Lottery: ಬರ್ತ್‌ ಡೇಗೆ ಅಜ್ಜಿ ಕೊಟ್ಟ ಲಾಟರಿ ಟಿಕೆಟ್‌ಗೆ ಸಿಕ್ತು 8 ಕೋಟಿ! ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ 18ರ ಯುವಕ!

Lottery: 18ನೇ ಜನ್ಮದಿನ ಆಚರಿಸಿಕೊಂಡ ಯುವಕ ಬರೋಬ್ಬರಿ 8 ಕೋಟಿ ಗೆದ್ದಿದ್ದಾನೆ. ವಿಶೇಷ ಎಂದರೆ ಆ ಯುವಕನಿಗೆ ಆ ಲಾಟರಿ ಟಿಕೆಟ್​ ಜನ್ಮ ದಿನದ ಗಿಫ್ಟ್​ ಆಗಿ ಸಿಕ್ಕಿತ್ತು.

First published:

  • 17

    Lottery: ಬರ್ತ್‌ ಡೇಗೆ ಅಜ್ಜಿ ಕೊಟ್ಟ ಲಾಟರಿ ಟಿಕೆಟ್‌ಗೆ ಸಿಕ್ತು 8 ಕೋಟಿ! ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ 18ರ ಯುವಕ!

    ಅಮೆರಿಕಾದಲ್ಲಿ 18ನೇ ಜನ್ಮದಿನ ಆಚರಿಸಿಕೊಂಡ ಯುವಕ ಬರೋಬ್ಬರಿ 8 ಕೋಟಿ ಗೆದ್ದಿದ್ದಾನೆ. ವಿಶೇಷ ಎಂದರೆ ಆ ಯುವಕನಿಗೆ ಆ ಲಾಟರಿ ಟಿಕೆಟ್​ ಜನ್ಮ ದಿನದ ಗಿಫ್ಟ್​ ಆಗಿ ಸಿಕ್ಕಿತ್ತು.

    MORE
    GALLERIES

  • 27

    Lottery: ಬರ್ತ್‌ ಡೇಗೆ ಅಜ್ಜಿ ಕೊಟ್ಟ ಲಾಟರಿ ಟಿಕೆಟ್‌ಗೆ ಸಿಕ್ತು 8 ಕೋಟಿ! ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ 18ರ ಯುವಕ!

    ವಾಸ್ತವವಾಗಿ 18 ವರ್ಷದೊಳಗಿನವರು ಅಮೆರಿಕಾದಲ್ಲಿ ಲಾಟರಿ ಆಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಆದರೆ ಆ ಯುವಕನ ಅದೃಷ್ಟವೆಂದರೆ ಆತ 18ನೇ ಜನ್ಮದಿನ ಆಚರಿಸಿದ ದಿನವೇ ಲಾಟರಿಯಲ್ಲಿ ಗೆದ್ದು ಕೋಟ್ಯಾಧಿಪತಿಯಾಗಿದ್ದಾನೆ.

    MORE
    GALLERIES

  • 37

    Lottery: ಬರ್ತ್‌ ಡೇಗೆ ಅಜ್ಜಿ ಕೊಟ್ಟ ಲಾಟರಿ ಟಿಕೆಟ್‌ಗೆ ಸಿಕ್ತು 8 ಕೋಟಿ! ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ 18ರ ಯುವಕ!

    18 ವರ್ಷದ ಕಲೇಬ್​ ಹ್ಯಾಂಗ್​ ಈ ಅದೃಷ್ಟವಂತ. ಆತನೇನು ಈ ಲಾಟರಿಯನ್ನು ಖರೀದಿಸಿರಲಿಲ್ಲ. ಆತನ ಅಜ್ಜಿ ಜನ್ಮದಿನಕ್ಕೆ ಆ ಲಾಟರಿ ಟಿಕೆಟ್​ಅನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದರು. ಯುವಕ ಮತ್ತು ಅವನ ತಾಯಿ ಮೀನುಗಾರಿಕೆಗೆ ತೆರಳುತ್ತಿದ್ದಾಗ ಲಾಟರಿ ಟಿಕೆಟ್ ಗೀಚಿದಾಗ ಒಂದು ಮಿಲಿಯನ್​ ಡಾಲರ್ ಗೆದ್ದಿರುವ ಬಗ್ಗೆ ಅರಿವಾಗಿದೆ.

    MORE
    GALLERIES

  • 47

    Lottery: ಬರ್ತ್‌ ಡೇಗೆ ಅಜ್ಜಿ ಕೊಟ್ಟ ಲಾಟರಿ ಟಿಕೆಟ್‌ಗೆ ಸಿಕ್ತು 8 ಕೋಟಿ! ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ 18ರ ಯುವಕ!

    ಲಾಟರಿಯಲ್ಲಿ ಒಂದು ಮಿಲಿಯನ್ ಡಾಲರ್ ಗೆದ್ದ ನಂತರ ನನಗೆ ತುಂಬಾ ಅಘಾತವಾಗಿತ್ತು. ಏಕೆಂದರೆ ನಾನು ಖಂಡಿತವಾಗಿಯೂ ಅಷ್ಟು ದೊಡ್ಡ ಮೊತ್ತವನ್ನು ಗೆಲ್ಲುವುದನ್ನ ನಿರೀಕ್ಷಿಸಿರಲಿಲ್ಲ ಎಂದು 8.2 ಕೋಟಿ ಗೆದ್ದ ಕಲೇಬ್ ಹೇಳಿದ್ದಾರೆ.

    MORE
    GALLERIES

  • 57

    Lottery: ಬರ್ತ್‌ ಡೇಗೆ ಅಜ್ಜಿ ಕೊಟ್ಟ ಲಾಟರಿ ಟಿಕೆಟ್‌ಗೆ ಸಿಕ್ತು 8 ಕೋಟಿ! ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ 18ರ ಯುವಕ!

    ಫಿಶಿಂಗ್​ಗೆ​​ ತೆರಳುತ್ತಿದ್ದರಿಂದ ಆಗ ನನ್ನ ಬಳಿ  ಗುರುತಿನ ಚೀಟಿ ಇರಲಿಲ್ಲ. ಟಿಕೆಟ್ ಕ್ಲೈಮ್​ ಮಾಡುವುದಕ್ಕಾಗಿ ಐಡಿ ಅವಶ್ಯಕತೆಯಿತ್ತು. ಮತ್ತೆ ಮನೆ ಕಡೆಗೆ ವಾಪಸ್​ ಕಾರು ತಿರುಗಿಸಿದೆವು. ಐಡಿ ತೆಗೆದುಕೊಂಡು ಹೋಗಿ ಹಣವನ್ನು ಪಡೆದುಕೊಂಡೆವು.

    MORE
    GALLERIES

  • 67

    Lottery: ಬರ್ತ್‌ ಡೇಗೆ ಅಜ್ಜಿ ಕೊಟ್ಟ ಲಾಟರಿ ಟಿಕೆಟ್‌ಗೆ ಸಿಕ್ತು 8 ಕೋಟಿ! ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ 18ರ ಯುವಕ!

    ಕ್ಯಾಲಿಫೋರ್ನಿಯಾ ಲಾಟರಿಯಲ್ಲಿ ಗೆದ್ದ ಹಣದಿಂದ ಕಾಲೇಜಿನ ಬಾಕಿ ಉಳಿದಿರುವ ಫೀಸ್​ ಕಟ್ಟುತ್ತೇನೆ ಮತ್ತು ಭವಿಷ್ಯಕ್ಕಾಗಿ ಹಣವನ್ನು ಉಳಿಸುತ್ತೇನೆ ಎಂದು ಹೇಳಿದ್ದಾರೆ.

    MORE
    GALLERIES

  • 77

    Lottery: ಬರ್ತ್‌ ಡೇಗೆ ಅಜ್ಜಿ ಕೊಟ್ಟ ಲಾಟರಿ ಟಿಕೆಟ್‌ಗೆ ಸಿಕ್ತು 8 ಕೋಟಿ! ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ 18ರ ಯುವಕ!

    ಇದೇ ರೀತಿಯ ಮತ್ತೊಂದು ಅದೃಷ್ಟದ ಘಟನೆ ಫ್ಲೋರಿಡಾದಲ್ಲೂ ನಡೆದಿತ್ತು.  ಕ್ಯಾನ್ಸರ್​ಗೆ ಒಳಗಾಗಿದ್ದ ಮಗಳ ಚಿಕಿತ್ಸೆಗೆ ತನ್ನೆಲ್ಲಾ ಉಳಿತಾಯದ ಹಣವನ್ನು ಖರ್ಚು ಮಾಡಿದ್ದ ವೃದ್ಧೆಯೊಬ್ಬರು ಬರೋಬ್ಬರಿ 16 ಕೋಟಿ ಗೆದ್ದಿದ್ದರು. ಆ ಮಹಿಳೆಯ ಅದೃಷ್ಟವೆಂದರೆ ಆಕೆ ಖರೀದಿಸಿದ್ದ ಟಿಕೆಟ್​ ಆ ಶಾಪ್​ನಲ್ಲಿದ್ದ ಕೊನೆಯ ಟಿಕೆಟ್ ಆಗಿತ್ತು.

    MORE
    GALLERIES