Shirdi Sai Baba: ಮೇ 1ರಿಂದ ಭಕ್ತರಿಗಿಲ್ಲ ಶಿರಡಿ ಸಾಯಿಬಾಬಾನ ದರ್ಶನ!

ದೇಗುಲದ ಭದ್ರತೆಗಾಗಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ನಿಯೋಜಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಈ ನಿರ್ಧಾರವನ್ನು ವಿರೋಧಿಸಿ ಶಿರಡಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದು, ಸಾಯಿಬಾಬಾ ದೇವಾಲಯದ ಟ್ರಸ್ಟ್ ಬಂದ್​ಗೆ ಕರೆ ನೀಡಿದೆ.

First published:

  • 17

    Shirdi Sai Baba: ಮೇ 1ರಿಂದ ಭಕ್ತರಿಗಿಲ್ಲ ಶಿರಡಿ ಸಾಯಿಬಾಬಾನ ದರ್ಶನ!

    ಮಹಾರಾಷ್ಟ್ರದ ಪ್ರಸಿದ್ಧ ಪುಣ್ಯಕ್ಷೇತ್ರ ಶಿರಡಿಯ ಸಾಯಿಬಾಬಾ ದೇವಾಲಯವನ್ನು ಮೇ 1 ರಿಂದ ಮುಚ್ಚಲಾಗುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

    MORE
    GALLERIES

  • 27

    Shirdi Sai Baba: ಮೇ 1ರಿಂದ ಭಕ್ತರಿಗಿಲ್ಲ ಶಿರಡಿ ಸಾಯಿಬಾಬಾನ ದರ್ಶನ!

    ದೇಗುಲದ ಭದ್ರತೆಗಾಗಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ನಿಯೋಜಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಈ ನಿರ್ಧಾರವನ್ನು ವಿರೋಧಿಸಿ ಶಿರಡಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದು, ಸಾಯಿಬಾಬಾ ದೇವಾಲಯದ ಟ್ರಸ್ಟ್ ಬಂದ್ಗೆ ಕರೆ ನೀಡಿದೆ.

    MORE
    GALLERIES

  • 37

    Shirdi Sai Baba: ಮೇ 1ರಿಂದ ಭಕ್ತರಿಗಿಲ್ಲ ಶಿರಡಿ ಸಾಯಿಬಾಬಾನ ದರ್ಶನ!

    ದೇವಾಲಯದ ಆಡಳಿತ ಮಂಡಳಿಯ ಪ್ರಕಾರ, ಪ್ರಾಥಮಿಕವಾಗಿ ಕೈಗಾರಿಕಾ ಸ್ಥಾಪನೆಗಳು, ಮೆಟ್ರೋ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳನ್ನು ರಕ್ಷಿಸುವ CISF ಪಡೆ ದೇವಾಲಯದ ಭದ್ರತೆಯನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿಲ್ಲ. ಇದುವರೆಗೆ ದೇಗುಲದ ಭದ್ರತೆಯ ಹೊಣೆಯನ್ನು ರಾಜ್ಯ ಪೊಲೀಸರೇ ನಿರ್ವಹಿಸುತ್ತಿದ್ದರು ಎಂದು ತಿಳಿಸಿದೆ.

    MORE
    GALLERIES

  • 47

    Shirdi Sai Baba: ಮೇ 1ರಿಂದ ಭಕ್ತರಿಗಿಲ್ಲ ಶಿರಡಿ ಸಾಯಿಬಾಬಾನ ದರ್ಶನ!

    ಮಹಾರಾಷ್ಟ್ರದ ಅಹಮದ್ನಗರದಲ್ಲಿರುವ ಸಣ್ಣ ಗ್ರಾಮವೊಂದರಲ್ಲಿ ಈ ದೇವಾಲಯವಿದ್ದು, ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಸಾಯಿ ಬಾಬಾನ ದರ್ಶನ ಪಡೆಯಲು ಜಮಾಯಿಸುತ್ತಾರೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಸಾಯಿಬಾಬಾನ ದರ್ಶನ ಪಡೆದು ಜನ ಪುನೀತರಾಗುತ್ತಾರೆ.

    MORE
    GALLERIES

  • 57

    Shirdi Sai Baba: ಮೇ 1ರಿಂದ ಭಕ್ತರಿಗಿಲ್ಲ ಶಿರಡಿ ಸಾಯಿಬಾಬಾನ ದರ್ಶನ!

    ಈ ದೇಗುಲವನ್ನು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (SSST ) ನಿರ್ವಹಿಸುತ್ತಿದ್ದು, ಉಚಿತ ಊಟ, ಶಾಲೆಗಳು ಮತ್ತು ಕಾಲೇಜುಗಳಂತಹ ದತ್ತಿ ಸೌಲಭ್ಯಗಳನ್ನು ನೋಡಿಕೊಳ್ಳುತ್ತಿದೆ. ಆದರೆ ಧಾರ್ಮಿಕ ದೇಗುಲವೊಂದು ಒಡ್ಡುವ ವಿಶಿಷ್ಟ ಭದ್ರತಾ ಸವಾಲುಗಳನ್ನು ನಿಭಾಯಿಸಲು CISF ತರಬೇತಿ ಪಡೆದಿಲ್ಲ. ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯುವವರೆಗೂ ಈ ಬಂದ್ ಮುಂದುವರೆಸಲಾಗುತ್ತದೆ ಎಂದು ಟ್ರಸ್ಟ್ ಹೇಳಿದೆ.

    MORE
    GALLERIES

  • 67

    Shirdi Sai Baba: ಮೇ 1ರಿಂದ ಭಕ್ತರಿಗಿಲ್ಲ ಶಿರಡಿ ಸಾಯಿಬಾಬಾನ ದರ್ಶನ!

    2018 ರಿಂದ, ಸಿಐಎಸ್ಎಫ್ ಶಿರಡಿ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ನೋಡಿಕೊಳ್ಳುತ್ತಿದೆ. ಆದರೆ ಮೇ 1 ರಿಂದ ಶಿರಡಿ ಸಾಯಿಬಾಬಾನ ದೇಗುಲ ಮುಚ್ಚುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    MORE
    GALLERIES

  • 77

    Shirdi Sai Baba: ಮೇ 1ರಿಂದ ಭಕ್ತರಿಗಿಲ್ಲ ಶಿರಡಿ ಸಾಯಿಬಾಬಾನ ದರ್ಶನ!

    ಬಂದ್ ವೇಳೆ ಹೋಟೆಲ್ಗಳು, ಅಂಗಡಿ - ಮುಂಗ್ಗಟ್ಟುಗಳನ್ನು ಮುಚ್ಚಲು ಒತ್ತಾಯಿಸಬಹುದು. ಇದು ಸಾವಿರಾರು ಜನರ ವ್ಯಾಪಾರದ ಮೇಲೆ ಪರಿಣಾಮ ಬೀರಬಹುದು. ಅಲ್ಲದೇ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕಷ್ಟವಾಗಬಹುದು.

    MORE
    GALLERIES