ವಂದೇ ಭಾರತ್ ರೈಲುಗಳು ಈಗಾಗಲೆ ದೇಶದಲ್ಲಿ ಸೆನ್ಸೇಷನ್ ಸೃಷ್ಠಿಸಿವೆ. ಪ್ರಸ್ತುತ 8 ರೈಲುಗಳಯ ಸಂಚಾರ ನಡೆಸುತ್ತಿವೆ. ಇದೀಗ ಶುಕ್ರವಾರ ಮತ್ತೆರಡು ವಂದೇ ಭಾರತ್ (Vande Bharat) ರೈಲುಗಳನ್ನು ಭಾರತೀಯ ರೈಲ್ವೆ ಪ್ರಾರಂಭಿಸುತ್ತಿದೆ. ಮಹಾರಾಷ್ಟ್ರದಲ್ಲಿ ಈ ಎರಡು ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹಸಿರು ನಿಶಾನೆ ತೋರಲಿದ್ದಾರೆ. ಫೆಬ್ರವರಿ 10 ರಂದು ಕಾರ್ಯಕ್ರಮ ನಡೆಯಲಿದೆ.
ಇಲ್ಲಿಯವರೆಗೆ 8 ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿದ್ದವು. ಇದೀಗ ಮುಂಬೈನಿಂದ ಸೊಲ್ಲಾಪುರ ಮಾರ್ಗದಲ್ಲಿ 9ನೇ ವಂದೇ ಭಾರತ್ ರೈಲು ಆರಂಭಿಸಲಾಗುತ್ತಿದೆ. ಇದರಿಂದ ಮುಂಬೈ ಮತ್ತು ಸೊಲ್ಲಾಪುರ ನಡುವಿನ ಪ್ರಯಾಣದ ಅವಧಿ ಕಡಿಮೆಯಾಗುತ್ತದೆ. ಸೋಲಾಪುರದ ಸಿದ್ದೇಶ್ವರದಿಂದ ಅಕ್ಕಲಕೋಟ, ತುಳಜಾಪುರ, ಪಂದ್ರಾಪುರ, ಆಳಂದಿ ಕಡೆಗೆ ಬರುವ ಜನರಿಗೆ ವಂದೇ ಭಾರತ್ ರೈಲು ಸೇವೆಯನ್ನು ಒದಗಿಸುತ್ತದೆ. 400 ಕಿಮೀ ದೂರವನ್ನು ಇದು 6 ಗಂಟೆ 35 ನಿಮಿಷಗಳಲ್ಲಿ ಕ್ರಮಿಸಲಿದೆ. ಈ ಪ್ರಯಾಣದಲ್ಲಿ ದಾದರ್,ಕಲ್ಯಾಣ್, ಪಯಣೆ ಹಾಗೂ ಕುರ್ದುವಂಡಿಯಲ್ಲಿ ಮಾತ್ರ ನಿಲ್ಲಿಸಲಿದೆ.
ಈ ಎರಡೂ ಸೆಮಿ-ಹೈ ಸ್ಪೀಡ್ ರೈಲುಗಳು ದೇಶದ ಅತ್ಯಂತ ಕಠಿಣ ರೈಲ್ವೆ ಘಾಟ್ಗಳಾದ ಭೋರ್ ಘಾಟ್ ಮತ್ತು ಥಾಲ್ ಘಾಟ್ ವಿಭಾಗಗಳ ಮೂಲಕ ಹಾದು ಹೋಗುತ್ತವೆ. ಆದರೆ ಟ್ರಯಲ್ ರನ್ ಸಮಯದಲ್ಲಿ, ರೈಲುಗಳು ಘಾಟ್‌ಗಳಲ್ಲಿ ಯಾವುದೇ ಬೆಂಬಲವಿದಲ್ಲದೆ ಯಶಸ್ವಿಯಾಗಿ ದಾಟಿದವು. ರೈಲು ರೋಲ್ಬ್ಯಾಕ್ ಆಗುವ ಘಟನೆಗಳನ್ನು ತಪ್ಪಿಸುವುದಕ್ಕಾಗಿ ರೈಲ್ವೆ ಮುಂಬೈ ಕಡೆಯಿಂದ ಎಲ್ಲಾ ರೈಲುಗಳಲ್ಲಿ ಬ್ಯಾಂಕರ್‌ಗಳನ್ನು ಬಳಸುತ್ತದೆ.