ಕಂಪೆನಿಗಳು ಕಾರ್ಮಿಕರನ್ನು ಅತಿಯಾಗಿ ದುಡಿಸುತ್ತಿರುವುದರ ವಿರುದ್ದ ಕಾರ್ಮಿಕ ಸಂಘಗಳು ಮುಷ್ಕರಕ್ಕೆ ಕರೆ ನೀಡಿದ್ದವು. ಈ ಸಂದರ್ಭದಲ್ಲಿ ಅಮೆರಿಕದ ಚಿಕಾಗೊನ ಮಾರುಕಟ್ಟೆಯಲ್ಲಿ ಬಾಂಬ್ನ್ನು ಸ್ಪೋಟಿಸಲಾಯಿತು. ಇದರಿಂದ ಕಾರ್ಮಿಕರು ಮತ್ತು ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟಿತು. ಈ ಸಂಘರ್ಷದಲ್ಲಿ ಅನೇಕ ಮಂದಿ ಸಾವನ್ನಪಿದ್ದರಲ್ಲದೆ, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡರು.