Ernest Mawrie: ನಾನು ಗೋಮಾಂಸ ತಿನ್ನುತ್ತೇನೆ ಎಂದಿದ್ದ ಮೇಘಾಲಯ ಬಿಜೆಪಿ ರಾಜ್ಯಾಧ್ಯಕ್ಷನಿಗೆ ಸಿಕ್ಕಿದ್ದು 3771 ಮತಗಳು!

ಈಶಾನ್ಯ ಭಾರತದ ಮೂರು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಹೊರ ಬಂದಿದೆ. ನಿರೀಕ್ಷೆಯಂತೆಯೇ ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಬಹುಮತ ಸಾಧಿಸಿದ್ದರೆ, ಇತ್ತ ಮೇಘಾಲಯದಲ್ಲಿ ಅತಂತ್ರ ಫಲಿತಾಂಶ ಹೊರ ಬಿದ್ದಿದೆ. ಅದಾಗ್ಯೂ ಬಿಜೆಪಿ ಪಕ್ಷ ಎನ್‌ಪಿಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಮಧ್ಯೆ ಚುನಾವಣಾ ಫಲಿತಾಂಶದಲ್ಲಿ ಹತ್ತಾರು ಇಂಟರೆಸ್ಟಿಂಗ್‌ ಸಂಗತಿಗಳು ನಡೆದಿದ್ದು, ವಿಶೇಷವಾಗಿ ಮೇಘಾಲಯದ ಬಿಜೆಪಿ ರಾಜ್ಯಾಧ್ಯಕ್ಷನಿಗೇ ಸೋಲುಂಟಾಗಿದೆ.

First published:

 • 17

  Ernest Mawrie: ನಾನು ಗೋಮಾಂಸ ತಿನ್ನುತ್ತೇನೆ ಎಂದಿದ್ದ ಮೇಘಾಲಯ ಬಿಜೆಪಿ ರಾಜ್ಯಾಧ್ಯಕ್ಷನಿಗೆ ಸಿಕ್ಕಿದ್ದು 3771 ಮತಗಳು!

  ಹೌದು.. ಮೇಘಾಲಯ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಆರ್ನೆಸ್ಟ್‌ ಮಾವ್ರಿ ಅವರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋಲು ಉಂಟಾಗಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಮಾವ್ರಿಗೆ ಈ ಸೋಲು ತೀವ್ರ ಆಘಾತ ತಂದಿದೆ.

  MORE
  GALLERIES

 • 27

  Ernest Mawrie: ನಾನು ಗೋಮಾಂಸ ತಿನ್ನುತ್ತೇನೆ ಎಂದಿದ್ದ ಮೇಘಾಲಯ ಬಿಜೆಪಿ ರಾಜ್ಯಾಧ್ಯಕ್ಷನಿಗೆ ಸಿಕ್ಕಿದ್ದು 3771 ಮತಗಳು!

  ಆರ್ನೆಸ್ಟ್ ಮಾವ್ರಿ ಅವರು ಪಶ್ಚಿಮ ಶಿಲ್ಲೊಂಗ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಆದರೆ ಅವರು ಕೇವಲ 3771 (20.07%) ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

  MORE
  GALLERIES

 • 37

  Ernest Mawrie: ನಾನು ಗೋಮಾಂಸ ತಿನ್ನುತ್ತೇನೆ ಎಂದಿದ್ದ ಮೇಘಾಲಯ ಬಿಜೆಪಿ ರಾಜ್ಯಾಧ್ಯಕ್ಷನಿಗೆ ಸಿಕ್ಕಿದ್ದು 3771 ಮತಗಳು!

  ಆ ಕ್ಷೇತ್ರದಲ್ಲಿ ಯುಡಿಪಿಯ ಪಾಲ್ ಲಿಂಗ್ಡೋ 7917 (42.14) ಮತಗಳನ್ನು ಪಡೆದು ಜಯಗಳಿಸಿದರೆ, ತಮ್ಮ ಪ್ರತಿಸ್ಪರ್ಧಿ ಎನ್‌ಪಿಪಿಯ ಮಹೇಂದ್ರೋ ರಾಪ್ಸಂಗ್ 4432 (23.59%) ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

  MORE
  GALLERIES

 • 47

  Ernest Mawrie: ನಾನು ಗೋಮಾಂಸ ತಿನ್ನುತ್ತೇನೆ ಎಂದಿದ್ದ ಮೇಘಾಲಯ ಬಿಜೆಪಿ ರಾಜ್ಯಾಧ್ಯಕ್ಷನಿಗೆ ಸಿಕ್ಕಿದ್ದು 3771 ಮತಗಳು!

  ವಿಶೇಷ ಅಂದ್ರೆ ಇತ್ತೀಚೆಗೆ ಆರ್ನೆಸ್ಟ್‌ ಮಾವ್ರಿ ಅವರು ಗೋಮಾಂಸ ವಿಚಾರದಲ್ಲಿ ಸುದ್ದಿಯಾಗಿದ್ದರು. ನಾನು ಗೋಮಾಂಸ ತಿನ್ನುತ್ತೇನೆ ಮತ್ತು ಬಿಜೆಪಿ ಮೇಘಾಲಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಗೋಮಾಂಸ ತಿನ್ನುವ ಜನರ ಮೇಲೆ ಯಾವುದೇ ನಿರ್ಬಂಧ ಹೇರುವುದಿಲ್ಲ ಎಂದು ಹೇಳಿ ಸುದ್ದಿಯಾಗಿದ್ದರು.

  MORE
  GALLERIES

 • 57

  Ernest Mawrie: ನಾನು ಗೋಮಾಂಸ ತಿನ್ನುತ್ತೇನೆ ಎಂದಿದ್ದ ಮೇಘಾಲಯ ಬಿಜೆಪಿ ರಾಜ್ಯಾಧ್ಯಕ್ಷನಿಗೆ ಸಿಕ್ಕಿದ್ದು 3771 ಮತಗಳು!

  ಆರ್ನೆಸ್ಟ್ ಮಾವ್ರಿ ಅವರು ಗೋಮಾಂಸ ಕುರಿತ ಹೇಳಿಕೆ ನೀಡಿದ ಬೆನ್ನಲ್ಲೇ ವಿಪಕ್ಷಗಳು ಬಿಜೆಪಿಯ ದ್ವಂದ್ವ ನೀತಿಯ ವಿರುದ್ಧ ವ್ಯಂಗ್ಯವಾಡಿದ್ದವು. ಇದೀಗ ಕಾಕತಾಳೀಯ ಎಂಬಂತೆ ಆರ್ನೆಸ್ಟ್ ಮಾವ್ರಿ ಸೋಲನ್ನು ಅವರು ನೀಡಿದ ಗೋಮಾಂಸ ಕುರಿತ ಹೇಳಿಕೆಗೆ ತಳುಕು ಹಾಕಲಾಗ್ತಿದೆ.

  MORE
  GALLERIES

 • 67

  Ernest Mawrie: ನಾನು ಗೋಮಾಂಸ ತಿನ್ನುತ್ತೇನೆ ಎಂದಿದ್ದ ಮೇಘಾಲಯ ಬಿಜೆಪಿ ರಾಜ್ಯಾಧ್ಯಕ್ಷನಿಗೆ ಸಿಕ್ಕಿದ್ದು 3771 ಮತಗಳು!

  ಮತದಾನ ಎಣಿಕೆಗೆ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ್ದ ಆರ್ನೆಸ್ಟ್‌ ಮಾವ್ರಿ, ನಾವು ಈ ಬಾರಿ ಕನಿಷ್ಠ 10ರಿಂದ 15 ಸೀಟುಗಳನ್ನು ಗೆಲ್ಲಲಿದ್ದೇವೆ. ನಮ್ಮನ್ನು ಹೊರಗಿಟ್ಟು ಮೇಘಾಲಯದಲ್ಲಿ ಯಾರೂ ಸರಕಾರ ರಚಿಸುವುದು ಸಾಧ್ಯವಿಲ್ಲ ಎಂದು ಹೇಳಿದ್ದರು.

  MORE
  GALLERIES

 • 77

  Ernest Mawrie: ನಾನು ಗೋಮಾಂಸ ತಿನ್ನುತ್ತೇನೆ ಎಂದಿದ್ದ ಮೇಘಾಲಯ ಬಿಜೆಪಿ ರಾಜ್ಯಾಧ್ಯಕ್ಷನಿಗೆ ಸಿಕ್ಕಿದ್ದು 3771 ಮತಗಳು!

  ಮೇಘಾಲಯದಲ್ಲಿ ಅತಂತ್ರ ಫಲಿತಾಂಶ ಬಂದಿದ್ದು ಆಡಳಿತಾರೂಢ ಎನ್‌ಪಿಪಿ 26 ಸ್ಥಾನಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರಳ ಬಹುಮತಕ್ಕೆ ಇನ್ನೂ 5 ಸ್ಥಾನಗಳ ಕೊರತೆಯಿದೆ.

  MORE
  GALLERIES