Crime News: ಮದುವೆಗೆ ಕರೆದಿಲ್ಲವೆಂದು ಕ್ಲೋಸ್‌ ಫ್ರೆಂಡ್ ಮನೆಗೆ ಕಲ್ಲೆಸೆದ; ಸಿಟ್ಟಿಗೆದ್ದ ಸ್ನೇಹಿತ ಮಾಡಿದ್ದೇನು ಗೊತ್ತಾ?

ಕೊಟ್ಟಾಯಂ: ಸ್ನೇಹಿತ ತನ್ನ ಮದುವೆಗೆ ಕರೆದಿಲ್ಲ ಎಂಬ ವಿಷಯದಿಂದ ಉಂಟಾದ ವೈಷಮ್ಯ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೊಟ್ಟಾಯಂನ ಜಿಲ್ಲೆಯ ಕರುಚಕಲ್‌ನಲ್ಲಿ ಈ ಘಟನೆ ನಡೆದಿದ್ದು, ಪ್ರತೀಕಾರ ತೀರಿಸಿಕೊಳ್ಳಲು ಸ್ಕೆಚ್ ಹಾಕಿ ಕೊಲೆಗೈದ ಆರೋಪಿಗಳು ನಂತರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

First published:

  • 17

    Crime News: ಮದುವೆಗೆ ಕರೆದಿಲ್ಲವೆಂದು ಕ್ಲೋಸ್‌ ಫ್ರೆಂಡ್ ಮನೆಗೆ ಕಲ್ಲೆಸೆದ; ಸಿಟ್ಟಿಗೆದ್ದ ಸ್ನೇಹಿತ ಮಾಡಿದ್ದೇನು ಗೊತ್ತಾ?

    ಸೆಬಾಸ್ಟಿಯನ್ ಮತ್ತು ಬಿನು ಇಬ್ಬರೂ ಸ್ನೇಹಿತರು. ಇತ್ತೀಚೆಗೆ ಸೆಬಾಸ್ಟಿಯನ್‌ಗೆ ವಿವಾಹವಾಗಿತ್ತು. ಆದರೆ ಆತ ತನ್ನ ಸ್ನೇಹಿತ ಬಿನುಗೆ ಮದುವೆಗೆ ಆಹ್ವಾನ ನೀಡಿರಲಿಲ್ಲ. ಇದರಿಂದ ಅವಮಾನಿತನಾದ ಬಿನು ಕೋಪದಿಂದ ಸೆಬಾಸ್ಟಿಯನ್‌ ಮನೆಗೆ ಕಲ್ಲು ಎಸೆದಿದ್ದ.

    MORE
    GALLERIES

  • 27

    Crime News: ಮದುವೆಗೆ ಕರೆದಿಲ್ಲವೆಂದು ಕ್ಲೋಸ್‌ ಫ್ರೆಂಡ್ ಮನೆಗೆ ಕಲ್ಲೆಸೆದ; ಸಿಟ್ಟಿಗೆದ್ದ ಸ್ನೇಹಿತ ಮಾಡಿದ್ದೇನು ಗೊತ್ತಾ?

    ಈ ಘಟನೆಯಿಂದ ಸಿಟ್ಟಿಗೆದ್ದ ಸೆಬಾಸ್ಟಿಯನ್ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಬಿನುವಿನ ಮತ್ತೊಬ್ಬ ವೈರಿ ವಿಷ್ಣುವಿನ ಸಹಾಯ ಪಡೆದು ಆತನನ್ನು ಮುಗಿಸಲು ಪ್ಲಾನ್ ಮಾಡಿ ಯಶಸ್ವಿಯಾಗಿದ್ದಾನೆ.

    MORE
    GALLERIES

  • 37

    Crime News: ಮದುವೆಗೆ ಕರೆದಿಲ್ಲವೆಂದು ಕ್ಲೋಸ್‌ ಫ್ರೆಂಡ್ ಮನೆಗೆ ಕಲ್ಲೆಸೆದ; ಸಿಟ್ಟಿಗೆದ್ದ ಸ್ನೇಹಿತ ಮಾಡಿದ್ದೇನು ಗೊತ್ತಾ?

    ಕೆಲದಿನಗಳ ಹಿಂದೆ ವಿಷ್ಣುವಿನ ಹೆಂಡತಿಯನ್ನು ಬಿನು ಅವಾಚ್ಯ ಪದಗಳಿಂದ ಬೈದು ನಿಂದಿಸಿದ್ದ. ಇದರಿಂದ ಬಿನು ಜತೆ ವೈಷಮ್ಯ ವಿಷ್ಣು ಹೊಂದಿದ್ದ. ಹೀಗಾಗಿ ಸೆಬಾಸ್ಟಿಯನ್ ಮತ್ತು ವಿಷ್ಣು ಸೇರಿ ಆತನ ಉಪಟಳ ನಿಲ್ಲಿಸಲು ಸಂಚು ರೂಪಿಸಿದ್ದಾರೆ.

    MORE
    GALLERIES

  • 47

    Crime News: ಮದುವೆಗೆ ಕರೆದಿಲ್ಲವೆಂದು ಕ್ಲೋಸ್‌ ಫ್ರೆಂಡ್ ಮನೆಗೆ ಕಲ್ಲೆಸೆದ; ಸಿಟ್ಟಿಗೆದ್ದ ಸ್ನೇಹಿತ ಮಾಡಿದ್ದೇನು ಗೊತ್ತಾ?

    ಅದರಂತೆ ಕಳೆದ ಭಾನುವಾರ ರಾತ್ರಿ 9 ಗಂಟೆಯ ಸುಮಾರಿಗೆ ಬಿನುವನ್ನು ಅಡ್ಡಗಟ್ಟಿದ ಸೆಬಾಸ್ಟಿಯನ್ ಫಿಲಿಪ್ (44) ಮತ್ತು ವಿಷ್ಣು ವಿಜಯನ್ (24) ಮಾರಕಾಯುಧಗಳಿಂದ ಆತನ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ.

    MORE
    GALLERIES

  • 57

    Crime News: ಮದುವೆಗೆ ಕರೆದಿಲ್ಲವೆಂದು ಕ್ಲೋಸ್‌ ಫ್ರೆಂಡ್ ಮನೆಗೆ ಕಲ್ಲೆಸೆದ; ಸಿಟ್ಟಿಗೆದ್ದ ಸ್ನೇಹಿತ ಮಾಡಿದ್ದೇನು ಗೊತ್ತಾ?

    ತೀವ್ರ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ಬಿನುವನ್ನು ಬಳಿಕ ಆಸ್ಪತ್ರೆಗೆ ಸಾಗಿಸಿದರೂ ವಿಪರೀತ ರಕ್ತಸ್ರಾವ ಹಾಗೂ ಗಾಯಗಳಿಂದಾಗಿ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ.

    MORE
    GALLERIES

  • 67

    Crime News: ಮದುವೆಗೆ ಕರೆದಿಲ್ಲವೆಂದು ಕ್ಲೋಸ್‌ ಫ್ರೆಂಡ್ ಮನೆಗೆ ಕಲ್ಲೆಸೆದ; ಸಿಟ್ಟಿಗೆದ್ದ ಸ್ನೇಹಿತ ಮಾಡಿದ್ದೇನು ಗೊತ್ತಾ?

    ಬಿನುವನ್ನು ಕೊಲೆಗೈದ ನಂತರ ಸೆಬಾಸ್ಟಿಯನ್ ಮತ್ತು ವಿಷ್ಣು ಇಬ್ಬರೂ ಕೂಡ ಕೊಲೆಗೆ ಬಳಸಿದ ಆಯುಧಗಳ ಜತೆಗೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾರೆ.

    MORE
    GALLERIES

  • 77

    Crime News: ಮದುವೆಗೆ ಕರೆದಿಲ್ಲವೆಂದು ಕ್ಲೋಸ್‌ ಫ್ರೆಂಡ್ ಮನೆಗೆ ಕಲ್ಲೆಸೆದ; ಸಿಟ್ಟಿಗೆದ್ದ ಸ್ನೇಹಿತ ಮಾಡಿದ್ದೇನು ಗೊತ್ತಾ?

    ಘಟನೆ ಸಂಬಂಧ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಕೊಲೆಗೈದ ನಂತರ ಏನು ಮಾಡಬೇಕು ಎಂದು ತೋಚದೆ ಭಯದಿಂದ ಆರೋಪಿಗಳು ಠಾಣೆಗೆ ಬಂದು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    MORE
    GALLERIES