Madhya Pradesh: ಪುಟ್ಟ ಕಂದನ ದೇಹದಲ್ಲಿ ಹರಿಯುತ್ತಿದೆ ಬಿಳಿ ರಕ್ತ, ಸ್ಯಾಂಪಲ್ ಕಂಡ ವೈದ್ಯರು ದಂಗು!

ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಂದೂವರೆ ವರ್ಷದ ಮುಗ್ಧ ಅನಾಯಾಳ ರಕ್ತನಾಳಗಳಲ್ಲಿ ಕೆಂಪು ಬಣ್ಣದ ಬದಲಾಗಿ ಬಿಳಿ ರಕ್ತ ಹರಿಯುತ್ತಿದೆ. ಅನಾರೋಗ್ಯದ ಸಂದರ್ಭದಲ್ಲಿ, ಪರೀಕ್ಷೆಗಾಗಿ ಪ್ರಯೋಗಾಲಯದಲ್ಲಿ ರಕ್ತದ ಮಾದರಿ ಸ್ವೀಕರಿಸಲಾಗಿತ್ತು. ಬಿಳಿ ರಕ್ತವನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು. ಅನಾಯಾ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಖೇಟಿಯಾ ನಿವಾಸಿ. ರಕ್ತವನ್ನು ಮುಂಬೈನಿಂದ ಯುಕೆಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆದರೆ ಮಾದರಿಯು ಸಮಯಕ್ಕೆ ಅಲ್ಲಿಗೆ ತಲುಪದಿರುವುದರಿಂದ ಅದನ್ನು ತಿರಸ್ಕರಿಸಲಾಗಿದೆ.

First published: