Modi In France: ಮೋದಿ-ಮ್ಯಾಕ್ರಾನ್ ಭೇಟಿ, ಇಲ್ಲಿವೆ ಫೋಟೋಸ್
Modi In France: ಮೂರು ರಾಷ್ಟ್ರಗಳ ಯುರೋಪಿಯನ್ ಪ್ರವಾಸದ ಕೊನೆಯ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಪ್ಯಾರಿಸ್ಗೆ ಆಗಮಿಸಿದರು. ಇಲ್ಲಿ ಅವರನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಅವರು ದ್ವಿಪಕ್ಷೀಯ ಮತ್ತು ಪರಸ್ಪರ ಆಸಕ್ತಿಯ ವಿಷಯಗಳನ್ನು ಚರ್ಚಿಸಿದರು. ಮೋದಿ-ಮ್ಯಾಕ್ರಾನ್ ಭೇಟಿಯ ಫೋಟೋಗಳನ್ನು ನೋಡಿ
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಹಳೆಯ ಸ್ನೇಹಿತನಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ವೇಳೆ ಅವರು ಪ್ರಧಾನಿ ಭುಜದ ಮೇಲೆ ಕೈ ಹಾಕಿ ಕಾಣಿಸಿಕೊಂಡರು.
2/ 7
ಪ್ಯಾರಿಸ್ನ ಎಲಿಸೀ ಪ್ಯಾಲೇಸ್ನಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್ ಕೂಡ ಉಪಸ್ಥಿತರಿದ್ದರು.
3/ 7
ಮ್ಯಾಕ್ರನ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಿದ ಒಂದು ದಿನದ ನಂತರ ಪ್ರಧಾನಿ ಮೋದಿ ಫ್ರಾನ್ಸ್ಗೆ ಆಗಮಿಸಿದರು. ಈ ವೇಳೆ ಇಬ್ಬರೂ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು.
4/ 7
ಫ್ರಾನ್ಸ್ ಮತ್ತು ಭಾರತ ನಡುವಿನ ಸಂಬಂಧಗಳು ತುಂಬಾ ಚೆನ್ನಾಗಿವೆ. ಕಳೆದ ವರ್ಷಗಳಲ್ಲಿ ಭಾರತವು ಫ್ರಾನ್ಸ್ನಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸಿದೆ.
5/ 7
ಭಾರತವು ಫ್ರಾನ್ಸ್ನಿಂದ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ. ಇನ್ನೂ ಕೆಲವು ರಫೇಲ್ ವಿಮಾನಗಳ ಕುರಿತು ಮಾತುಕತೆ ನಡೆಯುತ್ತಿದೆ.
6/ 7
ಪ್ಯಾರಿಸ್ನಲ್ಲಿ ಅವರಿಗೆ ಭಾರತೀಯ ವಲಸಿಗರ ಸದಸ್ಯರು ಆತ್ಮೀಯ ಸ್ವಾಗತವನ್ನು ನೀಡಿದರು. ಪ್ಯಾರಿಸ್ ತಲುಪಿದ ನಂತರ, ಪ್ರಧಾನಿ ಮೋದಿ ತಂಗಲು ತಲುಪಿದ ಹೋಟೆಲ್ನ ಹೊರಗೆ ಭಾರತೀಯ ಸಮುದಾಯದ ಜನರು ಉಪಸ್ಥಿತರಿದ್ದರು.
7/ 7
ಮೋದಿ ಅವರನ್ನು ಸ್ವಾಗತಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳೂ ಸೇರಿದ್ದರು. ಈ ವೇಳೆ ಹಲವು ಮಕ್ಕಳು ಪ್ರಧಾನಿಯವರಿಂದ ಆಟೋಗ್ರಾಫ್ ಕೇಳಿದರು.