Liquor Seller: ಬಿಯರ್‌ ಬಾಟಲ್‌ಗೆ 10 ರೂಪಾಯಿ ಹೆಚ್ಚುವರಿ ವಸೂಲಿ ಮಾಡುತ್ತಿದ್ದ ಬಾರ್ ಮಾಲೀಕ ಅಂದರ್; 75000 ದಂಡ!

ಉತ್ತರ ಪ್ರದೇಶ: ಗ್ರಾಹಕರಿಂದ ಬಿಯರ್ ಬಾಟಲಿಗೆ 10 ರೂಪಾಯಿ ಹೆಚ್ಚುವರಿ ವಸೂಲಿ ಮಾಡುತ್ತಿದ್ದ ಮದ್ಯ ಮಾರಾಟಗಾರನಿಗೆ 75000 ಸಾವಿರ ರೂಪಾಯಿ ದಂಡ ವಿಧಿಸಿರೋದು ಮಾತ್ರವಲ್ಲದೇ ಆತನನ್ನು ಜೈಲಿಗೆ ಕಳಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಗ್ರಾಹಕರಿಂದ ಹೆಚ್ಚುವರಿ ಶುಲ್ಕ ಪಡೆಯುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

First published:

 • 17

  Liquor Seller: ಬಿಯರ್‌ ಬಾಟಲ್‌ಗೆ 10 ರೂಪಾಯಿ ಹೆಚ್ಚುವರಿ ವಸೂಲಿ ಮಾಡುತ್ತಿದ್ದ ಬಾರ್ ಮಾಲೀಕ ಅಂದರ್; 75000 ದಂಡ!

  ಉತ್ತರ ಪ್ರದೇಶದ ಬಿಸ್ರಾಖ್‌ನ ರೋಜಾ ಜಲಾಲ್‌ಪುರ ಪ್ರದೇಶದ ಮದ್ಯದ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಅನೇಕ ಮದ್ಯದಂಗಡಿ ಮಾಲೀಕ ರವಿ ಸಿಂಗ್‌, ಗ್ರಾಹಕರು ಖರೀದಿಸುವ ಮದ್ಯಕ್ಕೆ 10ರಿಂದ 20 ರೂಪಾಯಿ ತನಕ ಹೆಚ್ಚುವರಿ ವಸೂಲಿ ಮಾಡುತ್ತಿದ್ದ.

  MORE
  GALLERIES

 • 27

  Liquor Seller: ಬಿಯರ್‌ ಬಾಟಲ್‌ಗೆ 10 ರೂಪಾಯಿ ಹೆಚ್ಚುವರಿ ವಸೂಲಿ ಮಾಡುತ್ತಿದ್ದ ಬಾರ್ ಮಾಲೀಕ ಅಂದರ್; 75000 ದಂಡ!

  ಮದ್ಯ ಮಾರಾಟಗಾರ ರವಿ ಸಿಂಗ್, 120 ರೂಪಾಯಿಯ 500 ಎಂಎಲ್‌ನ ಕಿಂಗ್‌ಫಿಶರ್ ಸ್ಟ್ರಾಂಗ್ ಬಿಯರ್ ಅನ್ನು ಗ್ರಾಹಕರಿಗೆ 130 ರೂ.ಗೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಯಾರೋ ಬೇಸತ್ತು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು.

  MORE
  GALLERIES

 • 37

  Liquor Seller: ಬಿಯರ್‌ ಬಾಟಲ್‌ಗೆ 10 ರೂಪಾಯಿ ಹೆಚ್ಚುವರಿ ವಸೂಲಿ ಮಾಡುತ್ತಿದ್ದ ಬಾರ್ ಮಾಲೀಕ ಅಂದರ್; 75000 ದಂಡ!

  ಅಷ್ಟೇ ಅಲ್ಲದೆ, ಈ ಮದ್ಯದ ಅಂಗಡಿಯಲ್ಲಿ ಇತರೆ ಬ್ರ್ಯಾಂಡ್‌ನ ಮದ್ಯಗಳ ಮೇಲೂ ಹೆಚ್ಚುವರಿಯಾಗಿ 10 ರಿಂದ 20 ರೂಪಾಯಿ ಶುಲ್ಕ ವಿಧಿಸುತ್ತಿದ್ದರು ಎಂದು ದೂರು ಬಂದಿತ್ತು. ಹೀಗಾಗಿ ಈ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಕಾಯುತ್ತಿದ್ದರು.

  MORE
  GALLERIES

 • 47

  Liquor Seller: ಬಿಯರ್‌ ಬಾಟಲ್‌ಗೆ 10 ರೂಪಾಯಿ ಹೆಚ್ಚುವರಿ ವಸೂಲಿ ಮಾಡುತ್ತಿದ್ದ ಬಾರ್ ಮಾಲೀಕ ಅಂದರ್; 75000 ದಂಡ!

  ಅದರನ್ವಯ, ಅಬಕಾರಿ ಇಲಾಖೆ ಅಧಿಕಾರಿಗಳು ಗ್ರಾಹಕರ ಸೋಗಿನಲ್ಲಿ ವ್ಯಕ್ತಿಯೊಬ್ಬನನ್ನು ಕಳುಹಿಸಿ ಬಿಯರ್ ತರಲು ಕಳುಹಿಸಿದ್ದಾರೆ. ಆಗ ಅಂಗಡಿ ಮಾಲೀಕ ಹತ್ತು ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸುತ್ತಿದ್ದಂತೆ ರೆಡ್‌ ಹ್ಯಾಂಡ್ ಆಗಿ ಆತನನ್ನು ಹಿಡಿದಿದ್ದಾರೆ.

  MORE
  GALLERIES

 • 57

  Liquor Seller: ಬಿಯರ್‌ ಬಾಟಲ್‌ಗೆ 10 ರೂಪಾಯಿ ಹೆಚ್ಚುವರಿ ವಸೂಲಿ ಮಾಡುತ್ತಿದ್ದ ಬಾರ್ ಮಾಲೀಕ ಅಂದರ್; 75000 ದಂಡ!

  ಸದ್ಯ ಆರೋಪಿ ರವಿ ಸಿಂಗ್‌ನನ್ನು ಬಂಧಿಸಿರುವ ಪೊಲೀಸರು, ಆತನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ಬಳಿಕ ಜೈಲಿಗೆ ಕಳಿಸಿದ್ದಾರೆ. ಅಲ್ಲದೇ, ಬಾರ್ ಲೈಸೆನ್ಸ್ ಹೊಂದಿದ ಮಾಲೀಕನಿಗೆ 75000 ರೂಪಾಯಿ ದಂಡ ವಿಧಿಸಲಾಗಿದೆ.

  MORE
  GALLERIES

 • 67

  Liquor Seller: ಬಿಯರ್‌ ಬಾಟಲ್‌ಗೆ 10 ರೂಪಾಯಿ ಹೆಚ್ಚುವರಿ ವಸೂಲಿ ಮಾಡುತ್ತಿದ್ದ ಬಾರ್ ಮಾಲೀಕ ಅಂದರ್; 75000 ದಂಡ!

  ಇಷ್ಟೇ ಅಲ್ಲದೇ, ಆತನಿಗೆ ಎಚ್ಚರಿಕೆಯೂ ನೀಡಿರುವ ಅಧಿಕಾರಿಗಳು, ಮೊದಲ ಬಾರಿ ತಪ್ಪು ಮಾಡಿದ್ದಕ್ಕೆ ಈ ದಂಡ ವಿಧಿಸಲಾಗಿಎದ. ಇದು ಪುನರಾವರ್ತನೆಯಾದರೆ ಒಂದೂವರೆ ಲಕ್ಷ ದಂಡ ವಿಧಿಸಿ ಶಾಶ್ವತವಾಗಿ ಬಾರ್ ಲೈಸೆನ್ಸ್‌ ಅನ್ನು ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

  MORE
  GALLERIES

 • 77

  Liquor Seller: ಬಿಯರ್‌ ಬಾಟಲ್‌ಗೆ 10 ರೂಪಾಯಿ ಹೆಚ್ಚುವರಿ ವಸೂಲಿ ಮಾಡುತ್ತಿದ್ದ ಬಾರ್ ಮಾಲೀಕ ಅಂದರ್; 75000 ದಂಡ!

  ಅಬಕಾರಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ಮದ್ಯದಂಗಡಿ ಮಾಲೀಕರು ಅಥವಾ ಮಳಿಗೆಗಳ ವಿರುದ್ಧ ಕಠಿಣ ಕ್ರಮವನ್ನು ನಾವು ಕೈಗೊಳ್ಳುತ್ತೇವೆ. ಇದು ಮದ್ಯದ ಪರವಾನಗಿಯನ್ನು ರದ್ದುಗೊಳಿಸುವುದಕ್ಕೆ ಕಾರಣವಾಗಬಹುದು ಎಂದು ಡಿಇಒ ಹೇಳಿದ್ದಾರೆ.

  MORE
  GALLERIES