ಕೆಟಿಎಂ ಡ್ಯೂಕ್ 200ಸಿಸಿ: ಕಡಿಮೆ ಬೆಲೆಯ ಹೊಸ ಬೈಕ್

ಕಡಿಮೆ ಸಿಸಿ ಹೊಂದಿರುವ ಈ ಹೊಸ ಬೈಕ್ ಬಜಾಜ್ ಪಲ್ಸರ್ ಮತ್ತು ಟಿವಿಎಸ್ ಅಪಾಚೆ 200ಸಿಸಿ ಬೈಕುಗಳಿಗೆ ಭಾರೀ ಪೈಪೋಟಿ ನೀಡುವ ನಿರೀಕ್ಷೆಯಿದೆ.

 • News18
 • |
First published:

 • 16

  ಕೆಟಿಎಂ ಡ್ಯೂಕ್ 200ಸಿಸಿ: ಕಡಿಮೆ ಬೆಲೆಯ ಹೊಸ ಬೈಕ್

  ಹದಿ ಹರೆಯದ ಯುವಕರ ನೆಚ್ಚಿನ ಮೋಟಾರ್ ಬೈಕ್ ಎಂದು ಹೆಸರುವಾಸಿಯಾಗಿರುವ ಕೆಟಿಎಂ ಸಂಸ್ಥೆಯ ಡ್ಯೂಕ್​ನ ಹೊಸ ರೂಪ ಮಾರುಕಟ್ಟೆ ಪ್ರವೇಶಿಸಿದೆ. 200cc ಸಾಮರ್ಥ್ಯದ ಈ ಬೈಕ್​ನಲ್ಲಿ ಎಬಿಎಸ್​ ಬ್ರೇಕಿಂಗ್ ಸಿಸ್ಟಂ ಅಳವಡಿಸಿರುವುದು ವಿಶೇಷ.

  MORE
  GALLERIES

 • 26

  ಕೆಟಿಎಂ ಡ್ಯೂಕ್ 200ಸಿಸಿ: ಕಡಿಮೆ ಬೆಲೆಯ ಹೊಸ ಬೈಕ್

  ಕೆಟಿಎಂ ಡ್ಯೂಕ್ 200 ಬೈಕ್ 199.5cc ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಇಂಜಿನ್ ಹೊಂದಿದ್ದು, 24ಬಿಹೆಚ್‍ಪಿ ಮತ್ತು 19.6ಎನ್ಎಮ್ ಟಾರ್ಕ್​ನ್ನು ಉತ್ಪಾದಿಸಲಿದೆ.

  MORE
  GALLERIES

 • 36

  ಕೆಟಿಎಂ ಡ್ಯೂಕ್ 200ಸಿಸಿ: ಕಡಿಮೆ ಬೆಲೆಯ ಹೊಸ ಬೈಕ್

  ಈ ಹೊಸ ಬೈಕ್​ನಲ್ಲಿ 6 ಸ್ಪೀಡ್ ಗೇರ್​ ಬಾಕ್ಸ್ ಜೋಡಿಸಲಾಗಿದ್ದು, ಮುಂಭಾಗದಲ್ಲಿ ಯುಎಸ್‍ಡಿ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೋಶಕ್​ನ್ನುಅಳವಡಿಸಲಾಗಿದೆ.

  MORE
  GALLERIES

 • 46

  ಕೆಟಿಎಂ ಡ್ಯೂಕ್ 200ಸಿಸಿ: ಕಡಿಮೆ ಬೆಲೆಯ ಹೊಸ ಬೈಕ್

  ಅಲ್ಲದೆ ವೇಗದ ನಿಯಂತ್ರಣಕ್ಕೆ ಮುಂಭಾಗದಲ್ಲಿ 300 ಎಂಎಂ ಮತ್ತು ಹಿಂಭಾಗದಲ್ಲಿ 230ಎಂಎಂ ಡಿಸ್ಕ್ ಬ್ರೇಕ್‍ಗಳನ್ನು ಜೋಡಿಸಲಾಗಿದೆ. ಚಾಲಕರ ಸುರಕ್ಷೆತೆಯನ್ನು ಒತ್ತು ನೀಡಿರುವ ಕೆಟಿಎಂ ಡ್ಯುಯಲ್ ಚಾನಲ್ ಎಬಿಎಸ್​ನ್ನು ಈ ಬೈಕ್​ನಲ್ಲಿ ಅಳವಡಿಸಿದ್ದಾರೆ.

  MORE
  GALLERIES

 • 56

  ಕೆಟಿಎಂ ಡ್ಯೂಕ್ 200ಸಿಸಿ: ಕಡಿಮೆ ಬೆಲೆಯ ಹೊಸ ಬೈಕ್

  ಕಡಿಮೆ ಸಿಸಿ ಹೊಂದಿರುವ ಈ ಹೊಸ ಬೈಕ್ ಬಜಾಜ್ ಪಲ್ಸರ್ ಮತ್ತು ಟಿವಿಎಸ್ ಅಪಾಚೆ 200ಸಿಸಿ ಬೈಕುಗಳಿಗೆ ಭಾರೀ ಪೈಪೋಟಿ ನೀಡಲಿದೆ ಎನ್ನಲಾಗಿದೆ.

  MORE
  GALLERIES

 • 66

  ಕೆಟಿಎಂ ಡ್ಯೂಕ್ 200ಸಿಸಿ: ಕಡಿಮೆ ಬೆಲೆಯ ಹೊಸ ಬೈಕ್

  ಭಾರತದ ಮಾರುಕಟ್ಟೆಗೆ ಅನುಗುಣವಾಗಿ ಬಿಡುಗಡೆ ಮಾಡಿರುವ ಹೊಸ ಡ್ಯೂಕ್ 200cc ಬೈಕಿನ ದೆಹಲಿ ಎಕ್ಸ್​ ಶೋ ರೂಂ ಬೆಲೆ 1.60 ಲಕ್ಷ ರೂ.

  MORE
  GALLERIES