Honour Killing: ದಲಿತ ಯುವತಿಯನ್ನು ಪ್ರೀತಿಸಿ ಮದುವೆಯಾದ ಮಗನನ್ನು ಮರ್ಯಾದಾ ಹತ್ಯೆ ಮಾಡಿದ ಕಿರಾತಕ ಅಪ್ಪ!

ಕೃಷ್ಣನಗರ: ದಲಿತ ಯುವತಿಯನ್ನು ಪ್ರೀತಿಸಿ ಮದುವೆಯಾದ ಮಗ ಮತ್ತು ಆತನ ಪ್ರೀತಿಗೆ ಬೆಂಬಲಿಸಿದ ತಾಯಿಯನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಭೀಕರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

First published:

 • 19

  Honour Killing: ದಲಿತ ಯುವತಿಯನ್ನು ಪ್ರೀತಿಸಿ ಮದುವೆಯಾದ ಮಗನನ್ನು ಮರ್ಯಾದಾ ಹತ್ಯೆ ಮಾಡಿದ ಕಿರಾತಕ ಅಪ್ಪ!

  ತಮಿಳುನಾಡಿನ ಕೃಷ್ಣನಗರ ಜಿಲ್ಲೆಯ ಉತ್ತಂಗರೈ ಬಳಿ ಈ ಆಘಾತಕಾರಿ ಘಟನೆ ಸಂಭವಿಸಿದ್ದು, ಕೊಲೆ ಮಾಡಿರುವ ಆರೋಪಿಯನ್ನು ಹಿಂದುಳಿದ ವರ್ಗ (ಎಂಬಿಸಿ) ಸಮುದಾಯಕ್ಕೆ ಸೇರಿದ ದಂಡಪಾಣಿ ಎಂದು ಗುರುತಿಸಲಾಗಿದೆ.

  MORE
  GALLERIES

 • 29

  Honour Killing: ದಲಿತ ಯುವತಿಯನ್ನು ಪ್ರೀತಿಸಿ ಮದುವೆಯಾದ ಮಗನನ್ನು ಮರ್ಯಾದಾ ಹತ್ಯೆ ಮಾಡಿದ ಕಿರಾತಕ ಅಪ್ಪ!

  ದಂಡಪಾಣಿಯ ಮಗ ಸುಭಾಷ್‌ (25) ಎಂಬಾತ ಪರಿಶಿಷ್ಟ ಜಾತಿಗೆ ಸೇರಿದ ಅನುಷಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದ. ಆದರೆ ತಂದೆ ವಿರೋಧಿಸಿದ್ದರಿಂದ ಅದನ್ನು ಲೆಕ್ಕಿಸದೇ ಮದುವೆಯಾಗಿ ಬೇರೆಯೇ ವಾಸಿಸುತ್ತಿದ್ದ.

  MORE
  GALLERIES

 • 39

  Honour Killing: ದಲಿತ ಯುವತಿಯನ್ನು ಪ್ರೀತಿಸಿ ಮದುವೆಯಾದ ಮಗನನ್ನು ಮರ್ಯಾದಾ ಹತ್ಯೆ ಮಾಡಿದ ಕಿರಾತಕ ಅಪ್ಪ!

  ತಿರುಪ್ಪೂರ್‌ನ ಬಟ್ಟೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಭಾಷ್, ಮಾರ್ಚ್‌ 27ರಂದು ಮದುವೆಯಾದ ನಂತರ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಈತನ ಪ್ರೀತಿಗೆ ತಾಯಿ ಕೂಡ ಬೆಂಬಲ ನೀಡಿದ್ದರು.

  MORE
  GALLERIES

 • 49

  Honour Killing: ದಲಿತ ಯುವತಿಯನ್ನು ಪ್ರೀತಿಸಿ ಮದುವೆಯಾದ ಮಗನನ್ನು ಮರ್ಯಾದಾ ಹತ್ಯೆ ಮಾಡಿದ ಕಿರಾತಕ ಅಪ್ಪ!

  ತನ್ನ ಇಚ್ಛೆಯ ವಿರುದ್ಧ ಮಗ ಮದುವೆಯಾಗಿದ್ದರಿಂದ ಅಸಮಾಧಾನಗೊಂಡಿದ್ದ ದಂಡಪಾಣಿ, ತಾಯಿಯ ಮೂಲಕ ಅವರಿಬ್ಬರನ್ನು ತಮಿಳ್ ಹೊಸ ವರ್ಷ ವಿಷು ಹಬ್ಬಕ್ಕೆ ಮನೆಗೆ ಬರಲು ಹೇಳಿದ್ದು, ನೀವು ಬಂದರೆ ಹಳೆಯದನ್ನು ಮರೆತು ಮನೆಗೆ ಸೇರಿಸುವುದಾಗಿ ತಾಯಿಯ ಮೂಲಕ ಹೇಳಿ ನಂಬಿಸಿದ್ದ.

  MORE
  GALLERIES

 • 59

  Honour Killing: ದಲಿತ ಯುವತಿಯನ್ನು ಪ್ರೀತಿಸಿ ಮದುವೆಯಾದ ಮಗನನ್ನು ಮರ್ಯಾದಾ ಹತ್ಯೆ ಮಾಡಿದ ಕಿರಾತಕ ಅಪ್ಪ!

  ಈತನ ಮಾತನ್ನು ನಂಬಿದ ಸುಭಾಷ್ ಮತ್ತು ಅನುಷಾ ಖುಷಿಯಿಂದಲೇ ಮದುವೆಯಾದ ನಂತರ ಮೊದಲ ಬಾರಿಗೆ ಮನೆಗೆ ಹೊರಟಿದ್ದಾರೆ. ಊರಿಗೆ ಹೊರಟಿದ್ದ ಅವರು ಆ ದಿನ ರಾತ್ರಿ ಅಜ್ಜಿಯ ಮನೆಯಲ್ಲಿ ತಂಗಿದ್ದರು.

  MORE
  GALLERIES

 • 69

  Honour Killing: ದಲಿತ ಯುವತಿಯನ್ನು ಪ್ರೀತಿಸಿ ಮದುವೆಯಾದ ಮಗನನ್ನು ಮರ್ಯಾದಾ ಹತ್ಯೆ ಮಾಡಿದ ಕಿರಾತಕ ಅಪ್ಪ!

  ಊಟ ಮುಗಿಸಿ ಎಲ್ಲರೂ ಮಲಗಿದ ನಂತರ ಮಧ್ಯರಾತ್ರಿ ಮನೆಗೆ ನುಗ್ಗಿದ ದಂಡಪಾಣಿ, ಹರಿತವಾದ ಆಯುಧಗಳೊಂದಿಗೆ ಸುಭಾಷ್, ಆತನ ತಾಯಿ ಕನ್ನಮ್ಮಾಳ್ (65) ಮತ್ತು ಅನುಷಾಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

  MORE
  GALLERIES

 • 79

  Honour Killing: ದಲಿತ ಯುವತಿಯನ್ನು ಪ್ರೀತಿಸಿ ಮದುವೆಯಾದ ಮಗನನ್ನು ಮರ್ಯಾದಾ ಹತ್ಯೆ ಮಾಡಿದ ಕಿರಾತಕ ಅಪ್ಪ!

  ಹರಿತವಾದ ಆಯುಧದಿಂದ ಹಲ್ಲೆಗೊಳಗಾದ ಸುಭಾಷ್ ಮತ್ತು ಆತನ ತಾಯಿ ಕನ್ನಮ್ಮಾಳ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಭಾಷ್ ಪತ್ನಿ ಅನುಷಾಗೆ ತೀವ್ರ ತರದ ಗಾಯಗಳಾಗಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  MORE
  GALLERIES

 • 89

  Honour Killing: ದಲಿತ ಯುವತಿಯನ್ನು ಪ್ರೀತಿಸಿ ಮದುವೆಯಾದ ಮಗನನ್ನು ಮರ್ಯಾದಾ ಹತ್ಯೆ ಮಾಡಿದ ಕಿರಾತಕ ಅಪ್ಪ!

  ಕೃಷ್ಣಗಿರಿ ಜಿಲ್ಲಾ ಪೊಲೀಸರು ತನಿಖೆ ಆರಂಭಿಸಿದ್ದು, ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  MORE
  GALLERIES

 • 99

  Honour Killing: ದಲಿತ ಯುವತಿಯನ್ನು ಪ್ರೀತಿಸಿ ಮದುವೆಯಾದ ಮಗನನ್ನು ಮರ್ಯಾದಾ ಹತ್ಯೆ ಮಾಡಿದ ಕಿರಾತಕ ಅಪ್ಪ!

  ಇಂತಹ ಮರ್ಯಾದಾ ಹತ್ಯೆಗಳನ್ನು ತಡೆಯಲು ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಅಮ್ಮ ಮಕ್ಕಳ ಮುನ್ನೇತ್ರದ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರಂ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರನ್ನು ಒತ್ತಾಯಿಸಿದ್ದಾರೆ.

  MORE
  GALLERIES