ಸಾರ್ವಜನಿಕ ವಲಯದ ಬ್ಯಾಂಕ್ಗಳ ವಿಲೀನ ಶೀಘ್ರದಲ್ಲಿಯೇ ನಡೆಯಲಿದ್ದು , ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ಅನ್ನು ವಿಲೀನ ಮಾಡಲಾಗಿದೆ. ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಒಂದಾಗಿವೆ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಂಧ್ರಾ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಗಳು ವಿಲೀನವಾಗಲಿದೆ.
ನಿಮ್ಮ ಬ್ಯಾಂಕ್ ಖಾತೆ ಬೇರೋಂದು ಬ್ಯಾಂಕ್ಜೊತೆ ವಿಲೀನವಾದರೂ ಕೆಲವು ದಿನಗಳ ಮಟ್ಟಿಗೆ ನಿಮ್ಮ ಚೆಕ್ ಬುಕ್ ಹಾಗೂ ಎಟಿಎಂ ಕಾರ್ಡ್ ಬಳಕೆ ಮಾಡಬಹುದು. ಬ್ಯಾಂಕ್ ಖಾತೆ ಬದಲಾದ ಕೂಡಲೇ ಬದಲಾದ ಬ್ಯಾಂಕ್ ಖಾತೆಯಿಂದ ಹೊಸ ಚೆಕ್ಬುಕ್ ಹಾಗೂ ಎಟಿಎಂ ಕಾರ್ಡ್ ಸಿಗಲಿದೆ. ಒಂದು ಬೇಳೆ ನೇರವಾಗಿ ನಿಮ್ಮ ಮನೆಗೆ ಪೋಸ್ಟ್ ಬರದಿದ್ದರೆ ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸುವುದು ಒಳಿತು