ನೈಜಿರಿಯಾದ ಮೃಗಾಲಯವೊಂದರ ಒಳಹೊಕ್ಕ ಪ್ರವಾಸಿಗನೋರ್ವ ಅಲ್ಲಿನ ಪ್ರಾಣಿಗಳನ್ನು ಕಂಡು ಬೆರೆಗಾಗಿದ್ದಾನೆ. ಆಹಾರವಿಲ್ಲದೆ ಬಳಲಿ ಅಸ್ಥಿಪಂಜರ ಕಾಣುವ ಕೆಲವು ಪ್ರಾಣಿಗಳ ಆ ಮೃಗಾಲಯದೊಳಕ್ಕೆ ನೋಡಲು ಸಿಕ್ಕಿದೆ. ಇದನ್ನು ಕಂಡ ಆತ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
2/ 13
ನೈಜಿರಿಯಾದ ಕಾಡನಾದಲ್ಲಿರುವ ಗಮ್ಜಿ ಗೇಟ್ ಮೃಗಾಲಯಕ್ಕೆ ಪ್ರವಾಸಿಗ ಭೇಟಿ ನೀಡಿದಾಗ ನೈಜ ಚಿತ್ರಣ ಬಯಲಾಗಿದೆ.
3/ 13
ಒಂದು ಡಾಲರ್ ನೀಡಿ ಮೃಗಾಲಯ ಪ್ರವೇಶಿಸಿದ್ದನು, ಸಿಂಹ, ಮೊಸಳೆ ಕೆಲವು ಪ್ರಾಣಿಗಳ ನೈಜ ದೃಶ್ಯವನ್ನು ಕಂಡು ತನ್ನ ಕ್ಯಾಮೆರಾದ ಮೂಲಕ ಫೋಟೋ ಸೆರೆಹಿಡಿದಿದ್ದಾನೆ.
4/ 13
ನಂತರ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾನೆ. ಅದರ ಜೊತೆಗೆ ಪ್ರಾಣಿಗಳನ್ನು ರಕ್ಷಿಸುವಂತೆ ವನ್ಯಜೀವಿ ಚಾರಿಟಿಗೆ ಮಾಹಿತಿ ನೀಡಿದ್ದಾನೆ.
5/ 13
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ವನ್ಯಜೀವಿ ಚಾರಿಟಿ ಹಾಗೂ ಮೆನ್ಸ್ ಡಿಸ್ಕವರಿ ತಂಡ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಅಪೌಷ್ಠಿಕತೆಯಲ್ಲಿ ಬಳಲುತ್ತಿರುವ ಸಿಂಹವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
6/ 13
ಸಿಂಹವನ್ನು ಕಾಡಿಗೆ ಬಿಡುವ ಮೊದಲು ಅದರ ಆರೋಗ್ಯವನ್ನು ಸರಿಪಡಿಸಿ ನಂತರ ಕಳುಹಿಸಲು ವನ್ಯಜೀವಿ ಚಾರಿಟಿ ಮುಂದಾಗಿದೆ.
7/ 13
ಆದರೆ ಅದಕ್ಕೂ ಮೊದಲು ಸಿಂಹ ಅಷ್ಟು ದಿನಗಳ ಕಾಲ ಬದುಕುಳಿಯುತ್ತಾ ಎಂಬುದು ನೆಟ್ಟಿಗರ ಪ್ರಶ್ನೆಯಾಗಿದೆ.