳ ಕಂದಮ್ಮನನ್ನು ಎತ್ತೊಯ್ದು ನೀರಿನ ಟ್ಯಾಂಕ್ನಲ್ಲಿ ಬಿಸಾಡಿರುವ ದಾರುಣ ಘಟನೆ ನಡೆದಿದೆ. ಟೆರೇಸ್ನ ಮೇಲಿದ್ದ ರೂಂಗೆ ನುಗ್ಗಿದ ಕೋತಿಗಳು ಈ ಅವಾಂತರ ಸೃಷ್ಟಿಸಿವೆ. ಭಾನುವಾರ ಈ ಘಟನೆ ನಡೆದಿದ್ದು, ಮಗು ಸಾವನ್ನಪ್ಪಿದೆ.
3/ 7
ವರದಿಗಳ ಪ್ರಕಾರ, ಮಗು ಕೇಶವ್ ಕುಮಾರ್ ತನ್ನ ಅಜ್ಜಿಯೊಂದಿಗೆ ಟೆರೇಸ್ನ ರೂಂನಲ್ಲಿ ಮಲಗಿತ್ತು. ರೂಂನ ಬಾಗಿಲು ತೆರೆದೇ ಇತ್ತು. ಆಗ ಅಲ್ಲಿಗೆ ಬಂದ ಕೋತಿಗಳ ಹಿಂಡು ಮಗುವನ್ನು ಎಳೆದುಕೊಂಡು ಹೋಗಿವೆ.
4/ 7
ಇತ್ತ, ಮಗು ರೂಂನಲ್ಲಿ ಇಲ್ಲದ್ದನ್ನು ನೋಡಿದ ಅಜ್ಜಿ ಗಾಬರಿಯಾಗಿದ್ದಾಳೆ. ಬಳಿಕ ಕುಟುಂಬಸ್ಥರಿಗೆ ವಿಷಯ ತಿಳಿಸಿ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ.
5/ 7
ಆದರೆ ಅಷ್ಟೊತ್ತಿಗಾಲೇ ಕೋತಿಗಳ ಹಿಂಡು ಮಗುವನ್ನು ಎಳೆದುಕೊಂಡು ಹೋಗಿ ನೀರಿನ ಟ್ಯಾಂಕ್ಗೆ ಬಿಸಾಡಿವೆ. ಕುಟುಂಬಸ್ಥರು ನೋಡುವಷ್ಟರಲ್ಲಿ ಮಗು ನೀರಿನ ತೊಟ್ಟಿಯಲ್ಲಿ ತೇಲುತ್ತಿತ್ತು. ಜೊತೆಗೆ ಮಗು ಸಾವನ್ನಪ್ಪಿತ್ತು.
6/ 7
ಈ ಹಿಂದೆಯೂ ಸಹ ಕೋತಿಗಳು ಮಗುವನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದ್ದವು. ಆದರೆ ಕುಟುಂಬಸ್ಥರ ಜಾಗರೂಕತೆಯಿಂದ ಕೋತಿಗಳ ಪ್ರಯತ್ನ ವಿಫಲವಾಗಿತ್ತು.
7/ 7
ಚಾಂದಿನಗರ ಠಾಣೆ ಗೃಹ ಅಧಿಕಾರಿ (ಎಸ್ಎಚ್ಒ) ಒ.ಪಿ.ಸಿಂಗ್ ಮಾತನಾಡಿ, ‘ಕೋತಿಗಳ ಹಾವಳಿ ಹೆಚ್ಚಾಗಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ತಿಳಿಸುತ್ತಿದ್ದೇವೆ’ ಎಂದರು.