Shocking: ಬೈಕ್ ಸವಾರ ಪೊಲೀಸರ ಕೈ ಸಿಕ್ಕಿಬಿದ್ದು ಬ್ರೀತ್ ಅನಲೈಸರ್ ಊದಿದ, ನಂಬರ್ ಕಂಡು ಪೊಲೀಸರೇ ದಂಗು!
ಕೆಲ ರಾಜ್ಯಗಳನ್ನು ಹೊರತುಪಡಿಸಿ ದೇಶದ ಬಹುತೇಕ ಕಡೆ ಮದ್ಯಪಾನಕ್ಕೆ ಅವಕಾಶವಿದೆ. ಆದರೆ ಎಷ್ಟು ಕುಡಿಬೇಕು ಅನ್ನೋದು ನಿಜಕ್ಕೂ ವ್ಯಕ್ತಿಯ ಮೇಲೆ ಅವಲಂಬಿಸಿದೆ. ‘ಎಣ್ಣೆ’ ಇತಿಮಿತಿಯಲ್ಲಿ ಇದ್ದರೆ ಚೆಂದ ಅನ್ನೋದು ಎಲ್ಲರ ಮಾತು. ಆದರೆ ಕುಡುಕರು ಅದನ್ನು ಕೇಳಬೇಕಲ್ವಾ? ಇಲ್ಲೊಬ್ಬ ಕುಡಿತದೊಂದಲೇ ಹೊಸ ದಾಖಲೆ ನಿರ್ಮಿಸಿದ್ದಾನೆ.
ಎಷ್ಟು ಕುಡಿತಾರೆ ಎನ್ನೋದು ಅವರವರ ಆಯ್ಕೆ. ಆದರೆ ಕುಡಿದು ವಾಹನ ಚಲಾಯಿಸುವಂತಿಲ್ಲ. ಹಾಗೇನಾದ್ರೂ ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಪೊಲೀಸರು ಹಿಡಿದು ಆಲ್ಕೋಹಾಲ್ ಮೀಟರ್ ನಿಂದ ಕುಡಿದಿದ್ದಾರೋ ಇಲ್ಲವೋ ಎಂದು ಪರೀಕ್ಷಿಸುತ್ತಾರೆ. (ಸಾಂದರ್ಭಿಕ ಚಿತ್ರ, ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
2/ 7
ಉಸಿರಿನಲ್ಲಿನ ಆಲ್ಕೋಹಾಲ್ ಮಟ್ಟವನ್ನು ಆಧಾರಿಸಿ ಕುಡಿದಿದ್ದಾರೆಯೋ ಇಲ್ಲವೋ ಎಂದು ಪೊಲೀಸರು ನಿರ್ಧರಿಸುತ್ತಾರೆ. ಹೀಗೆ ವ್ಯಕ್ತಿಯೊಬ್ಬನನ್ನು ಪರೀಕ್ಷಿಸಿದ ಪೊಲೀಸೊಬ್ಬರು ಶಾಕ್ ಹಾಗಿದ್ದಾರೆ. ಆ ವ್ಯಕ್ತಿಯ ಆಲ್ಕೋಹಾಲ್ ಮಟ್ಟ ಎಷ್ಟಿತ್ತು ಎಂದರೆ ಪೊಲೀಸರು ಹಿಂದೆ ಎಂದೂ ಅಷ್ಟೊಂದು ಪಾಯಿಂಟನ್ನು ನೋಡಿಯೇ ಇಲ್ಲವಂತೆ!
3/ 7
ಪೋಲೀಸರ ಮುಂದೆ ಪೈಪ್ ಊದಿದರೆ 530 ಅಂಕಗಳು ಒಂದೇ ಸಮನೆ ಮುಟ್ಟಿವೆ. ಇದನ್ನು ನೋಡಿದ ಪೋಲೀಸರು ಶಾಕ್ ಆಗಿದ್ದಾರೆ. ಇನ್ಯಾವ ರೇಜಿಂಗೆ ಈತ ಕುಡಿದಿರಬಹುದು ಎಂದು ದಂಗಾಗಿದ್ದಾರೆ.
4/ 7
ಕೃಷ್ಣಾ ಜಿಲ್ಲೆ ಗುಡಿವಾಡ ಬಳಿಯ ವೆಂಟ್ರಪ್ರಗಡದ ವ್ಯಕ್ತಿಯೊಬ್ಬರು ಮಧ್ಯರಾತ್ರಿ ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ. ಬೈಕ್ ನಲ್ಲಿ ಕುಡಿದು ಬಂದರ್ ರಸ್ತೆಗೆ ನುಗ್ಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
5/ 7
ಡ್ರಂಕ್ ಅಂಡ್ ಡ್ರೈವ್ ಮಾಡಿ ಗಲಾಟೆ ಮಾಡುತ್ತಿದ್ದರಿಂದ ಅಲ್ಲೇ ಇದ್ದ ಪೆನಮಲೂರು ಸಿಐ ಗೋವಿಂದರಾಜು ತಕ್ಷಣವೇ ಬ್ರೀತ್ ಅನಲೈಸರ್ ಮೂಲಕ ಪರೀಕ್ಷೆ ನಡೆಸಿದರು. ಬಂದ ರೀಡಿಂಗ್ ಪರ್ಸೆಂಟೇಜ್ ನೋಡಿದ ಸಿಐ ಒಮ್ಮೆಲೇ ಬೆಚ್ಚಿಬಿದ್ದರು.
6/ 7
ಬ್ರೀತ್ ಅನಲೈಸರ್ ನಲ್ಲಿ ಶೇಕಡಾವಾರು ಒಟ್ಟು 530 ಅಂಕಗಳನ್ನು ತೋರಿಸಿದಾಗ ಅಲ್ಲಿನ ಪೊಲೀಸರು ಬೆಚ್ಚಿಬಿದ್ದರು. ಒಂದೋ ಎರಡೋ ಬಿಯರ್ ಇಷ್ಟು ಪರ್ಸೆಂಟೇಜ್ ತೋರಿಸಲ್ಲ.. 15ಕ್ಕಿಂತ ಹೆಚ್ಚು ಬಿಯರ್ ಕುಡಿದರೆ ಇಷ್ಟು ಪರ್ಸೆಂಟೇಜ್ ಬರುತ್ತೆ ಅಂದರು.
7/ 7
ಮದ್ಯದ ಮತ್ತಿನಲ್ಲಿ ತೇಲುತ್ತಿದ್ದ ವ್ಯಕ್ತಿಯನ್ನು ಹಾಗೂ ಬೈಕ್ ಅನ್ನು ವಶಕ್ಕೆ ಪಡೆದು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಕುಡಿದು ವಾಹನ ಚಲಾಯಿಸಿ ಪ್ರಾಣಾಪಾಯ ತಂದುಕೊಳ್ಳದಂತೆ ಯುವಕರಿಗೆ ಸಿಐ ಸಲಹೆ ನೀಡಿದರು. (ಸಾಂದರ್ಭಿಕ ಚಿತ್ರ)