ತೆಲುಗಿನ ಹೀರೋ ಸಾಯಿ ಧರ್ಮತೇಜ್ ಅವರ ಚಿತ್ರಲಹರಿ ಸಿನಿಮಾ ನೋಡಿದ್ದೀರಾ. ಆ ಸಿನಿಮಾದಲ್ಲಿ ಹೀರೋ ರಸ್ತೆ ಅಪಘಾತವಾದಾಗ ಸಂತ್ರಸ್ತರ ಕುಟುಂಬಸ್ಥರು, ಪೊಲೀಸರು, ಆ್ಯಂಬುಲೆನ್ಸ್ ಸ್ವಯಂಚಾಲಿತವಾಗಿ ಘಟನಾ ಸ್ಥಳಕ್ಕೆ ತಲುಪಲು ಸಿಗ್ನಲ್ ನೀಡುವಂತಹ ಆ್ಯಪ್ ತಯಾರಿಸುತ್ತಾನೆ. ಅದೊಂದು ಸಿನಿಮಾ, ಆದರೆ ಇಲ್ಕೊಬ್ಬ ವ್ಯಕ್ತಿ ನಿಜವಾಗಿ ಅಂತಹದ್ದೇ ಸಾಧನೆ ಮಾಡಿ ಸಾಧನವೊಂದನ್ನು ಕಂಡುಹಿಡಿದ್ದಾರೆ.
ದೇಶದ ರಸ್ತೆಗಳಲ್ಲಿ ಪ್ರತಿದಿನ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಅನೇಕ ಅಪಘಾತಗಳಲ್ಲಿ ಅಧಿಕಾರಿಗಳು ತಕ್ಷಣ ಮಾಹಿತಿ ಹೋಗುತ್ತಿಲ್ಲಇದರಿಂದ ಹಲವಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಈ ಚಿಕ್ಕ ಸಾಧನವು ಅಂತಹ ಅಮಾಯಕ ಜೀವವನ್ನು ಉಳಿಸುತ್ತದೆ. ಇದಕ್ಕೆ ಪೇಟೆಂಟ್ ಪಡೆದಿರುವ ರಾಜೇಂದ್ರ ಸದ್ಯದಲ್ಲೇ ಮತ್ತಷ್ಟು ಅಭಿವೃದ್ಧಿಪಡಿಸಲು ಸಿದ್ಧವಾಗುತ್ತಿದ್ದಾರೆ. ಅವರಿಗೆ ಆಲ್ ದಿ ಬೆಸ್ಟ್ ಹೇಳೋಣ.