Tirumala: ಭಕ್ತರಿಗೆ ಈಗಲೂ ಪಂಗನಾಮ ಹಾಕ್ತಾರಾ ದಲ್ಲಾಳಿಗಳು? ಇವ್ರನ್ನು ನಂಬಿದ್ರೆ ಗೋವಿಂದಾ!

ಭಾರೀ ಜನದಟ್ಟಣೆಯ ಸಂದರ್ಭದಲ್ಲಿ ಸಾಮಾನ್ಯ ಭಕ್ತರಿಗೆ ಟಿಟಿಡಿ 5 ವಸತಿ ಸಂಕೀರ್ಣಗಳನ್ನು ಒದಗಿಸುತ್ತದೆ. ಈ ವಸತಿ ಸಂಕೀರ್ಣಗಳಲ್ಲಿ ಕೇವಲ 50 ರೂ.ಗಳಿಂದ ಭಕ್ತರಿಗೆ ರೂಮ್​ಗಳನ್ನು ನೀಡಲಾಗುತ್ತದೆ. 

 • Local18
 • |
 •   | Andhra Pradesh, India
First published:

 • 19

  Tirumala: ಭಕ್ತರಿಗೆ ಈಗಲೂ ಪಂಗನಾಮ ಹಾಕ್ತಾರಾ ದಲ್ಲಾಳಿಗಳು? ಇವ್ರನ್ನು ನಂಬಿದ್ರೆ ಗೋವಿಂದಾ!

  ಕಲಿಯುಗ ವೈಕುಂಠದ ಎಂದೇ ಖ್ಯಾತವಾದ ತಿರುಮಲದ ದರ್ಶನ ಮಾಡಿ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಬೇಕೆಂಬ ಆಸೆ ಹಲವರಿಗೆ ಇರುತ್ತೆ. ಆದರೆ ದರ್ಶನದ ಟೋಕನ್ ಸಿಗುವುದೇ ಕಷ್ಟ. ದರ್ಶನಕ್ಕೆ ಕೆಲ ಗಂಟೆಗಳ ಕಾಲ ಸರತಿ ಸಾಲಲ್ಲಿ ಕಾಯಬೇಕಾಗುತ್ತೆ. ಮತ್ತೊಂದೆಡೆ ತಿರುಮಲದಲ್ಲಿ ಕೊಠಡಿಗಳು ಸಿಗದೆ ಸಂಕಷ್ಟಕ್ಕೆ ಸಿಲುಕುವ ಕಷ್ಟವೂ ಇದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 29

  Tirumala: ಭಕ್ತರಿಗೆ ಈಗಲೂ ಪಂಗನಾಮ ಹಾಕ್ತಾರಾ ದಲ್ಲಾಳಿಗಳು? ಇವ್ರನ್ನು ನಂಬಿದ್ರೆ ಗೋವಿಂದಾ!

  ಕಲಿಯುಗದ ರಕ್ಷಣೆಗಾಗಿ ವೈಕುಂಠದಲ್ಲಿ ನೆಲೆಸಿದ ಏಳು ಬೆಟ್ಟಗಳ ಮೇಲೆ ನೆಲೆಸಿದ್ದಾನೆ ಎಂದೇ ಭಕ್ತರು ನಂಬುತ್ತಾರೆ. ದೇಶ ವಿದೇಶಗಳಿಂದ ನಿತ್ಯವೂ ಲಕ್ಷಾಂತರ ಭಕ್ತರು ತಿರುಮಲಕ್ಕೆ ಆಗಮಿಸುತ್ತಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 39

  Tirumala: ಭಕ್ತರಿಗೆ ಈಗಲೂ ಪಂಗನಾಮ ಹಾಕ್ತಾರಾ ದಲ್ಲಾಳಿಗಳು? ಇವ್ರನ್ನು ನಂಬಿದ್ರೆ ಗೋವಿಂದಾ!

  ಹೀಗೆ ದೂರ ದೂರದ ಊರುಗಳಿಂದ ಬರುವ ಭಕ್ತರು ತಮ್ಮ ಇಷ್ಟದೈವ ತಿಮ್ಮಪ್ಪನ ಸನ್ನಿಧಿಯಲ್ಲಿ ಒಂದು ದಿನ ಉಳಿಯಲು ಬಯಸುತ್ತಾರೆ. ಆದರೆ ಈ ಭಕ್ತರು ವಸತಿ ಸೌಕರ್ಯ ಸಿಗದೆ ಪರದಾಡುತ್ತಿದ್ದಾರೆ. ಜೊತೆಗೆ ಪ್ರಸಾದ ರೂಪದ ಲಡ್ಡುವೂ ಹಲವರಿಗೆ ಸಿಗುತ್ತಿಲ್ಲ. (ಸಾಂದರ್ಭಿಕ ಚಿತ್ರ)

  MORE
  GALLERIES

 • 49

  Tirumala: ಭಕ್ತರಿಗೆ ಈಗಲೂ ಪಂಗನಾಮ ಹಾಕ್ತಾರಾ ದಲ್ಲಾಳಿಗಳು? ಇವ್ರನ್ನು ನಂಬಿದ್ರೆ ಗೋವಿಂದಾ!

  ಇಂತಹ ಸಮಸ್ಯೆಗಳನ್ನು ಪರಿಹರಿಸಲು ಟಿಟಿಡಿ ತಿರುಮಲದಲ್ಲಿ ಕೊಠಡಿಗಳ ಹಂಚಿಕೆಯಲ್ಲಿ ಸರದಿ ವ್ಯವಸ್ಥೆಯನ್ನು ಪರಿಚಯಿಸಿದೆ. ತಿರುಮಲದಲ್ಲಿ ಭಕ್ತರ ವಸತಿಗೆ ಎಂದೇ ಸುಮಾರು 7000 ಕೊಠಡಿಗಳನ್ನು ಟಿಟಿಡಿ ಆರಂಭಿಸಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 59

  Tirumala: ಭಕ್ತರಿಗೆ ಈಗಲೂ ಪಂಗನಾಮ ಹಾಕ್ತಾರಾ ದಲ್ಲಾಳಿಗಳು? ಇವ್ರನ್ನು ನಂಬಿದ್ರೆ ಗೋವಿಂದಾ!

  ಈಗಿರುವ ಕೊಠಡಿಗಳಲ್ಲಿ ಐನೂರು ಕೊಠಡಿಗಳನ್ನು ವಿವಿಐಪಿ ಭಕ್ತರಿಗೆ ಹಂಚಿಕೆ ಮಾಡಲಾಗಿದೆ. ಜೊತೆಗೆ ಶಿಫಾರಸು ಪತ್ರಗಳನ್ನು ತಂದವರಿಗೆ ಎಂದು ಐನೂರರಿಂದ ಒಂದು ಸಾವಿರ ಕೊಠಡಿಗಳನ್ನು ಒದಗಿಸಲಾಗಿದೆ. ಇನ್ನುಳಿದ ಸಾಮಾನ್ಯ ಭಕ್ತರಿಗೆ ಪ್ರತಿದಿನ 5000 ಕೊಠಡಿಗಳನ್ನು ನಿಗದಿಪಡಿಸಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 69

  Tirumala: ಭಕ್ತರಿಗೆ ಈಗಲೂ ಪಂಗನಾಮ ಹಾಕ್ತಾರಾ ದಲ್ಲಾಳಿಗಳು? ಇವ್ರನ್ನು ನಂಬಿದ್ರೆ ಗೋವಿಂದಾ!

  ಭಾರೀ ಜನದಟ್ಟಣೆಯ ಸಂದರ್ಭದಲ್ಲಿ ಸಾಮಾನ್ಯ ಭಕ್ತರಿಗೆ ಟಿಟಿಡಿ 5 ವಸತಿ ಸಂಕೀರ್ಣಗಳನ್ನು ಒದಗಿಸುತ್ತದೆ. ಈ ವಸತಿ ಸಂಕೀರ್ಣಗಳಲ್ಲಿ ಕೇವಲ 50 ರೂ.ಗಳಿಂದ ಭಕ್ತರಿಗೆ ರೂಮ್​ಗಳನ್ನು ನೀಡಲಾಗುತ್ತದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 79

  Tirumala: ಭಕ್ತರಿಗೆ ಈಗಲೂ ಪಂಗನಾಮ ಹಾಕ್ತಾರಾ ದಲ್ಲಾಳಿಗಳು? ಇವ್ರನ್ನು ನಂಬಿದ್ರೆ ಗೋವಿಂದಾ!

  ಜೊತೆಗೆ ತಿರುಮಲದಲ್ಲಿ ಇನ್ನೊಂದು ವಸತಿ ಸಂಕೀರ್ಣ ನಿರ್ಮಾಣದ ಹಂತದಲ್ಲಿದೆ. ಜನರ ದಟ್ಟಣೆಯ ಸಮಯದಲ್ಲಿ ವಸತಿ ನಿಲಯಗಳಲ್ಲಿ ಭಕ್ತರಿಗೆ ಗೊಂದಲ ಉಂಟಾಗುತ್ತದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 89

  Tirumala: ಭಕ್ತರಿಗೆ ಈಗಲೂ ಪಂಗನಾಮ ಹಾಕ್ತಾರಾ ದಲ್ಲಾಳಿಗಳು? ಇವ್ರನ್ನು ನಂಬಿದ್ರೆ ಗೋವಿಂದಾ!

  ಆಧಾರ್ ಕಾರ್ಡ್ ದಾಖಲೆ ನೀಡಿ ಒಮ್ಮೆ ಕೊಠಡಿಗಳನ್ನು ಪಡೆದ ಭಕ್ತರು 30 ದಿನಗಳ ನಂತರ ಮತ್ತೊಮ್ಮೆ ಕೊಠಡಿಗಳನ್ನು ಪಡೆಯಬಹುದು. ಟಿಟಿಡಿ ಅಧಿಕಾರಿಗಳ ಪ್ರಕಾರ ಮಾರ್ಚ್ 1 ರಿಂದ 12 ರವರೆಗೆ ಕೊಠಡಿಗಳ ಹಂಚಿಕೆಯಿಂದ ಗರಿಷ್ಠ 2.95 ಕೋಟಿ ರೂ. ಆದಾಯ ಹರಿದುಬಂದಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 99

  Tirumala: ಭಕ್ತರಿಗೆ ಈಗಲೂ ಪಂಗನಾಮ ಹಾಕ್ತಾರಾ ದಲ್ಲಾಳಿಗಳು? ಇವ್ರನ್ನು ನಂಬಿದ್ರೆ ಗೋವಿಂದಾ!

  ನೀನು ಚಾಪೆ ಕೆಳಗೆ ತೂರಿದರೆ, ನಾನು ರಂಗೋಲಿ ಕೆಳಗೆ ತೂರುತ್ತೇನೆ ಎಂಬ ಮಾತಿನಂತೆ ಈ ಹೊಸ ಪದ್ಧತಿಯನ್ನೂ ಮೀರಿಸಿ ದಲ್ಲಾಳಿಗಳು ಭಕ್ತರಿಗೆ ಮೋಸ ಮಾಡದಿದ್ದರೆ ಸಾಕು ಅಂತಿದ್ದಾರೆ ಭಕ್ತರು. (ಸಾಂದರ್ಭಿಕ ಚಿತ್ರ)

  MORE
  GALLERIES