Crime News: ಕೆಲಸಕ್ಕೆ ಹೋಗಿ ಎಂದು ಹೆಂಡತಿ ಪದೇ ಪದೇ ಹೇಳಿದ್ದಕ್ಕೆ ಗಂಡ ಮಾಡಿದ್ದು ನಿಜಕ್ಕೂ ಭಯಾನಕ!
ಜಬಲ್ಪುರ್, ಮಧ್ಯಪ್ರದೇಶ: ಉದ್ಯೋಗಂ ಪುರುಷ ಲಕ್ಷಣಂ ಎನ್ನುವ ಮಾತಿದೆ. ಇಂದು ಹೆಣ್ಣು ಕೂಡ ಗಂಡಿಗೆ ಸರಿಸಮವಾಗಿ ದುಡಿಯುತ್ತಿದ್ದಾಳಾದರೂ ಗಂಡು ದುಡಿಮೆಯಿಂದ ತಪ್ಪಿಸಿಕೊಳ್ಳುವ ಮಾತೇ ಇಲ್ಲ ಎನ್ನಬಹುದು.
ಈ ಪ್ರಕರಣದಲ್ಲಿ ಗಂಡನ ನಿರುದ್ಯೋಗವೇ ಒಂದು ಸಂಸಾರವನ್ನು ಹಾಳು ಮಾಡಿದೆ. ಕೆಲಸ ಇಲ್ಲದ ಗಂಡನಿಗೆ ಕೆಲಸಕ್ಕೆ ಹೋಗು ಎಂದು ಹೆಂಡತಿ ಹೇಳಿದ್ದೇ ದೊಡ್ಡ ದುರಂತವೇ ನಡೆದು ಹೋಗಿದೆ.
2/ 7
30 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕತ್ತರಿಯಿಂದ ಇರಿದು ಕೊಂದು ನಂತರ ತನ್ನನ್ನು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಧ್ಯಪ್ರದೇಶದ ಜಬಲ್ ಪುರದಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ)
3/ 7
ಕೆಲಸ ಇಲ್ಲದೆ ಮನೆಯಲ್ಲಿ ಕೂತಿದ್ದ ಗಂಡನಿಗೆ ಕೆಲಸಕ್ಕೆ ಹೋಗಿ ಎಂದು ಹೆಂಡತಿ ಪದೇ ಪದೇ ಹೇಳಿದ್ದರಿಂದ ಆಕ್ರೋಶಗೊಂಡ ವಿಭೋರ್ ಪತ್ನಿಯನ್ನು ಇರಿದು ಕೊಂದಿದ್ದಾನೆ. (ಪ್ರಾತಿನಿಧಿಕ ಚಿತ್ರ)
4/ 7
ವಿಭೋರ್ ಸಾಹು (30) ಮೃತಪಟ್ಟಿದ್ದು, ಅವರ ಪತ್ನಿ 23 ವರ್ಷದ ರಿತು ಶುಕ್ರವಾರ ಜಬಲ್ಪುರದ ತಮ್ಮ ಮನೆಯಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದರು ಎಂದು ರಂಝಿ ಪೊಲೀಸ್ ಠಾಣೆಯ ಉಸ್ತುವಾರಿ ಸಹದೇವರಾಮ್ ಸಾಹು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
5/ 7
ಘಟನೆಯ ಸಮಯದಲ್ಲಿ ವಿಭೋರ್ ಸಾಹು ಅವರ ತಾಯಿ ಮತ್ತು ಸಹೋದರ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಲು ಹೊರಗೆ ಹೋಗಿದ್ದರು. ಅವರು ಮನೆಗೆ ಹಿಂದಿರುಗುವಾಗ ದಂಪತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. (ಪ್ರಾತಿನಿಧಿಕ ಚಿತ್ರ)
6/ 7
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಚಾಲಕನಾಗಿದ್ದ ವಿಭೋರ್ ಸಾಹು ಕಳೆದ 15 ದಿನಗಳಿಂದ ಕೆಲಸಕ್ಕೆ ಹೋಗಿರಲಿಲ್ಲ. ಈ ಪ್ರವೃತ್ತಿಯಿಂದ ಆತಂಕಕ್ಕೊಳಗಾದ ಅವರ ಪತ್ನಿ ಪದೇ ಪದೇ ಕೆಲಸಕ್ಕೆ ಹೋಗಿ ಎಂದು ಹೇಳುತ್ತಿದ್ದರಂತೆ.
7/ 7
ಘಟನೆ ನಡೆದ ದಿನವೂ ಇದೇ ವಿಚಾರವಾಗಿ ಜಗಳ ಶುರುವಾಗಿದೆ. ತೀವ್ರ ವಾಗ್ವಾದದ ನಂತರ ವಿಭೋರ್ ಸಾಹು ತನ್ನ ಪತ್ನಿಗೆ ಕತ್ತರಿಯಿಂದ ಇರಿದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.