ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ಮಿಜೋರಾಂ, ತ್ರಿಪುರಾ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ಈಶಾನ್ಯದ 8 ರಾಜ್ಯಗಳಾಗಿವೆ. ಸಿಕ್ಕಿಂ ಹೊರತುಪಡಿಸಿ, ಎಲ್ಲಾ ಇತರ 7 ರಾಜ್ಯಗಳು ಒಟ್ಟಿಗೆ ಸಂಪರ್ಕ ಹೊಂದಿವೆ. ಈ ಕಾರಣದಿಂದಾಗಿ ಅವುಗಳನ್ನ 7 ಸಹೋದರಿಯರು ಎಂದೂ ಕರೆಯಲಾಗುತ್ತದೆ. ಇವುಗಳ ಪೈಕಿ ಮಿಜೋರಾಂ ಅತ್ಯಂತ ಸಂತೋಷದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. (ಸಾಂದರ್ಭಿಕ ಚಿತ್ರ)
ಎನ್‌ಡಿಟಿವಿಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮಿಜೋರಾಂನ ಹ್ಯಾಪಿನೆಸ್ ಇಂಡೆಕ್ಸ್ ಅನ್ನು ಕುಟುಂಬ ಸಂಬಂಧಗಳು, ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು ಮತ್ತು ಸಾಮಾಜಿಕ ಉಪಕಾರ, ಧರ್ಮ, ದೈಹಿಕ ಮತ್ತು ಮಾನಸಿಕ ಆರೋಗ್ಯ ಮತ್ತು ಸಂತೋಷ ಮೇಲೆ ಕೋವಿಡ್-19 ಪ್ರಭಾವವನ್ನು ಒಳಗೊಂಡಿರುವ 6 ವಿಷಯಗಳ ಮೇಲೆ ಈ ವರದಿ ಬಿಡುಗಡೆ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)
ಇನ್ನೂ ಈ ರಾಜ್ಯದಲ್ಲಿ ವಿಘಟಿತ ಕುಟುಂಬಗಳ ಸಂಖ್ಯೆ ಹೆಚ್ಚಿವೆ. ಆದರೆ ಚಿಕ್ಕಂದಿನಲ್ಲೇ ಸಂಪಾದನೆ ಆರಂಭಿಸುವುದರಿಂದ ಪ್ರತಿಯೊಬ್ಬರಿಗೂ ಉದ್ಯೋಗಾವಕಾಶಗಳಿರುವುದರಿಂದ ಇದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ, ಅವರು ಗಳಿಸುವ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ಪಡೆದಿರುತ್ತಾರೆ. ಪುರುಷ ಮತ್ತು ಮಹಿಳೆ ಇಬ್ಬರಿಗೂ ತಮ್ಮ ಜೀವನವನ್ನು ನಡೆಸಲು ಕಲಿಸಿದಾಗ, ಅವರು ಪರಸ್ಪರ ಅವಲಂಬಿತರಾಗಿರುವುದಿಲ್ಲ ಎಂದು ಅಲ್ಲಿನ ಜನ ಹೇಳುತ್ತಾರೆ. (ಸಾಂದರ್ಭಿಕ ಚಿತ್ರ)