ಮಾರಿಷಸ್ ಕಡಲ ತೀರದಲ್ಲಿ ಜಪಾನ್ ಸರಕು ಸಾಗಣೆಯ ಬೃಹತ್ ಹಡಗು ಹಾನಿಗೀಡಾಗಿ ಮುಳುಗಲಾರಂಭಿಸಿದೆ. ಈ ಬೃಹತ್ ಹಡಗಿನಲ್ಲಿ ಸಾಗಿಸಲಾಗುತ್ತಿದ್ದ ಅಪಾರ ಪ್ರಮಾಣದ ತೈಲ ಸೋರಿಕೆಯಾಗಿದ್ದು, ಸಮುದ್ರ ಪ್ರದೇಶವನ್ನು ವ್ಯಾಪಿಸಿಕೊಂಡಿದೆ. ಇದರಿಂದ ಹಿಂದೂ ಮಹಾಸಾಗರದ ಹವಳದ ದಂಡೆಗಳು, ಮೀನುಗಳು ಸೇರಿದಂತೆ ಜಲಚರಗಳಿಗೆ ಅಪಾಯ ಎದುರಾಗಿದೆ.