ಆಂಧ್ರ ಪ್ರದೇಶದಲ್ಲಿ ಜನಪ್ರಿಯತೆ ಕಡಿಮೆಯಾಗಿರುವ ಟಿಟಿಡಿ ಕಲ್ಯಾಣ ಮಂಟಪಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗುತ್ತಿದೆ ಎಂದು ಟಿಟಿಡಿ ಇಒ ಧರ್ಮಾ ರೆಡ್ಡಿ ಮಾಹಿತಿ ನೀಡಿದ್ದಾರೆ. ಇಂದು ರಾಜಾಂ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕಲ್ಯಾಣ ಮಂಟಗಳ ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡಲು ಜನಪ್ರಿಯತೆ ಕಳೆದುಕೊಂಡಿರುವ ಕಲ್ಯಾಣ ಮಂಟಪಗಳನ್ನು ಪಟ್ಟಿ ಮಾಡಿ ಅವುಗಳನ್ನು ಖಾಸಗಿ ವ್ಯಕ್ತಿಗಳಿಗೆ ವಹಿಸುವ ಮೂಲಕ ಆದಾಯ ಗಳಿಸುವ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸದ್ಯ ಭಕ್ತರಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕಾಲ್ನಡಿಗೆ ಮಾರ್ಗದಲ್ಲಿ ಬರುವ ಭಕ್ತಿಗೆ ಟಿಕೆಟ್ ನೀಡಲು ಟಿಟಿಡಿ ನಿರ್ಧಾರ ಮಾಡಿದೆ. ಮೆಟ್ಟಿಲು ಮಾರ್ಗದ ಮೂಲಕ ತಿರುಮಲಕ್ಕೆ ಬರುವ ಭಕ್ತರು ಬೆಟದ ಮೇಲೆ ಬರುತ್ತಿದ್ದಂತೆ ಸುಸ್ತಾಗಿರುತ್ತಾರೆ. ಇಂತಹ ಭಕ್ತರಿಗೆ ದಿವ್ಯಾ ದರ್ಶನ ಟಿಕೆಟ್ ನೀಡುವ ಮೂಲಕ ಸ್ವಾಮಿಯ ದರ್ಶನ ಸುಲಭವಾಗಿ ಸಿಗುವಂತೆ ಮಾಡಲು ಟಿಟಿಡಿ ನಿರ್ಧಾರ ಮಾಡಿದೆ. (ಸಾಂದರ್ಭಿಕ ಚಿತ್ರ)