31 ವರ್ಷದ ರೂಪದರ್ಶಿ ಥೆರೆಸಿಯಾ ಫಿಶರ್ ಎಂಬಾಕೆ ಎತ್ತರವನ್ನು ಹೆಚ್ಚಿಸಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ತನ್ನ ಎತ್ತರವನ್ನು 5.5 ಇಂಚುಗಳಷ್ಟು ಹೆಚ್ಚಿಸಿಕೊಂಡಿದ್ದಾರೆ. ಈಕೆ ಬಿಗ್ ಬ್ರದರ್ ಶೋನ ಜರ್ಮನ್ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಆಕೆ ಕಾಲುಗಳ ಬಗ್ಗೆ ಹಲವು ಅಪಹಾಸ್ಯಗಳನ್ನು ಕೇಳಿದ ನಂತರ, ಅವುಗಳನ್ನು ಹೆಚ್ಚಿಸಲು ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ಡೈಲಿ ಸ್ಟಾರ್ ವರದಿಯ ಪ್ರಕಾರ, 2 ಆಪರೇಷನ್‌ಗಳಿಗೆ ಒಳಗಾದ ನಂತರ, ಥೆರೆಸಿಯಾ ತನ್ನ ಕಾಲುಗಳಲ್ಲಿ ಟೆಲಿಸ್ಕೋಪಿಕ್ ರಾಡ್‌ಗಳನ್ನು ಶಸ್ತ್ರಚಿಕಿತ್ಸೆ ಸೇರಿಸಿ ಎತ್ತರವನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಆಕೆಯ ಉದ್ದ 6 ಅಡಿಗಳಿಗೆ ಏರಿದೆ. ವೈದ್ಯರು ಆಪರೇಷನ್ ನಂತರ 14 ಸೆಂ.ಮೀ ಉದ್ದದ ಉಡುಗೊರೆಯನ್ನು ನೀಡಿದೆ. ಇದರಿಂದಾಗಿ ಅವರು ಸಾಕಷ್ಟು ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಆಕೆ ಹೇಳಿಕೊಂಡಿದ್ದಾರೆ.