Jammu and Kashmir: ಹಿಂದೂ ಯೋಧನ ಅಂತಿಮ ಸಂಸ್ಕಾರಕ್ಕೆ ಹೆಗಲು ಕೊಟ್ಟ ಮುಸ್ಲಿಮರು; ಕಾಶ್ಮೀರದಲ್ಲೊಂದು ಭಾವೈಕ್ಯತೆಯ ಸಂದೇಶ

ಜಮ್ಮು ಕಾಶ್ಮೀರ: ಇಲ್ಲಿನ ಕುಲ್ಗಾಮ್ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಸಿಐಎಸ್ಎಫ್‌ ಘಟಕದ ಯೋಧನ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಸ್ಥಳೀಯ ಮುಸ್ಲಿಮ್ ಸಮುದಾಯದ ಜನರು ಸಹಾಯ ಮಾಡಿ ಮಾನವೀಯತೆ ಮೆರೆದ ಘಟನೆ ನಡೆದಿದೆ.

First published:

  • 17

    Jammu and Kashmir: ಹಿಂದೂ ಯೋಧನ ಅಂತಿಮ ಸಂಸ್ಕಾರಕ್ಕೆ ಹೆಗಲು ಕೊಟ್ಟ ಮುಸ್ಲಿಮರು; ಕಾಶ್ಮೀರದಲ್ಲೊಂದು ಭಾವೈಕ್ಯತೆಯ ಸಂದೇಶ

    ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಶುಕ್ರವಾರ ಈ ದುರ್ಘಟನೆ ಸಂಭವಿಸಿದ್ದು, ಮೃತ ಯೋಧನನ್ನು ಬಲ್ಬೀರ್ ಸಿಂಗ್ (55) ಎಂದು ಗುರುತಿಸಲಾಗಿದೆ.

    MORE
    GALLERIES

  • 27

    Jammu and Kashmir: ಹಿಂದೂ ಯೋಧನ ಅಂತಿಮ ಸಂಸ್ಕಾರಕ್ಕೆ ಹೆಗಲು ಕೊಟ್ಟ ಮುಸ್ಲಿಮರು; ಕಾಶ್ಮೀರದಲ್ಲೊಂದು ಭಾವೈಕ್ಯತೆಯ ಸಂದೇಶ

    ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಬಲ್ಬೀರ್ ಸಿಂಗ್ ಗುರುವಾರ ಸಂಜೆ ತಮ್ಮ ಮನೆಯಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    MORE
    GALLERIES

  • 37

    Jammu and Kashmir: ಹಿಂದೂ ಯೋಧನ ಅಂತಿಮ ಸಂಸ್ಕಾರಕ್ಕೆ ಹೆಗಲು ಕೊಟ್ಟ ಮುಸ್ಲಿಮರು; ಕಾಶ್ಮೀರದಲ್ಲೊಂದು ಭಾವೈಕ್ಯತೆಯ ಸಂದೇಶ

    ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ಕರ್ಕನ್ ಪ್ರದೇಶದಲ್ಲಿನ ಅವರ ಮನೆಯಿದ್ದು, ಇತ್ತೀಚೆಗೆ ರಜೆಯ ಮೇಲೆ ಮನೆಗೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ.

    MORE
    GALLERIES

  • 47

    Jammu and Kashmir: ಹಿಂದೂ ಯೋಧನ ಅಂತಿಮ ಸಂಸ್ಕಾರಕ್ಕೆ ಹೆಗಲು ಕೊಟ್ಟ ಮುಸ್ಲಿಮರು; ಕಾಶ್ಮೀರದಲ್ಲೊಂದು ಭಾವೈಕ್ಯತೆಯ ಸಂದೇಶ

    ಅಮೃತಸರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅವರು, ಕಳೆದ ವರ್ಷ ಉಗ್ರಗಾಮಿಗಳಿಂದ ಹತ್ಯೆಗೀಡಾದ ತನ್ನ ಸಹೋದರನ ಮೊದಲ ಮರಣ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ರಜೆ ತೆಗೆದುಕೊಂಡಿದ್ದರು.

    MORE
    GALLERIES

  • 57

    Jammu and Kashmir: ಹಿಂದೂ ಯೋಧನ ಅಂತಿಮ ಸಂಸ್ಕಾರಕ್ಕೆ ಹೆಗಲು ಕೊಟ್ಟ ಮುಸ್ಲಿಮರು; ಕಾಶ್ಮೀರದಲ್ಲೊಂದು ಭಾವೈಕ್ಯತೆಯ ಸಂದೇಶ

    ಮೃತರ ಯೋಧ ಬಲ್ಬೀರ್ ಸಿಂಗ್ ಅವರ ಕುಟುಂಬವು ಗ್ರಾಮದಲ್ಲಿ ವಾಸಿಸುವ ಏಕೈಕ ಹಿಂದೂ ರಜಪೂತ ಕುಟುಂಬವಾಗಿದೆ. ಹೀಗಾಗಿ ಅವರ ಸ್ನೇಹಿತರು ಮತ್ತು ಮುಸ್ಲಿಮರು ಅಂತಿಮ ವಿಧಿಗಳನ್ನು ಮಾಡಲು ಸಹಾಯ ಮಾಡಿದ್ದಾರೆ ಎಂದು ಹೇಳಲಾಗಿದೆ.

    MORE
    GALLERIES

  • 67

    Jammu and Kashmir: ಹಿಂದೂ ಯೋಧನ ಅಂತಿಮ ಸಂಸ್ಕಾರಕ್ಕೆ ಹೆಗಲು ಕೊಟ್ಟ ಮುಸ್ಲಿಮರು; ಕಾಶ್ಮೀರದಲ್ಲೊಂದು ಭಾವೈಕ್ಯತೆಯ ಸಂದೇಶ

    ಮುಸ್ಲಿಂ ಸಮುದಾಯದ ಜನರು ಮೃತ ಯೋಧ ಬಲ್ಬೀರ್ ಸಿಂಗ್ ಅವರ 'ಅರತಿ'ಗೆ ಹೆಗಲು ಕೊಟ್ಟು ಶವಸಂಸ್ಕಾರಕ್ಕೆ ಕಟ್ಟಿಗೆ ವ್ಯವಸ್ಥೆ ಮಾಡಿದರು.

    MORE
    GALLERIES

  • 77

    Jammu and Kashmir: ಹಿಂದೂ ಯೋಧನ ಅಂತಿಮ ಸಂಸ್ಕಾರಕ್ಕೆ ಹೆಗಲು ಕೊಟ್ಟ ಮುಸ್ಲಿಮರು; ಕಾಶ್ಮೀರದಲ್ಲೊಂದು ಭಾವೈಕ್ಯತೆಯ ಸಂದೇಶ

    ಸಿಐಎಸ್ಎಫ್‌ನ ತಂಡವು ಸಹ ತಮ್ಮ ಸಹೋದ್ಯೋಗಿಗೆ ಪುಷ್ಪ ನಮನ ಸಲ್ಲಿಸಿತು. ಸಿಂಗ್ ಅವರ ಸಹೋದರ ಸತೀಶ್ ಕುಮಾರ್ ಸಿಂಗ್ ಅವರನ್ನು ಕಳೆದ ವರ್ಷ ಏಪ್ರಿಲ್ 13 ರಂದು ಉಗ್ರರು ಗುಂಡಿಕ್ಕಿ ಕೊಂದಿದ್ದರು.

    MORE
    GALLERIES