ಎಷ್ಟು ಸಮಯವಾದರೂ ಬಾಲಕಿ ಬಾರದೇ ಇದ್ದಿದ್ದರಿಂದ ತಾಯಿ ಚಿಂತಿತರಾಗಿದ್ದರು. ಮನೆಯಲ್ಲಿ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರಲಿಲ್ಲ. ಆದರೆ ಪಕ್ಕದ ಗದ್ದೆಯಿಂದ ಹುಡುಗಿಯೊಬ್ಬಳು ಅಳುತ್ತಿರುವ ಸದ್ದು ಕೇಳಿ ಎಲ್ಲರೂ ಅಲ್ಲಿಗೆ ಧಾವಿಸಿದ್ದಾರೆ. ಗಾಯಗೊಂಡ ಸ್ಥಿತಿಯಲ್ಲಿ ಕಾಣಿಸಿಕೊಂಡ ಮಗಳನ್ನು ಕಂಡು ತಾಯಿ ಕಣ್ಣೀರಿಟ್ಟರು. ತಕ್ಷಣ ಕುಟುಂಬಸ್ಥರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.