Mumbai Case: ಮಹಿಳಾ ಪೊಲೀಸ್ ಎದುರು ಪುರುಷರು ಶರ್ಟ್ ತೆಗೆದರೆ, ಏನು ಶಿಕ್ಷೆ ಗೊತ್ತಾ?

ಮುಂಬೈ: ತಪ್ಪು ಎಷ್ಟೇ ಚಿಕ್ಕದಾದರೂ ಅದಕ್ಕೆ ನಮ್ಮ ಕಾನೂನಿನಲ್ಲಿ ಶಿಕ್ಷೆಯಿದೆ. ಸಾರ್ವಜನಿಕ ಸ್ಥಳದಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸುವವರಿಗೆ, ಅದೇನು ದೊಡ್ಡ ಅಪರಾಧವೇ ಎಂಬ ಮನಸ್ಥಿತಿಯವರಿಗೆ ಈ ಪ್ರಕರಣ ಪಾಠವಾಗಲಿದೆ.

First published:

  • 17

    Mumbai Case: ಮಹಿಳಾ ಪೊಲೀಸ್ ಎದುರು ಪುರುಷರು ಶರ್ಟ್ ತೆಗೆದರೆ, ಏನು ಶಿಕ್ಷೆ ಗೊತ್ತಾ?

    ಪೊಲೀಸ್ ಠಾಣೆಯಲ್ಲಿ ಕೋಪದ ಭರದಲ್ಲಿ ಮಹಿಳಾ ಪೊಲೀಸ್ ಎದುರು ಶರ್ಟ್ ತೆಗೆದು ಅಸಭ್ಯವಾಗಿ ವರ್ತಿಸಿದ 38 ವರ್ಷದ ವ್ಯಕ್ತಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶಿಕ್ಷೆಯನ್ನು ವಿಧಿಸಿದೆ.

    MORE
    GALLERIES

  • 27

    Mumbai Case: ಮಹಿಳಾ ಪೊಲೀಸ್ ಎದುರು ಪುರುಷರು ಶರ್ಟ್ ತೆಗೆದರೆ, ಏನು ಶಿಕ್ಷೆ ಗೊತ್ತಾ?

    2016 ರಲ್ಲಿ ಸಾರ್ವಜನಿಕವಾಗಿ ಜಗಳವಾಡುತ್ತಿದ್ದ ಬಾಬು ಖಾರ್ವಾ, ಗಣೇಶ್ ಖರ್ವಾ ಅವರನ್ನು ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ. ಅಶ್ಲೀಲ ಪ್ರದರ್ಶನಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಆರೋಪದಲ್ಲಿ ಗಣೇಶ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ, ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್ಆರ್ ನರ್ವಾಡೆ ಶಿಕ್ಷೆ ವಿಧಿಸಿದ್ದಾರೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 37

    Mumbai Case: ಮಹಿಳಾ ಪೊಲೀಸ್ ಎದುರು ಪುರುಷರು ಶರ್ಟ್ ತೆಗೆದರೆ, ಏನು ಶಿಕ್ಷೆ ಗೊತ್ತಾ?

    ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ವರ್ತಿಸಿದ್ದಾರೆ ಎಂಬುದು ಸಾಬೀತಾಗಿದೆ. ಶರ್ಟ್ ಬಿಚ್ಚಿ ಬೇಕಾಬಿಟ್ಟಿ ವರ್ತಿಸಿದ್ದಾರೆ. ಇದು ಪೊಲೀಸರಿಗೆ, ಅದರಲ್ಲೂ ವಿಶೇಷವಾಗಿ ಮಹಿಳಾ ಪೊಲೀಸರಿಗೆ ಕಿರಿಕಿರಿ ಉಂಟುಮಾಡಿತು ಎಂದು ಕೋರ್ಟ್ ತೀರ್ಪಿನಲ್ಲಿ ಹೇಳಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 47

    Mumbai Case: ಮಹಿಳಾ ಪೊಲೀಸ್ ಎದುರು ಪುರುಷರು ಶರ್ಟ್ ತೆಗೆದರೆ, ಏನು ಶಿಕ್ಷೆ ಗೊತ್ತಾ?

    ಅಪರಾಧಿಗಳ ಪ್ರೊಬೇಷನ್ ಆಕ್ಟ್ ಅಡಿಯಲ್ಲಿ ಉತ್ತಮ ನಡವಳಿಕೆಯ ಬಂಧದ ಮೇಲೆ ಇಬ್ಬರನ್ನು ಬಿಡಲು ನ್ಯಾಯಾಲಯ ನಿರಾಕರಿಸಿತು. ಆರೋಪಿಗಳು ಯಾರಿಗೂ ಹೆದರದೆ ಸಾರ್ವಜನಿಕ ಸ್ಥಳಗಳಲ್ಲಿ ಅಪರಾಧ ಎಸಗಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Mumbai Case: ಮಹಿಳಾ ಪೊಲೀಸ್ ಎದುರು ಪುರುಷರು ಶರ್ಟ್ ತೆಗೆದರೆ, ಏನು ಶಿಕ್ಷೆ ಗೊತ್ತಾ?

    ಗಣೇಶ್ ಖರ್ವಾ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸರ ಸಮ್ಮುಖದಲ್ಲಿ ಅಶ್ಲೀಲ ಕೃತ್ಯ ಎಸಗಿದ್ದಾನೆ. ಆದ್ದರಿಂದ, ಆರೋಪಿಗಳಿಗೆ ಕಾಯಿದೆಯ ಪ್ರಯೋಜನವನ್ನು ನೀಡುವುದು ಸೂಕ್ತವಲ್ಲ ಎಂದು ನ್ಯಾಯಾಲಯ ಹೇಳಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Mumbai Case: ಮಹಿಳಾ ಪೊಲೀಸ್ ಎದುರು ಪುರುಷರು ಶರ್ಟ್ ತೆಗೆದರೆ, ಏನು ಶಿಕ್ಷೆ ಗೊತ್ತಾ?

    ಪ್ರಕರಣದಲ್ಲಿ ಅಪರಾಧಿಗಳೆಂದು ಸಾಬೀತಾಗಿರೋದರಿಂದ ನ್ಯಾಯಾಲಯವು ತಲಾ 10 ದಿನಗಳ ಜೈಲು ಶಿಕ್ಷೆಯನ್ನು ವಿಧಿಸಿತು.

    MORE
    GALLERIES

  • 77

    Mumbai Case: ಮಹಿಳಾ ಪೊಲೀಸ್ ಎದುರು ಪುರುಷರು ಶರ್ಟ್ ತೆಗೆದರೆ, ಏನು ಶಿಕ್ಷೆ ಗೊತ್ತಾ?

    ಪ್ರಕರಣದಲ್ಲಿ ಪೊಲೀಸ್ ಸಾಕ್ಷಿಗಳನ್ನು ಮಾತ್ರ ವಿಚಾರಣೆ ನಡೆಸಲಾಗಿದೆ ಎಂದು ಅಪರಾಧಿಗಳ ಪರ ವಕೀಲರು ವಾದಿಸಿದರು. ಕೇವಲ ಪೊಲೀಸರ ಹೇಳಿಕೆ ಮೇಲೆ ನಿರ್ಧಾರಕ್ಕೆ ಬರಬಾರದು ಎಂಬ ವಕೀಲರ ವಾದವನ್ನು ಕೋರ್ಟ್ ಒಪ್ಪಲಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES