Millets Food Festival: ಇಂದು ಪಾರ್ಲಿಮೆಂಟ್ನಲ್ಲಿ ಸಂಸದರಿಗೆ ಸಿರಿಧಾನ್ಯ ಭೋಜನ- ಏನೆಲ್ಲಾ ಮೆನು ಇದೆ ಗೊತ್ತೇ?
ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-2023ರ (International Year of Millets (IYOM) – 2023) ಆಚರಣೆಗಾಗಿ ಕೇಂದ್ರ ಸರ್ಕಾರವು ಇಂದು ಸಂಸತ್ನಲ್ಲಿ(Parliament) ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ಅದೇ ಸಿರಿಧಾನ್ಯ ಆಹಾರ ಉತ್ಸವ(Millets Food Festival).
ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-2023ರ ಆಚರಣೆಗಾಗಿ ಕೇಂದ್ರ ಸರ್ಕಾರವು ಇಂದು ಸಂಸತ್ನಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ಅದೇ ಸಿರಿಧಾನ್ಯ ಆಹಾರ ಉತ್ಸವ.
2/ 7
ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದು, ಉತ್ಸವಕ್ಕೆ ಹೆಚ್ಚಿನ ಮೆರಗು ಬರಲಿದೆ.
3/ 7
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಅವರು ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗೆ ಈ ವಿಶೇಷ ಸಿರಿಧಾನ್ಯ ಭೋಜನವನ್ನು ಆಯೋಜಿಸಿದ್ದಾರೆ.
4/ 7
ಸಂಸತ್ನ ಆವರಣದಲ್ಲಿ ಈ ವಿಶೇಷ ಭೋಜನ ಕೂಟವನ್ನು ಏರ್ಪಡಿಸಲಾಗಿದ್ದು, ದೇಶದ ಎಲ್ಲಾ ಸಂಸತ್ ಸಂಸದರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
5/ 7
ಈ ಸಿರಿಧಾನ್ಯ ಭೋಜನ ಕಾರ್ಯಕ್ರಮದಲ್ಲಿ ವಿಶೇಷವಾಗಿ ಕರ್ನಾಟಕದ ರಾಗಿ ಭೋಜನವನ್ನು ಉಣಬಡಿಸಲಾಗುತ್ತದೆ. ಹೀಗಾಗಿ ಕರ್ನಾಟಕದ ಬಾಣಸಿಗರು ಈಗಾಗಲೇ ದೆಹಲಿಗೆ ತೆರಳಿದ್ದಾರೆ. ಅಲ್ಲಿ ಅವರು ರಾಗಿ ಇಡ್ಲಿ, ರಾಗಿ ದೋಸೆ ಸೇರಿದಂತೆ, ಸಿರಿಧಾನ್ಯಗಳ ವಿಶೇಷ ಖಾದ್ಯಗಳನ್ನು ತಯಾರಿಸಲಿದ್ದಾರೆ.
6/ 7
ಇಷ್ಟೇ ಅಲ್ಲದೇ, ಉತ್ತರ ಕರ್ನಾಟಕದ ಫೇಮಸ್ ಜೋಳದ ರೊಟ್ಟಿ, ದಕ್ಷಿಣ ಕರ್ನಾಟಕದ ರಾಗಿ ರೊಟ್ಟಿ, ಸಜ್ಜೆ ಕಿಚಡಿ, ಜೋಳದ ಕಿಚಡಿ, ಸಜ್ಜೆ ಪಾಯಸ.. ಹೀಗೆ ಸಿರಿಧಾನ್ಯಗಳಿಂದಲೇ ಅನೇಕ ಖಾದ್ಯಗಳನ್ನು ರುಚಿಯಾಗಿ ಉಣಬಡಿಸಲಿದ್ದಾರೆ.
7/ 7
ಈ ಕಾರ್ಯಕ್ರಮವನ್ನು ಸಿರಿಧಾನ್ಯ ಸೇವನೆಯ ಸಂಸ್ಕೃತಿಗೆ ಉತ್ತೇಜನ ನೀಡುವ ಸಲುವಾಗಿ ಆಯೋಜಿಸಲಾಗಿದೆ. ಪ್ರಧಾನಿ ಮೋದಿ ಸೇರಿದಂತೆ, ಎಲ್ಲಾ ಸಂಸತ್ ಸದಸ್ಯರು ಈ ಸಿರಿಧಾನ್ಯ ಭೋಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕರುನಾಡಿನ ಊಟ ಸವಿಯಲಿದ್ದಾರೆ.