Lumpy Virus: ಹಸುಗಳ ಬಲಿ ಪಡೆಯುತ್ತಿದೆ ಲಂಪಿ ವೈರಸ್! ಚಿಕಿತ್ಸೆ ಹೇಗೆ?

ಸಾಂಕ್ರಾಮಿಕ, ಗುಣಪಡಿಸಲಾಗದ ಚರ್ಮ ರೋಗವು ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಪ್ರಾಣಿಗಳ ಮೇಲೆ ಹಾನಿಯನ್ನುಂಟುಮಾಡಿದೆ. ರಾಜ್ಯದಲ್ಲಿ ಸುಮಾರು ಮೂರು ತಿಂಗಳಲ್ಲಿ 1200ಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿದ್ದು, 25000 ಜಾನುವಾರುಗಳಿಗೆ ಸೋಂಕು ತಗುಲಿದೆ. ಈ ರೋಗಕ್ಕೆ ಸರಿಯಾದ ಚಿಕಿತ್ಸೆ ನೀಡದ ಕಾರಣ, ಇದು ವೇಗವಾಗಿ ಹರಡುತ್ತಿದೆ. ಇದರಿಂದ ಗೋಪಾಲಕರ ಆತಂಕ ಹೆಚ್ಚುತ್ತಿದೆ. ನೊಡ್ಯುಲರ್ ಸ್ಕಿನ್ ಡಿಸೀಸ್ ವೈರಸ್ (ಎಲ್‌ಎಸ್‌ಡಿವಿ) ಅಥವಾ ಲಂಪಿ ಕಾಯಿಲೆ ಎಂಬ ಈ ಸಾಂಕ್ರಾಮಿಕ ರೋಗವು ಈ ವರ್ಷದ ಏಪ್ರಿಲ್‌ನಲ್ಲಿ ಪಾಕಿಸ್ತಾನದ ಮೂಲಕ ಭಾರತಕ್ಕೆ ಬಂದಿತು ಎಂದು ಕೆಲವು ಅಧಿಕಾರಿಗಳು ಹೇಳುತ್ತಾರೆ.

First published: