ಯುಎಸ್ ಎ ಟುಡೇ ವರದಿಯ ಪ್ರಕಾರ, ಫುಲ್ಟನ್ ಕೌಂಟಿ ವೈದ್ಯಕೀಯ ಪರೀಕ್ಷಕರ ವರದಿಯಲ್ಲಿ ಹೇಳಿರುವಂತೆ ಸೆಪ್ಟೆಂಬರ್ 22 ರಂದು ಅಧಿಕಾರಿಗಳು ಆತನಿಂದ ಹೇಳಿಕೆ ಪಡೆದುಕೊಳ್ಳಲು ತೆರಳಿ ಕೂಗಿದ್ದಾರೆ. ಆದರೆ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಕ್ಷಣ ಸ್ಥಳೀಯ ಪೋಲೀಸ್ ಮತ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಈ ವೇಳೆ ಲಾಶಾನ್ ಥಾಂಪ್ಸನ್ ಜೀವನ್ಮರಣದ ಪರಿಸ್ಥಿತಿಯಲ್ಲಿದ್ದ ಎಂದು ತಿಳಿದುಬಂದಿದೆ.
ನಂತರ ಥಾಂಪ್ಸನ್ನನ್ನು ಉಳಿಸಲು ಸಾಕಷ್ಟು ಪ್ರಯತ್ನಗಳು ನಡೆದವು. ಆದರೆ ಆತ ಬದುಕುಳಿಯಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ. ಆದರೆ ಲಾಶಾನ್ ಥಾಂಪ್ಸನ್ ವಕೀಲರು ಹೇಳುವಂತೆ ಜಾರ್ಜಿಯಾದ ಫುಲ್ಟನ್ ಕೌಂಟಿ ಜೈಲು ಅವ್ಯವಸ್ಥೆಯ ಆಗರವಾಗಿತ್ತು, ಅಲ್ಲಿ ಕೀಟಗಳು ಮತ್ತು ತಿಗಣೆಗಳು ಥಾಂಪ್ಸನ್ನನ್ನು ಜೀವಂತವಾಗಿ ತಿಂದಿವೆ ಎಂದು ಆರೋಪಿಸಿದ್ದಾರೆ.
ಮರಣೋತ್ತರ ಪರೀಕ್ಷಾ ವರದಿ ಸಹ ಅವರ ದೇಹದಲ್ಲಿ ಗಾಯಗಳಿಲ್ಲ ಹಾಗೂ ರೋಗ ಲಕ್ಷಣಗಳೂ ಇರಲಿಲ್ಲ ಎಂಬುದನ್ನು ತಿಳಿಸಿದೆ. ಫುಲ್ಟನ್ ಕೌಂಟಿ ಜೈಲಿನ ಅನೈರ್ಮಲ್ಯ ಪರಿಸ್ಥಿತಿಯೇ ಥಾಂಪ್ಸನ್ ಸಾವಿಗೆ ಕಾರಣ. ಜೈಲಿನ ಕೊಠಡಿಗಳ ಶುಚಿತ್ವ ಗಮನಿಸಿದರೂ ಯಾರೊಬ್ಬರೂ ಸಹಾಯ ಮಾಡಿಲ್ಲ. ಜೈಲಿನೊಳಗೆ ತೆಗೆದ ಚಿತ್ರಗಳನ್ನು ನೋಡಿದ್ರೆ ಎಷ್ಟು ಕೊಳಕು ತುಂಬಿಕೊಂಡಿತ್ತು ಅನ್ನೋದು ಅರ್ಥವಾಗುತ್ತೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದರು ವೈದ್ಯರು ಹಾಸಿಗೆಯಲ್ಲಿರುವ ಕೀಟಗಳು ಕಚ್ಚುವುದರಿಂದ ಮರಣ ಸಂಭವಿಸುವುದಿಲ್ಲ. ಆದರೆ ಕೆಲವೊಂದು ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಕೀಟಗಳು ಅಥವಾ ತಿಗಣೆಗಳು ಮುತ್ತಿಕೊಂಡಾಗ, ಅದೇ ಸ್ಥಿತಿಯಲ್ಲಿ ದೀರ್ಘಕಾಲದ ವರೆಗೆ ಮುಂದುವರಿದರೇ ರಕ್ತಹೀನತೆ ಉಂಟಾಗುತ್ತದೆ. ಕಾಲಮಿತಿಯಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದರೆ ಸಾವು ಸಂಭವಿಸುತ್ತದೆ ತಿಳಿಸಿದ್ದಾರೆ.