ಕೇರಳ - ತಮಿಳುನಾಡು ಗಡಿಯ ಸೇತುವೆ ಮೇಲೆ ದಾಂಪತ್ಯ ಸೇತುವೆ ನಿರ್ಮಿಸಿದ ನವಜೋಡಿ
ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಆದರೆ ಮದುವೆ ನ್ಯಾಷನಲ್ ಹೈವೇನಲ್ಲಿ ಕೂಡ ನಿಶ್ಚಯವಾಗಲು ಸಾಧ್ಯವಿದೆ ಎಂದು ತೋರಿಸಿಕೊಟ್ಟಿದ್ದಾರೆ ಕೇರಳ-ತಮಿಳುನಾಡಿನ ಈ ಜೋಡಿ. ಕೇರಳ- ತಮಿಳುನಾಡಿನ ನವಜೋಡಿ ಗಡಿಯಲ್ಲಿನ ಸೇತುವೆ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಆದರೆ ಮದುವೆ ನ್ಯಾಷನಲ್ ಹೈವೇನಲ್ಲಿ ಕೂಡ ನಿಶ್ಚಯವಾಗಲು ಸಾಧ್ಯವಿದೆ ಎಂದು ತೋರಿಸಿಕೊಟ್ಟಿದ್ದಾರೆ ಕೇರಳ-ತಮಿಳುನಾಡಿನ ಈ ಜೋಡಿ.
2/ 11
ಲಾಕ್ಡೌನ್ನಿಂದಾಗಿ ಸಾಕಷ್ಟು ಮದುವೆಗಳು ಮುಂದಕ್ಕೆ ಹೋಗಿವೆ, ಎಲ್ಲ ಸಿದ್ಧತೆಗಳೂ ಆಗಿದ್ದ ಮದುವೆಗಳು ತಾತ್ಕಾಲಿಕವಾಗಿ ನಿಂತುಹೋಗಿವೆ. ಕೊರೋನಾದಿಂದಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಲು ಕೂಡ ಕಷ್ಟಪಡುವಂತಾಗಿದೆ. ಇದೇ ಕಾರಣಕ್ಕೆ ಕೇರಳ- ತಮಿಳುನಾಡಿನ ನವಜೋಡಿ ಗಡಿಯಲ್ಲಿನ ಸೇತುವೆ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
3/ 11
ಕೇರಳ- ತಮಿಳುನಾಡು ಗಡಿಯಾಗಿರುವ ಇಡುಕ್ಕಿ ಜಿಲ್ಲೆಯ ಚಿನ್ನಾರ್ನಲ್ಲಿ ಸೇತುವೆಯ ಮೇಲೆ ಎರಡೂ ರಾಜ್ಯಗಳ ವಧುವರರ ಕುಟುಂಬಸ್ಥರು ಸೇರಿ ರಸ್ತೆಯಲ್ಲೇ ಮದುವೆ ಮಾಡಿಸಿದ್ದಾರೆ. ಎರಡೂ ರಾಜ್ಯಗಳ ಅಧಿಕಾರಿಗಳ ಒಪ್ಪಿಗೆ ಪಡೆದು ಈ ಮದುವೆ ಮಾಡಿಸಲಾಗಿದೆ.
4/ 11
ಕೇರಳದ ಗಡಿಯಲ್ಲಿರುವ ಸೇತುವೆ ಈ ಅಪರೂಪದ ಮದುವೆಗೆ ಸಾಕ್ಷಿಯಾಯಿತು. ಚಿನ್ನಾರ್ ವನ್ಯಜೀವಿ ಅಭಯಾರಣ್ಯದ ಸೇತುವೆಯಲ್ಲಿ ಯಾವುದೇ ಪುರೋಹಿತರಿಲ್ಲದೆ, ಕುಟುಂಬಸ್ಥರು ಹಾಗೂ ಪೊಲೀಸರು, ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ಮದುವೆ ನಡೆಯಿತು.
5/ 11
ಕೇರಳದ ಮಟ್ಟುಪೆಟ್ಟಿಯ ಶೇಖರ್-ಶಾಂತಲಾ ಅವರ ಮಗಳು ಪ್ರಿಯಾಂಕಾ, ತಮಿಳುನಾಡಿನ ಕೊಯಮತ್ತೂರಿನ ಮೂರ್ತಿ-ಭಾಗ್ಯಲಕ್ಷ್ಮೀ ಅವರ ಮಗ ರಾಬಿನ್ಸನ್ ಇಬ್ಬರೂ ನಡುರಸ್ತೆಯಲ್ಲಿ ಮದುವೆ ಆಗಿದ್ದಾರೆ.
6/ 11
ಮಾರ್ಚ್ 22ರಂದು ಇವರಿಬ್ಬರ ಮದುವೆ ನಡೆಯಬೇಕಿತ್ತು. ಆದರೆ, ಲಾಕ್ಡೌನ್ನಿಂದಾಗಿ ಆ ಮದುವೆಯನ್ನು ಮುಂದೂಡಲಾಗಿತ್ತು.
7/ 11
ಹೀಗಾಗಿ, ಸೋಮವಾರ ಈ ಮದುವೆಗೆ ಉತ್ತಮವಾದ ಮುಹೂರ್ತ ಇರುವುದಾಗಿ ಹೇಳಿದ್ದರಿಂದ ಸರಳವಾಗಿ ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು.
8/ 11
ಯಾವುದೇ ವೇದಿಕೆಯಿಲ್ಲದೆ, ಮಂತ್ರೋಚ್ಛಾರವಿಲ್ಲದೆ, ಪುರೋಹಿತರಿಲ್ಲದೆ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ವಧು-ವರರ ಹಾರ ಬದಲಾಯಿಸಿಕೊಂಡು ಮದುವೆಯಾದರು.
9/ 11
ಮದುವೆ ವೇಳೆ ಹೆಚ್ಚು ಜನರು ಸೇರಬಾರದು ಎಂಬ ನಿಯಮವಿರುವ ಕಾರಣ ಆರೋಗ್ಯ ಅಧಿಕಾರಿಗಳು, ಪೊಲೀಸರ ಸಮ್ಮುಖದಲ್ಲೇ ಮದುವೆ ಮಾಡಲಾಯಿತು.
10/ 11
ವರನ ಕಡೆಯ 2, ವಧುವಿನ ಕಡೆಯ 12 ಜನರು ಮದುವೆಯಲ್ಲಿ ಪಾಲ್ಗೊಂಡಿದ್ದರು
11/ 11
ಕೇರಳದ ವಧುವಿನ ಮನೆಯವರು ಮದುವೆಗೆ ತಮಿಳುನಾಡಿನ ಬಾರ್ಡರ್ ದಾಟಿ ಹೋಗಲು ಅನುಮತಿ ಸಿಗದ ಕಾರಣ ಗಡಿಯಲ್ಲೇ ಮದುವೆ ಮಾಡಲಾಯಿತು. ಕೊನೆಗೆ, ಮದುಮಗಳು ಪಾಸ್ ಪಡೆದು, ಕೊಯಮತ್ತೂರಿನಲ್ಲಿರುವ ಗಂಡನ ಮನೆಗೆ ತೆರಳಿದಳು.