ಮುಂಬೈನ ಲೋವರ್ ಪರೇಲ್ ಇಲಾಖೆಯ ಕಮಲಾ ಮಿಲ್ಸ್ ಕಾಂಪೌಂಡ್ನಲ್ಲಿ ತಡರಾತ್ರಿ ನಡೆದ ಭೀಕರ ಅಗ್ನಿ ಅನಾಹುತದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಗಾಯಗೊಂಡ 21 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರಂತದ ಕೆಲ ದೃಶ್ಯಗಳು ಹೀಗಿವೆ 1. ಅಗ್ನಿಶಾಮಕ ದಳದ ಸಿಬ್ಬಂದಿಗಳು December 29, 2017ರಂದು ರಾತ್ರಿ 12:30ಕ್ಕೆ ಕಮಲಾ ಮಿಲ್ಸ್ ಕಾಂಪೌಂಡ್ನಲ್ಲಿ ಹಬ್ಬಿಕೊಂಡಿದ್ದ ಬೆಂಕಿಯನ್ನು ನಂದಿಸಲು ಹರಸಾಹಸಪಡುತ್ತಿರುವುದು(Image: Reuters) 2. ಗಾಯಾಳು ವ್ಯಕ್ತಿಯನ್ನು ಸ್ಟ್ರೆಚರ್ ಮೂಲಕ ಸಾಗಿಸುತ್ತಿರುವ ಸಿಬ್ಬಂದಿ(Image: Reuters) 3. ಬೆಂಕಿ ದುರಂತ ಸಂಭವಿಸಿದ ಕಟ್ಟಡ ಹಾಗೂ ಸುತ್ತಲೂ ಹಬ್ಬಿಕೊಳ್ಳುತ್ತಿರುವ ಬೆಂಕಿ ಜ್ವಾಲೆ(Image: PTI) 4. ಕಮಲಾ ಮಿಲ್ಸ್ ಕಾಂಪೌಂಡ್ನಲ್ಲಿ ಹಬ್ಬಿಕೊಂಡ ಬೆಂಕಿಯನ್ನು ನಂದಿಸಲು ಹರಸಅಹಸಪಡುತ್ತಿರುವ ಅಗ್ನಿಶಾಮಕ ಸಿಬ್ಬಂದಿ (Image: AP) 5. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುತ್ತಿರುವ ಸಿಬ್ಬಂದಿ (Image: PTI) 6. ಬೆಂಕಿ ಕೆನ್ನಾಲಿಗೆಗೆ ಸಂಪೂರ್ಣವಾಗಿ ಭಸ್ಮವಾದ ರೆಸ್ಟೋರೆಂಟ್ನ ಒಂದು ಮೇಲ್ಮೈ ನೋಟ (Image: Reuters) 7. ಬೆಂಕಿ ಸಂಪೂರ್ಣವಾಗಿ ಆರಿದೆಯೇ ಎಂದು ಪರೀಕ್ಷಿಸುತ್ತಿರುವ ಸಿಬ್ಬಂದಿ (Image: Reuters) 8. ರೆಸ್ಟೋರೆಂಟ್ನಲ್ಲಿ ಬೆಂಕಿ ದುರಂತದಲ್ಲಿ ಮೃತಪಟ್ಟವರ ಸ್ನೇಹಿತರು ಆಸ್ಪತ್ರೆಯ ಹೊರಗೆ ಕುಳಿತಿರುವ ದೃಶ್ಯ (Image: Reuters) 9. ಬೆಂಕಿಗಾಹುತಿಯಾದ ರೆಸ್ಟೋರೆಂಟ್ನಲ್ಲಿ ಅಳಿದುಳಿದ ಅವಶೇಷಗಳು(Image: AP) 10. ಬೆಂಕಿ ನಂದಿಸಿದ ಬಳಿಕ ಸುಟ್ಟು ಕರಕಲಾದ ಅವಶೇಷಗಳ ನಡುವೆಯೇ ವಿಶ್ರಾಂತಿ ಪಡೆದುಕೊಳ್ಳುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ(Image: Reuters) 11. ಬೆಂಕಿಗಾಹುತಿಯಾದ ರೆಸ್ಟೋರೆಂಟ್ನ್ನು ಪರಿಶೀಲಿಸುತ್ತಿರುವ ಪೊಲೀಸ್ ಸಿಬ್ಬಂದಿ(Image: PTI) 29 ಬೆಂಕಿಗಾಹುತಿಯಾದ ರೆಸ್ಟೋರೆಂಟ್ನ ಮೇಲ್ಮೈ ನೋಟ(Image: PTI)