Happy Birthday Narendra Modi: ಅಮ್ಮನ ಜೊತೆ ಊಟ ಸವಿದು ಹುಟ್ಟುಹಬ್ಬ ಆಚರಿಸಿಕೊಂಡ ಪ್ರಧಾನಿ ಮೋದಿ

ಇಂದು 69ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಗುಜರಾತ್​ನ ಗಾಂಧಿನಗರದಲ್ಲಿರುವ ತಮ್ಮ ಮನೆಗೆ ತೆರಳಿ ತಾಯಿ ಹೀರಾಬೆನ್ ಅವರಿಂದ ಆಶೀರ್ವಾದ ಪಡೆದಿದ್ದಾರೆ. ತಾಯಿಯೊಂದಿಗೆ ಕೆಲಕಾಲ ಮಾತನಾಡಿದ ಮೋದಿ ಅಮ್ಮನ ಆರೋಗ್ಯ ವಿಚಾರಿಸಿದ್ದಾರೆ. ಇಂದು ಮಧ್ಯಾಹ್ನ ತಾಯಿಯೊಂದಿಗೆ ಮೋದಿ ಊಟ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಧಾನಿ ಮೋದಿ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಅಮ್ಮನೊಂದಿಗೆ ಆಚರಿಸಿಕೊಂಡ ಫೋಟೋಗಳು ಇಲ್ಲಿವೆ...

First published: