ಪ್ರೇಯಸಿಯ ಗಂಡನಿಂದ ತಪ್ಪಿಸಿಕೊಳ್ಳಲು 5ನೇ ಮಹಡಿಯಿಂದ ಜಿಗಿದು ಪ್ರಾಣಬಿಟ್ಟ ಯುವಕ
ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ (illegal Relationship) ಹೊಂದಿದ್ದ 29 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಜೈಪುರದ ಪ್ರತಾಪ್ ನಗರದಲ್ಲಿ ನಡೆದಿದೆ. ವಿವಾಹಿತ ಪ್ರೇಯಸಿ ಜೊತೆ ಖಾಸಗಿ ಕ್ಷಣ ಕಳೆಯುವಾಗ ಆಕೆ ಗಂಡ ಬಂದ ಕಾರಣ ಯುವಕ 5ನೇ ಮಹಡಿಯಿಂದ ಜಿಗಿದಿದ್ದಾನೆ. ಜಿಗಿದ ರಭಸಕ್ಕೆ ಆತ ಸಾವನ್ನಪ್ಪಿದ್ದಾನೆ. (ಪೋಟೋಗಳು- ಸಾಂದರ್ಭಿಕ ಬಳಕೆ)
ಜೈಪುರದ ಪ್ರತಾಪ್ ನಗರದಲ್ಲಿ ವಿವಾಹಿತ ಮಗಳು ತನ್ನ ಗಂಡ ಮತ್ತು ಅಪ್ರಾಪ್ತ ಮಗಳೊಂದಿಗೆ ಪ್ಲಾಟ್ನಲ್ಲಿ ವಾಸವಾಗಿದ್ದರು. ಈ ವೇಳೆ ಈಕೆ ತನ್ನ ಗಂಡ ಇಲ್ಲದ ವೇಳೆ ಪ್ರಿಯಕರನೊಂದಿಗೆ ಖಾಸಗಿ ಕ್ಷಣ ಕಳೆಯುತ್ತಿದ್ದಳು.
2/ 4
ಇದೇ ರೀತಿ ಖಾಸಗಿಯಾಗಿ ಸಮಯ ಕಳೆಯುತ್ತಿದ್ದಾಗ ಗಂಡ ಬಂದ ಪರಿಣಾಮ ತಪ್ಪಿಸಿಕೊಳ್ಳಲು ಹೋದ ಪ್ರಿಯಕರ ದಾರುಣವಾಗಿ ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿದವನನ್ನು ಮೊಹ್ಸಿನ್ ಎಂದು ಪತ್ತೆ ಮಾಡಲಾಗಿದ್ದು, ಈತ ಉತ್ತರ ಪ್ರದೇಶ ಮೂಲದವನು ಎಂದು ಪೊಲೀಸರು ತಿಳಿಸಿದ್ದಾರೆ.
3/ 4
ಇನ್ನು ಮೊಹ್ಸಿನ್ ನೊಂದಿಗೆ ಹಲವು ವರ್ಷಗಳಿಂದಲೂ ಈಕೆ ಸಂಬಂಧ ಹೊಂದಿದ್ದರು. ಕಳೆದೆರಡು ವರ್ಷಗಳ ಹಿಂದೆ ಈತನೊಂದಿಗೆ ಈಕೆ ನೈನಿತಾಲ್ನಿಂದ ಓಡಿ ಹೋಗಿದ್ದಳಿ. ಬಳಿಕ ಆಕೆ ಜೈಪುರದಲ್ಲಿ ಇರುವ ವಿಷಯ ತಿಳಿದ ಪತಿ ಆಕೆಯನ್ನು ಅಲ್ಲಿಗೆ ಹುಡುಕಿಕೊಂಡು ಬಂದಿ ಮನವೊಲಿಸಿ ಸಂಸಾರ ಮಾಡುತ್ತಿದ್ದ
4/ 4
ಕಳೆದ ಭಾನುವಾರ ಕೂಡ ಮೊಹ್ಸಿನ್ ಜೊತೆ ಇದ್ದಾಗ ಗಂಡ ಬಂದಿದ್ದಾನೆ. ಈ ವೇಳೆ ಗಾಬರಿಗೊಂಡ ಆತ ಬಾಲ್ಕನಿಯಿಂದ ಜಂಪ್ ಮಾಡಿದ್ದಾನೆ. ತಕ್ಷಣಕ್ಕೆ ಪ್ರೇಯಸಿ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆದರೆ ಆತ ಬದುಕಿ ಉಳಿಯಲಿಲ್ಲ