Mandsaur: ಹಿಂದೂ ಧರ್ಮಕ್ಕೆ ಮತಾಂತರವಾಗಿ, ಪ್ರೇಮಿ ಜೊತೆ ಸಪ್ತಪದಿ ತುಳಿದ ಮುಸ್ಲಿಂ ಯುವತಿ!

Muslim Girl marry with Hindu Boy in Mandsaur: ಮಂದಸೌರ್‌ನಲ್ಲಿ, ರಾಜಸ್ಥಾನದ ಇಕ್ರಾದ ಮುಸ್ಲಿಂ ಯುವತಿಯೊಬ್ಬಳು ಸನಾತನ ಧರ್ಮ ಸ್ವೀಕರಿಸಿ, ಹಿಂದೂ ಯುವಕ ರಾಹುಲ್ ವರ್ಮಾನನ್ನು ವೇದ ಘೋಷಗಳೊಂದಿಗೆ ವಿವಾಹವಾಗಿದ್ದಾಳೆ. ಈ ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ. ಇಕ್ರಾ ಜೋಧಪುರದ ನಿವಾಸಿಯಾಗಿದ್ದು, ಆಕೆ ತನ್ನ ನೆರೆಮನೆಯ ಯುವಕ ರಾಹುಲ್ ವರ್ಮಾನನ್ನು ಪ್ರೀತಿಸುತ್ತಿದ್ದಳು. ಈ ಪ್ರೇಮಪಯಣ ಬರೋಬ್ಬರಿ 3 ವರ್ಷಗಳ ಕಾಲ ನಡೆದಿದೆ. ಬಳಿಕ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾಳೆ. ತಮ್ಮ ನಿರ್ಧಾರದಂತೆ ಇಬ್ಬರೂ ಮಂದಸೌರ್ ನ ಗಾಯತ್ರಿ ಪರಿವಾರ ದೇವಸ್ಥಾನದಲ್ಲಿ ವೈದಿಕ ವಿಧಿವಿಧಾನಗಳ ಪ್ರಕಾರ ವಿವಾಹವಾದರು. ಮದುವೆಗೆ ಮೊದಲೇ, ಇಕ್ರಾಳನ್ನು ಪವಿತ್ರಗೊಳಿಸಿ ಹಿಂದೂ ಧರ್ಮದ ದೀಕ್ಷೆ ನೀಡಲಾಯಿತು. ಬಳಿಕ ಮದುವೆ ನಡೆಯಿತು. ಇಕ್ರಾಳನ್ನು ಈಗ ಇಶಿಕಾ ಎಂದು ಮರು ನಾಮಕರಣ ಮಾಡಲಾಗಿದೆ.

First published: